ಟಿಆರ್‌ಪಿ ನಕಲಿ ಜಾಲ: ರಿಪಬ್ಲಿಕ್ ಟಿವಿ ಸೇರಿ 3 ಚಾನೆಲ್‌ಗಳ ವಿಚಾರಣೆ

ಮುಂಬೈ, ಅಕ್ಟೋಬರ್ 08: ನಕಲಿ ಟಿಆರ್‌ಪಿ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ರಿಪಬ್ಲಿಕ್ ಟಿವಿ ಹಾಗೂ ಇನ್ನೆರೆಡು ಮರಾಠಿ ವಾಹಿನಿಗಳ ವಿರುದ್ಧ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮುಂಬೈನಲ್ಲಿ ಸ್ಥಾಪಿಸಿರುವ 2 ಸಾವಿರ ಟಿಆರ್‌ಪಿ ನಿಯಂತ್ರಕ ಯಂತ್ರಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಆರೋಪದ ಮೇಲೆ ಈ ದೂರು ನೀಡಲಾಗಿದೆ.

ಹಂಸ್ ಏಜೆನ್ಸಿಯು ಬಾರ್ಕ್ ನೀಡುವಂತಹ ಟಿಆರ್‌ಪಿ ಮೇಲೆ ಸಂಶಯವನ್ನು ವ್ಯಕ್ತಪಡಿಸಿ ದೂರನ್ನು ದಾಖಲಿಸಿತ್ತು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮರಾಠಿ ಎರಡು ವಾಹಿನಿಗಳ ಮುಖ್ಯಸ್ಥರನ್ನು ಪೊಲೀಸರು ಬಂಧಿಸಿದ್ದಾರೆ.

Mumbai Police Says Republic TV Among 3 Channels Being Probed For TRP Manipulation

ರಿಪಬ್ಲಿಕ್ ವಾಹಿನಿ ವಿರುದ್ಧ ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಮುಂಬೈ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.ಇತ್ತೀಚೆಗಷ್ಟೇ ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಹಾಗೂ ಮುಂಬೈ ಪೊಲೀಸರ ನಡುವೆ ಶೀತಲ ಸಮರಗಳು ನಡೆದಿದ್ದವು. ಇದರ ಮುಂದಿನ ಭಾಗವಾಗಿ ಈಗ ಮುಂಬೈ ಪೊಲೀಸರು ರಿಪಬ್ಲಿಕ್ ವಾಹಿನಿ ವಿರುದ್ಧ ತನಿಖೆಯನ್ನು ಮುಂದುವರೆಸಿದ್ದಾರೆ.

ಈಗಾಗೇ ರಿಪಬ್ಲಿಕ್ ಚಾನೆಲ್‌ನ ಬ್ಯಾಂಕ್ ಖಾತೆಗಳು ಹಾಗೂ ವ್ಯವಹಾರಗಳ ಮೇಲೆ ಮುಂಬೈ ಪೊಲೀಸರು ಕಣ್ಣಿರಿಸಿದ್ದು, ಅಗತ್ಯ ಬಿದ್ದರೆಎ ರಿಪಬ್ಲಿಕ್ ಟಿವಿ ಸಿಬ್ಬಂದಿ , ನಿರ್ದೇಶಕರು, ಹೂಡಿಕೆದಾರರನ್ನು ಕರೆದು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.

ಮುಂಬೈ ಪೊಲೀಸ್ ಬಾರ್ಕ್ ಯಂತ್ರಗಳನ್ನು ಅಳವಡಿಸಿರುವವರ ಮನೆಯಲ್ಲಿ ನಿರ್ದಿಷ್ಟ ಒಂದು ಚಾನೆಲ್‌ನ್ನು ನಿರಂತರವಾಗಿ ಹಾಕಿಡುತ್ತಿರುವುಉ ಗಮನಕ್ಕೆ ಬಂದಿದೆ. ಮನೆಯ ಸದಸ್ಯರು ಮನೆಯ ಒಳಗಿರಲಿ ಅಥವಾ ಹೊರಗಿರಲಿ ಟಿವಿಯನ್ನು ನಿರಂತರವಾಗಿ ಹಾಕಿಡುವುದು ಬೆಳಕಿಗೆ ಬಂದಿದೆ.

ಹಾಗೆಯೇ ಅನಕ್ಷರಸ್ಥರ ಮನೆಯಲ್ಲೂ ಇಂಗ್ಲಿಷ್ ಸುದ್ದಿವಾಹಿನಿಗಳನ್ನು ನಿರಂತರವಾಗಿ ಹಾಕಿಡುತ್ತಿರುವುದು ತಿಳಿದಿದೆ. ಹೀಗಾಗಿ ಏಜೆಂಟ್‌ರಿಂದ ಹಣಬರುತ್ತಿತ್ತು ಎಂಬುದನ್ನು ಸದಸ್ಯರು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ ಟೆಲಿವಿಷನ್ ಲೋಕದಲ್ಲಿ ಸಾವಿರಾರು ಕೋಟಿ ಜಾಹೀರಾತು ಬರುತ್ತದೆ.

ಬಾರ್ಕ್ ಟಿಆರ್‌ಪಿ ರೇಟಿಂಗ್ ಆಧರಿಸಿಯೇ ಜಾಹೀರಾತುದಾರರು ವಾಹಿನಿಗಳಿಗೆ ಹಣ ಹಾಕುತ್ತಾರೆ. ಈ ಅಕ್ರಮದಲ್ಲಿ ಜಾಹೀರಾತುದಾರರು ಭಾಗಿಯೇ ಅಥವಾ ಅವರು ಸಂತ್ರಸ್ತರೇ ಎಂದು ತಿಳಿದುಕೊಳ್ಳಲು ನೋಟಿಸ್ ನೀಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+