ನವಾಬ್ ಮಲಿಕ್ ಹಂಚಿಕೊಂಡ ದೂರವಾಣಿ ಸಂಭಾಷಣೆಯಲ್ಲಿ ಏನಿದೆ?
ಮುಂಬೈ ನವೆಂಬರ್ 7: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಸ್ಯಾನ್‌ವಿಲ್ಲೆ ಆಡ್ರಿಯನ್ ಡಿಸೋಜಾ ಅಲಿಯಾಸ್ ಸ್ಯಾಮ್ ಡಿಸೋಜಾ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಯ ನಡುವೆ ನಡೆದ ದೂರವಾಣಿ ಸಂಭಾಷಣೆಯನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನಕ್ಕೆ ಕಾರಣವಾದ ಮುಂಬೈ ಕ್ರೂಸ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಮ್ ಡಿಸೋಜಾ ಹೆಸರು ಹೊರಹೊಮ್ಮಿದೆ.
ಆಡಿಯೋದಲ್ಲಿ ಸ್ಯಾನ್‌ವಿಲ್ಲೆ ಎಂದು ಪರಿಚಯಿಸಿಕೊಂಡ ಸ್ಯಾಮ್ ಡಿಸೋಜಾ ಅವರು ಎನ್‌ಸಿಬಿ ಅಧಿಕಾರಿ ವಿವಿ ಸಿಂಗ್‌ಗೆ ಕರೆ ಮಾಡಿದ್ದಾರೆ. ಬಾಂದ್ರಾದಲ್ಲಿ ವಾಸಿಸುತ್ತಿದ್ದ ಸ್ಯಾನ್‌ವಿಲ್ಲೆ, ತನ್ನ ಮನೆಯಲ್ಲಿ ಏಜೆನ್ಸಿಯಿಂದ ನೀಡಲಾದ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ತಾನು ಕರೆ ಮಾಡುತ್ತಿದ್ದೇನೆ ಎಂದು ಹೇಳುವುದನ್ನು ಕೇಳಬಹುದು. NCB ಅಧಿಕಾರಿಯು ತಕ್ಷಣವೇ ವರದಿ ಮಾಡಲು ಕೇಳಿದಾಗ, ಸ್ಯಾಮ್ ಡಿಸೋಜಾ ಅವರು ಆ ಸಮಯದಲ್ಲಿ ಮುಂಬೈನಿಂದ ಹೊರಗಿದ್ದ ಕಾರಣ ಹೆಚ್ಚಿನ ಸಮಯ ಕೇಳಿದರು. ಡಿಸೋಜಾ ಸೋಮವಾರ ಬರುವುದಾಗಿ ಹೇಳಿದರು. ಆದರೆ ವಿವಿ ಸಿಂಗ್ ಅವರು ಬುಧುವಾರ ಬರಲು ಹೇಳುತ್ತಾರೆ. NCB ಅಧಿಕಾರಿ ಸಭೆಗೆ ತನ್ನ ಫೋನ್ ತರಲು ಸ್ಯಾಮ್‌ಗೆ ಹೇಳಿದರು ಮತ್ತು ಫೋನ್ ಬದಲಾಯಿಸದಂತೆ ಎಚ್ಚರಿಕೆ ನೀಡಿದರು. ಎನ್‌ಸಿಪಿ ನಾಯಕ ನವಾಬ್ ಮಲಿಕ್ ಭಾನುವಾರ ಆಡಿಯೋ ಸಂಭಾಷಣೆಯನ್ನು ಟ್ವೀಟ್ ಮಾಡಿದ್ದಾರೆ. ಮಹಾರಾಷ್ಟ್ರ ಸಚಿವರು ಸ್ಯಾಮ್ ಡಿಸೋಜಾ ಅವರಿಗೆ ನೀಡಲಾದ ನೋಟಿಸ್ ಅನ್ನು ಪೋಸ್ಟ್ ಮಾಡಿದ್ದಾರೆ.
