• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬೈ ಏರ್‌ಪೋರ್ಟ್‌ನಲ್ಲಿ ಈ ದೇಶಗಳ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

|
Google Oneindia Kannada News

ಮುಂಬೈ, ಸಪ್ಟೆಂಬರ್ 2: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ನಿಟ್ಟಿನಲ್ಲಿ ಮುಂಬೈ ಮಹಾನಗರ ಪಾಲಿಕೆಯು ಈಗಾಗಲೇ ಸಾಕಷ್ಟು ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ. ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಪ್ರತಿಯೊಬ್ಬ ವಿದೇಶಿಗರಿಗೂ RT-PCR ಪರೀಕ್ಷೆ ವರದಿಯನ್ನು ಕಡ್ಡಾಯಗೊಳಿಸಲಾಗಿದೆ.

ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಸೋಂಕಿನ C.1.2 ರೂಪಾಂತರ ತಳಿಯ ಆತಂಕ ಹೆಚ್ಚಾಗಿರುವ ಹಿನ್ನೆಲೆ ಕಠಿಣ ಮಾರ್ಗಸೂಚಿಗಳನ್ನು ಜಾರಿಗೆ ತರಲು ಪಾಲಿಕೆ ಮುಂದಾಗಿದೆ. ಕೊವಿಡ್-19 ಹೊಸ ಮಾರ್ಗಸೂಚಿಗಳ ಪ್ರಕಾರ, ವಿಮಾನದಲ್ಲಿ ಪ್ರಯಾಣಿಸುವ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಸಾಂಸ್ಥಿಕ ದಿಗ್ಬಂಧನವನ್ನು ರದ್ದುಗೊಳಿಸಲಾಗಿದೆ. ಅದರ ಬದಲಿಗೆ ಅಂತರಾಷ್ಟ್ರೀಯ ಪ್ರಯಾಣಿಕರಿಗಾಗಿ ಕೆಲವು ಹೊಸ ಮಾರ್ಗಸೂಚಿಗಳನ್ನು ವಿಧಿಸಲಾಗುತ್ತದೆ.

ರೂಪಾಂತರಿ ರಾಕ್ಷಸ: ಕೊವಿಡ್-19 ಲಸಿಕೆ ಹಾಕಿಸಿಕೊಂಡವರಿಗೂ ಈ ರೋಗಾಣು ಮಾರಕ!ರೂಪಾಂತರಿ ರಾಕ್ಷಸ: ಕೊವಿಡ್-19 ಲಸಿಕೆ ಹಾಕಿಸಿಕೊಂಡವರಿಗೂ ಈ ರೋಗಾಣು ಮಾರಕ!

ಮುಂಬೈ ಮಹಾನಗರ ಪಾಲಿಕೆಯು ಕೊರೊನಾವೈರಸ್ ಸೋಂಕಿನ ಹೊಸ ರೂಪಾಂತರ ವೈರಸ್ ನಿಯಂತ್ರಿಸಲು ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲು ಮುಂದಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಯಾವ ಮಾರ್ಗಸೂಚಿ ಮತ್ತು ಶಿಷ್ಟಾಚಾರಗಳನ್ನು ವಿಧಿಸಲಾಗಿದೆ ಎಂಬುದನ್ನು ಮುಂದೆ ಪಟ್ಟಿ ಮಾಡಲಾಗಿದೆ.

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ:

* ಯುಕೆ, ಯುರೋಪ್, ಮಧ್ಯಪ್ರಾಚ್ಯ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಚೀನಾ, ಮಾರಿಷಸ್, ನ್ಯೂಜಿಲ್ಯಾಂಡ್, ಜಿಂಬಾಬ್ವೆ ರಾಷ್ಟ್ರಗಳಿಂದ ಗಳಿಂದ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ RT-PCR ಪರೀಕ್ಷೆ ಕಡ್ಡಾಯ.

* ಸಪ್ಟೆಂಬರ್ 3ರ ನಂತರದಲ್ಲಿ ಎರಡೂ ಡೋಸ್ ಲಸಿಕೆ ಪಡೆದುಕೊಂಡವರು ಮತ್ತು 65 ವರ್ಷ ಮೇಲ್ಪಟ್ಟವರು ಎಂಬ ಯಾವುದೇ ರೀತಿ ವಿನಾಯಿತಿ ಇರುವುದಿಲ್ಲ

