• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ನನ್ನ ಜೈನ ಗೆಳೆಯರು ಗೋಮಾಂಸ ಮಾರುತ್ತಾರೆ': ಮೋದಿ

By Mahesh
|

ಮುಂಬೈ, ಅ.15: ಗೋಮಾಂಸ ಭಕ್ಷಣೆ, ಮಾಂಸ ಮಾರಾಟ ನಿಷೇಧದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವೇನು ಎಂಬ ಪ್ರಶ್ನೆಗೆ ಎಬಿಪಿ ನ್ಯೂಸ್ ಉತ್ತರಿಸಿದೆ. ಮೋದಿ ಅವರು ಕಳೆದ ವರ್ಷ ನೀಡಿದ್ದ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದು, ಗೋಮಾಂಸ ರಫ್ತು ಹೊಸ ವಿಷಯವೇನಲ್ಲ, ಜೈನ ಸಮುದಾಯದವರು ಈ ವ್ಯಾಪರದಲ್ಲಿ ತೊಡಗಿದ್ದಾರೆ ಎಂದಿದ್ದಾರೆ.

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಬಿಪಿ ನ್ಯೂಸ್ ಟಿವಿವಾಹಿನಿಯು 'ಘೋಷಣಾ ಪತ್ರ ಮೇ ನರೇಂದ್ರ ಮೋದಿ' ಎಂಬ ಹೆಸರಿನಲ್ಲಿ ಪ್ರಸಾರ ಮಾಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋದಿ ಅವರು 'ನನ್ನ ಕೆಲವು ಜೈನ ಮಿತ್ರರು ಗೋಮಾಂಸ ರಫ್ತು ವಹಿವಾಟಿನಲ್ಲಿದ್ದಾರೆ' ಎಂದು ಹೇಳಿದ್ದಾರೆ.

‘My Jain friends are BEEF EXPORTERS’: PM Modi interview

ಟಿವಿ ಕಾರ್ಯಕ್ರಮದ ಕೇಳಿದ ಪ್ರಶ್ನೆಯೊಂದಕ್ಕೆ ಮೋದಿ ಅವರು ಉತ್ತರಿಸಿದ್ದರು. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಈ ಹಿಂದಿನ ಅವಧಿಯಲ್ಲೂ ಗೋಮಾಂಸ ರಫ್ತು ವ್ಯವಹಾರ ಬಹಳ ಚೆನ್ನಾಗಿ ನಡೆದಿದೆ. ತಮ್ಮ ಸರಕಾರ ಈ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ' ಎಂದು ಕಾರ್ಯಕ್ರಮ ನಿರ್ವಾಹಕರು ಮೋದಿಯನ್ನು ಪ್ರಶ್ನಿಸಿದ್ದರು.

ಈ ಪ್ರಶ್ನೆಗೆ ಮೋದಿ ನೀಡಿದ್ದ ಉತ್ತರದ ವೀಡಿಯೊವನ್ನು 2014ರ ಲೋಕಸಭಾ ಚುನಾವಣೆಯ ಪ್ರಚಾರದ ಅವಧಿಯಲ್ಲಿ (ಏಪ್ರಿಲ್ 23, 2014) ಮೀಡಿಯಾ ವಾಚ್ ಸಂಸ್ಥೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದೆ. ತದನಂತರ, ಅಕಾಶ್ ಜೈನ್ ಎಂಬವರು 2015ರ ಸೆ.13ರಂದು ಹಾಗೂ 2015ರ ಅ.5ರಂದು ಹೋಲಿ ಇಂಡಿಯಾ ಸಂಸ್ಥೆ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದಾರೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಜೈನರ ಉಪವಾಸ ವ್ರತದ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಮಾಂಸ ಮಾರಾಟ ನಿಷೇಧದ ವಿವಾದ ಹಾಗೂ ದಾದ್ರಿ ಹತ್ಯೆ ಘಟನೆಗಳ ಹಿನ್ನೆಲೆಯಲ್ಲಿ ಮೋದಿಯವರ ಈ ಹೇಳಿಕೆ ಬಹಳ ಮಹತ್ವವನ್ನು ಪಡೆದುಕೊಳ್ಳುತ್ತದೆ. 2014ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮೋದಿಯವರು ಪದೇಪದೇ ‘ಪಿಂಕ್ ಕ್ರಾಂತಿ'ಯ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಈಗಿನ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಅವಧಿಯಲ್ಲಿ ಗೋಮಾಂಸ ರಫ್ತು ವಹಿವಾಟು ಶೇ. 15ರಷ್ಟು ಪ್ರಗತಿಯನ್ನು ಕಂಡಿದೆ. ಈ ಹಿಂದಿನ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಇದ್ದ ರಫ್ತು ವ್ಯವಹಾರದ ಬೆಳವಣಿಗೆಯನ್ನು ದಾಟಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
PM Narendra Modi, in a TV special program broadcast by ABP News special program titled “Ghoshna-Patra Mein Narendra Modi” in 2014 general elections stated that “some of his Jain friends too are associated with the beef export business”.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more