ಸ್ಯಾಮ್ ಡಿಸೋಜಾ ಯಾರು?
'ಸ್ಯಾಮ್ ಡಿಸೋಜಾ ಮಹಾರಾಷ್ಟ್ರದ ಮಾತ್ರವೇ ಅಲ್ಲ ಭಾರತದ ದೊಡ್ಡ ಅಕ್ರಮ ಹಣ ವರ್ಗಾವಣೆ ಮಾಡುವ ವ್ಯಕ್ತಿ. ಅಕ್ರಮ ಚಟುವಟಿಕೆಗಳಿಂದ ಹಣ ಸಂಪಾದನೆ ಮಾಡುವುದೇ ಆತನ ಕಾರ್ಯ. ಆತನಿಗೆ ರಾಜಕಾರಣಿಗಳ, ಐಎಎಸ್-ಐಪಿಎಸ್ ಅಧಿಕಾರಿಗಳ ಸ್ನೇಹವಿದೆ. ಎನ್‌ಸಿಬಿ ಅಧಿಕಾರಿಗಳ ಸ್ನೇಹವೂ ಇವೆ. ಅವರೆಲ್ಲರ ಪರವಾಗಿ ಈತ ಅಕ್ರಮ ಹಣ ವಸೂಲಿ ಮಾಡಿ ಅದನ್ನು ವರ್ಗಾವಣೆ ಮಾಡುತ್ತಾನೆ. ಇದೇ ಅವನ ಕೆಲಸ. ಅಂಥಹಾ ವ್ಯಕ್ತಿ ಎನ್‌ಸಿಬಿ ಕಚೇರಿಯಲ್ಲಿ ಕುಳಿತಿದ್ದಾನೆ. ಇದೆಲ್ಲವೂ ಒಂದು ಚೈನ್ ಲಿಂಕ್ ಎನ್ನಲಾಗುತ್ತದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ನಡೆಸಿದ ಡ್ರಗ್ಸ್-ಆನ್ ಕ್ರೂಸ್ ಪ್ರಕರಣದಲ್ಲಿ ಬಂಧಿತನಾಗಿದ್ದ ಆರ್ಯನ್ ಖಾನ್ ಮ್ಯಾನೇಜರ್ ನೊಂದಿಗೆ ಸುಲಿಗೆ ದಂಧೆ ಪ್ರಕರಣದಲ್ಲಿ ಸ್ಯಾಮ್ ಡಿಸೋಜಾ ಅವರ ಹೆಸರು ಕೇಳಿಬಂದಿತ್ತು. ಇವರು ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರ ಪರವಾಗಿ ಹಾಗೂ ಆರ್ಯನ್ ಖಾನ್ ಜೊತೆಗಿನ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಆಪಾದಿತ ಖಾಸಗಿ ತನಿಖಾಧಿಕಾರಿ ಕೆಪಿ ಗೋಸಾವಿ ಜೊತೆಗೂಡಿ ಆರ್ಯನ್ ಖಾನ್ ಮ್ಯಾನೇಜರ್ ನಿಂದ ಹಣದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಆರ್ಯನ್ ಖಾನ್‌ಗೆ ಸಹಾಯ ಮಾಡಲು ಡೀಲ್‌ಗೆ ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ಕಿರಣ್ ಗೋಸಾವಿ ಅವರ ಅಂಗರಕ್ಷಕ ಪ್ರಭಾಕರ್ ಸೈಲ್ ಆರೋಪಿಸಿದ್ದಾರೆ.