* ಎಲ್ಲಾ ಪ್ರಯಾಣಿಕರು 14 ದಿನಗಳವರೆಗೂ ಗೃಹ ದಿಗ್ಬಂಧನದಲ್ಲಿ ಇರುವುದು ಕಡ್ಡಾಯ

* ಯುಕೆ, ಯುರೋಪ್, ಮಧ್ಯಪ್ರಾಚ್ಯ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಚೀನಾ, ಮಾರಿಷಸ್, ನ್ಯೂಜಿಲ್ಯಾಂಡ್, ಜಿಂಬಾಬ್ವೆ ಹೊರತುಪಡಿಸಿದಂತೆ ಎಲ್ಲಾ ಇತರ ಪ್ರಯಾಣಿಕರು ಮುಂಬೈ ವಿಮಾನ ನಿಲ್ದಾಣದಿಂದ ನಿರ್ಗಮಿಸಬೇಕಾದರೆ 72 ಗಂಟೆಗಳ ಒಳಗೆ ನಡೆಸಿದ RT-PCR ಪರೀಕ್ಷೆಗೆ ನೆಗೆಟಿವ್ ವರದಿಯು ಕಡ್ಡಾಯವಾಗಿರುತ್ತದೆ.

ಜಾಗತಿಕ ಮಟ್ಟದಲ್ಲಿ C.1.2 ರೂಪಾಂತರ ವೈರಸ್ ಭಯ:

ದಕ್ಷಿಣ ಆಫ್ರಿಕಾದ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಕಮ್ಯುನಿಕೇಬಲ್ ಡಿಸೀಸಸ್ ಮತ್ತು ಕ್ವಾಜುಲು-ನಟಲ್ ರಿಸರ್ಚ್ ಇನೋವೇಷನ್ ಆಫ್ ಸೀಕ್ವೆನ್ಸಿಂಗ್ ಪ್ಲಾಟ್ ಫಾರ್ಮ್ ತಜ್ಞರು ಕೊವಿಡ್-19 ರೂಪಾಂತರದ ಬಗ್ಗೆ ಎಚ್ಚರಿಸಿದ್ದಾರೆ. ಕಾಳಜಿಯ ರೂಪಾಂತರ ವೈರಸ್ ಆಗಿರುವ C.1.2 ದಕ್ಷಿಣ ಆಫ್ರಿಕಾದಲ್ಲಿ ಮೇ ತಿಂಗಳಿನಲ್ಲಿ ಮೊದಲ ಬಾರಿಗೆ ವರದಿಯಾಗಿದೆ ಎಂದಿದ್ದಾರೆ.

ಕೊರೊನಾವೈರಸ್ ಸೋಂಕಿನ C.1.2 ರೂಪಾಂತರ ತಳಿಯು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಆದರೆ ಇದೀಗ ಅದೇ ರೂಪಾಂತರ ವೈರಸ್ಹಲವು ರಾಷ್ಟ್ರಗಳಿಗೆ ಹರಡಿದೆ. ದಕ್ಷಿಣ ಆಫ್ರಿಕಾದಲ್ಲಿ ಪ್ರತಿ ತಿಂಗಳು C.1.2 ರೂಪಾಂತರ ತಳಿಯ ಸೋಂಕು ಅಂಟಿಕೊಂಡವರ ಸಂಖ್ಯೆ ಕ್ರಮೇಣ ಏರಿಕೆಯಾಗುತ್ತಿದೆ. 0.2ರಷ್ಟಿದ್ದ ರೂಪಾಂತರ ಸೋಂಕಿತ ಪ್ರಕರಣಗಳ ಪ್ರಮಾಣವು ಜೂನ್ ತಿಂಗಳಿನಲ್ಲಿ 1.6ರಷ್ಟಾಗಿದ್ದು, ಅದು ಜುಲೈ ವೇಳೆಗೆ ಶೇ.2ರಷ್ಟು ಏರಿಕೆಯಾಗಿತ್ತು. ದೇಶದಲ್ಲಿ ಇದೇ ಮೊದಲು ಪತ್ತೆ ಆಗಿರುವ ಬೀಟಾ ಮತ್ತು ಡೆಲ್ಟಾ ರೂಪಾಂತರಗಳಂತೆ ಈ ರೋಗಾಣು ಪ್ರಮಾಣ ಹೆಚ್ಚಳವಾಗಲಿದೆ.

ಭಾರತದಲ್ಲಿ ಈವರೆಗೆ C.1.2 ಪ್ರಕರಣ ಪತ್ತೆಯಾಗಿಲ್ಲ:

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಆತಂಕದ ನಡುವೆ ರೂಪಾಂತರ ರೋಗಾಣುವಿನ C.1.2 ತಳಿಯ ಹೊಸ ಪ್ರಕರಣಗಳು ದೇಶದಲ್ಲಿ ಕಂಡು ಬಂದಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

English summary
RT-PCR Test, 14-day Home Quarantine is compulsory: New Guidelines to international passengers who came from these nations in Mumbai airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X