ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಭ ಸುದ್ದಿ ನೀಡಿದ ಅಧ್ಯಯನ: ಮೇ 21 ಕ್ಕೆ ಭಾರತದಲ್ಲಿ ಕೊರೊನಾ ಮಾಯ!

|
Google Oneindia Kannada News

ಮುಂಬೈ, ಮೇ 1: ಭಾರತದಲ್ಲಿ ಇಲ್ಲಿಯವರೆಗೂ 35,026 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಡೆಡ್ಲಿ ಕೊರೊನಾ ವೈರಸ್ ಗೆ 1,159 ಜನರು ಈಗಾಗಲೇ ಪ್ರಾಣ ಬಿಟ್ಟಿದ್ದಾರೆ.

ದಿನದಿಂದ ದಿನಕ್ಕೆ ಕೊರೊನಾ ಹಾವಳಿ ಹೆಚ್ಚುತ್ತಲೇ ಇರುವುದರಿಂದ, ಭಾರತದಲ್ಲಿ ಕೊರೊನಾ ಕೊನೆ ಯಾವಾಗ ಆಗುತ್ತೋ ಎಂಬ ಆತಂಕ ಪ್ರತಿಯೊಬ್ಬರಿಗೂ ಕಾಡುತ್ತಿದೆ. ಹೀಗಿರುವಾಗಲೇ, ಮುಂಬೈ ಸ್ಕೂಲ್ ಆಫ್ ಎಕೊನಾಮಿಕ್ಸ್ ಅಂಡ್ ಪಬ್ಲಿಕ್ ಪಾಲಿಸಿ ಒಂದು ಅಧ್ಯಯನ ಕೈಗೊಂಡಿತ್ತು. ಕೊರೊನಾ ನಾಗಾಲೋಟಕ್ಕೆ ಭಾರತದಲ್ಲಿ ಮೇ 21 ರಂದು ಬ್ರೇಕ್ ಬೀಳಲಿದೆ ಎಂಬ ಶುಭ ಸುದ್ದಿ ಅಧ್ಯಯನದಿಂದ ತಿಳಿದುಬಂದಿದೆ..

ಕೊರೊನಾ ನರಕದಿಂದ ಪಾರಾಗಲು, ನೆಮ್ಮದಿ ನೆಲೆಸಲು ಇನ್ನೂ 10 ವರ್ಷ ಬೇಕೆ?ಕೊರೊನಾ ನರಕದಿಂದ ಪಾರಾಗಲು, ನೆಮ್ಮದಿ ನೆಲೆಸಲು ಇನ್ನೂ 10 ವರ್ಷ ಬೇಕೆ?

ಮಾರಣಾಂತಿಕ ಕೊರೊನಾ ಕಟ್ಟಿಹಾಕಲು ಕಠಿಣ ಕ್ರಮಗಳನ್ನು ಕೈಗೊಂಡರೆ, ಮೇ 7 ರ ಹೊತ್ತಿಗೆ ಭಾರತದ ಹಲವು ರಾಜ್ಯಗಳಲ್ಲಿ ಕೊರೊನಾ ಅಟ್ಟಹಾಸ ನಿಯಂತ್ರಣಕ್ಕೆ ಬರುತ್ತದೆ ಎಂಬ ಅಂಶ ''ದಿ ಎಂಡ್ ಈಸ್ ನಿಯರ್: ಕೊರೊನಾ ಸ್ಟೆಬಿಲೈಝಿಂಗ್ ಇನ್ ಮೋಸ್ಟ್ ಆಫ್ ಇಂಡಿಯನ್ ಸ್ಟೇಟ್ಸ್'' ಅಧ್ಯಯನದಲ್ಲಿ ಉಲ್ಲೇಖವಾಗಿದೆ.

ಮೇ 21 ರೊಳಗೆ ಕೊರೊನಾ ಹರಡುವುದನ್ನು ನಿಲ್ಲಿಸಬಹುದು

ಮೇ 21 ರೊಳಗೆ ಕೊರೊನಾ ಹರಡುವುದನ್ನು ನಿಲ್ಲಿಸಬಹುದು

ನೀರಜ್ ಹಟೇಕರ್ ಮತ್ತು ಪಲ್ಲವಿ ಬೆಲ್ಹೇಕರ್ ಅಧ್ಯಯನವನ್ನು ಕೈಗೊಂಡಿದ್ದು, ಇದಕ್ಕಾಗಿ ಚೀನಾ, ಥೈಲ್ಯಾಂಡ್, ದಕ್ಷಿಣ ಕೊರಿಯಾ, ನ್ಯೂಜೀಲ್ಯಾಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ವೈರಾಣುಗಳು ಮಲ್ಟಿಪ್ಲೈ ಆದ ವಿಧಾನದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದರು. ಇವರ ಪ್ರಕಾರ, ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಮೇ 21 ರೊಳಗೆ ಇಡೀ ಭಾರತದಲ್ಲಿ ಕೊರೊನಾ ವೈರಸ್ ಹರಡುವುದನ್ನು ನಿಲ್ಲಿಸಬಹುದು.