ಬಾಂಬೆ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ ಸ್ಯಾಮ್ ಡಿಸೋಜಾ, ಪ್ರಕರಣದಲ್ಲಿ ಆರ್ಯನ್ ಖಾನ್‌ಗೆ ಸಹಾಯ ಮಾಡಲು ಡೀಲ್‌ಗೆ ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ಆರೋಪಿಸಿರುವ ವ್ಯಾಪಾರ ಸಲಹೆಗಾರ, ಪ್ರಕರಣದ ಪಂಚ ಸಾಕ್ಷಿಗಳಾದ ಕಿರಣ್ ಗೋಸಾವಿ ಮತ್ತು ಪ್ರಭಾಕರ್ ಸೈಲ್ ಹಣ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಅವರೊಂದಿಗೆ ಗೋಸಾವಿ ಬೇಡಿಕೆ ಇಟ್ಟಿದ್ದರು ಎಂದು ಪ್ರಭಾಕರ್ ಎನ್‌ಸಿಬಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ.
Telephone conversation between Sanville Steanley D'souza and V.V. Singh (NCB official) pic.twitter.com/YdSeN2uitz
— Nawab Malik نواب ملک नवाब मलिक (@nawabmalikncp) November 7, 2021
ಕೆಪಿ ಗೋಸಾವಿಯವರ ವೈಯಕ್ತಿಕ ಅಂಗರಕ್ಷಕ ಎಂದು ಹೇಳಿಕೊಂಡಿರುವ ಪ್ರಭಾಕರ್ ಸೈಲ್, ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ಕೈಬಿಡಲು ಗೋಸಾವಿ ಮತ್ತು ಸ್ಯಾಮ್ ಡಿಸೋಜಾ ಅವರು 25 ಕೋಟಿ ರೂ. ಡೀಲ್ ಆಗಿತ್ತು. ಮಾತುಕತೆಯ ಬಳಿಕ 18 ಕೋಟಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಹಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಒಳಗೊಂಡಿರುವ ಮಾದಕ ದ್ರವ್ಯ ದಂಧೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆಗೆ 8 ಕೋಟಿ ರೂ. ಸೇರಲಿದೆ ಎಂದು ಅವರು ಚರ್ಚಿಸುತ್ತಿದ್ದರು ಎಂದು ಸೈಲ್ ಹೇಳಿದ್ದಾರೆ. ಆರ್ಯನ್ ಖಾನ್ ಅವರನ್ನು ಎನ್‌ಸಿಬಿ ವಶಕ್ಕೆ ತೆಗೆದುಕೊಂಡ ಮರುದಿನ ಅಕ್ಟೋಬರ್ 3 ರಂದು ಪೂಜಾ ದದ್ಲಾನಿ ಮತ್ತು ಗೋಸಾವಿ ನಡುವೆ ಸಭೆಯನ್ನು ಏರ್ಪಡಿಸಿದ್ದಾಗಿ ಅವರು ಹೇಳಿದರು. ದದ್ಲಾನಿ ಮತ್ತು ಗೋಸಾವಿ ಖಾಸಗಿಯಾಗಿ ಮಾತನಾಡಿದ್ದಾರೆ ಮತ್ತು ಶಾರುಖ್ ಖಾನ್ ಅವರ ಮ್ಯಾನೇಜರ್ ಗೋಸಾವಿಗೆ 50 ಲಕ್ಷ ರೂ ನೀಡಿದರು ಎಂದು ಪ್ರಭಾಕರ್ ಹೇಳಿದ್ದಾರೆ.
Notice to Sanville Steanley D'souza from NCB bearing his real name pic.twitter.com/lfPFY4q0RU
— Nawab Malik نواب ملک नवाब मलिक (@nawabmalikncp) November 7, 2021
ಆದರೆ ತನ್ನ ಅರ್ಜಿಯಲ್ಲಿ ಡಿಸೋಜಾ ಅವರು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಆರ್ಯನ್ ಖಾನ್‌ಗೆ ಸಹಾಯ ಮಾಡಲು ಗೋಸಾವಿಯಿಂದ ಮೋಸಗೊಳಿಸಲಾಗಿದೆ ಎಂದು ಹೇಳಿದ್ದಾರೆ.