ಅಧ್ಯಯನ ನೀಡಿರುವ ಎಚ್ಚರಿಕೆ

ಅಧ್ಯಯನ ನೀಡಿರುವ ಎಚ್ಚರಿಕೆ

ಮೇ 21 ರೊಳಗೆ ಕೊರೊನಾ ವೈರಸ್ ಅನ್ನು ಕಟ್ಟಿಹಾಕಬೇಕು ಅಂದ್ರೆ ದೊಡ್ಡ ಪ್ರಮಾಣದಲ್ಲಿ ವಲಸೆ ಕಾರ್ಮಿಕರ ಚಲನೆ ನಿಲ್ಲಬೇಕು. ಇಲ್ಲಾಂದರೆ, ಇನ್ನಷ್ಟು ತೊಡಕು ಉಂಟಾಗುತ್ತದೆ ಎಂದೂ ಅಧ್ಯಯನದ ಮೂಲಕ ಎಚ್ಚರಿಸಲಾಗಿದೆ.

ಕೊರೊನಾ ಯುದ್ಧ ಗೆದ್ದ ನ್ಯೂಜಿಲ್ಯಾಂಡ್ ಕೈಗೊಂಡ ಶಿಸ್ತು ಕ್ರಮಗಳೇನು?ಕೊರೊನಾ ಯುದ್ಧ ಗೆದ್ದ ನ್ಯೂಜಿಲ್ಯಾಂಡ್ ಕೈಗೊಂಡ ಶಿಸ್ತು ಕ್ರಮಗಳೇನು?

ನೀರಜ್ ಹಟೇಕರ್ ಹೇಳಿದ್ದೇನು?

ನೀರಜ್ ಹಟೇಕರ್ ಹೇಳಿದ್ದೇನು?

''ಕೋವಿಡ್-19 ಸೋಂಕುಗಳು ಸದಾ ಏರಿಕೆಯ ಮಾರ್ಗವನ್ನೇ ಅನುಸರಿಸುತ್ತದೆ ಎಂಬುದು ನಿಜವಲ್ಲ. ಆರಂಭದಲ್ಲಿ ಸೋಂಕು ಹರಡುವ ವೇಗ ಹೆಚ್ಚಿರುತ್ತದೆ. ಬಳಿಕ ಕಡಿಮೆಯಾಗುತ್ತದೆ'' ಎಂದು ನೀರಜ್ ಹಟೇಕರ್ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಸೋಂಕಿನ ಪ್ರಕರಣಗಳು

ಮಹಾರಾಷ್ಟ್ರದಲ್ಲಿ ಸೋಂಕಿನ ಪ್ರಕರಣಗಳು

ಅಧ್ಯಯನದ ಪ್ರಕಾರ, ಮಹಾರಾಷ್ಟ್ರದಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ 24,222 ತಲುಪಲಿದೆ. ಮೇ 21 ರ ವೇಳೆಗೆ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತ ಹೊಸ ಪ್ರಕರಣಗಳು ಪತ್ತೆಯಾಗುವುದಿಲ್ಲ. ಹಾಗೇ, ಗುಜರಾತ್ ನಲ್ಲಿ ಸೋಂಕಿತರ ಸಂಖ್ಯೆ 4,833 ತಲುಪಲಿದ್ದು, ಮೇ 7 ರ ವೇಳೆಗೆ ಹೊಸ ಸೋಂಕಿತ ಪ್ರಕರಣಗಳಿಗೆ ಬ್ರೇಕ್ ಬೀಳಲಿದೆ.

ಓಹ್.. ಜುಲೈನಲ್ಲಿ 'ಕೊರೊನಾ-ದಿ ಎಂಡ್': ಸಂಶೋಧಕರ ಈ ಮಾತು ನಿಜವಾಗಲಿ!ಓಹ್.. ಜುಲೈನಲ್ಲಿ 'ಕೊರೊನಾ-ದಿ ಎಂಡ್': ಸಂಶೋಧಕರ ಈ ಮಾತು ನಿಜವಾಗಲಿ!

ಲಾಕ್ ಡೌನ್ ಸಡಿಲಗೊಂಡರೆ?

ಲಾಕ್ ಡೌನ್ ಸಡಿಲಗೊಂಡರೆ?

ಸದ್ಯ ಲಾಕ್ ಡೌನ್ ಸೇರಿದಂತೆ ಹಲವು ನಿರ್ಬಂಧಗಳು ಚಾಲ್ತಿಯಲ್ಲಿ ಇರುವುದರಿಂದ, ಮೇ 21 ರ ವೇಳೆಗೆ ಹೊಸ ಪ್ರಕರಣಗಳು ಪತ್ತೆಯಾಗುವುದಿಲ್ಲ ಎಂದು ಅಧ್ಯಯನದ ಮೂಲಕ ಅಂದಾಜಿಸಲಾಗಿದೆ. ಆದರೆ, ವಲಸೆ ಕಾರ್ಮಿಕರ ಚಾಲನೆ ಶುರುವಾದರೆ, ಲಾಕ್ ಡೌನ್ ಸಡಿಲಗೊಂಡರೆ.. ಭಾರತದಲ್ಲಿ ಕೊರೊನಾ ನಿರೀಕ್ಷಿತ ಕೊನೆಯ ದಿನಾಂಕ ಇನ್ನೂ ಮುಂದಕ್ಕೆ ಹೋಗಬಹುದು.

English summary
New Coronavirus Cases could stop by May 21st: Study says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X