ಮುಂಬೈನಲ್ಲಿ ಹಸ್ತಮೈಥುನ ಸೀನ್ಸ್ ಕಾಮನ್ ಎಂದ ಟ್ವಿಂಕಲ್
ನವದೆಹಲಿ, ಆಗಸ್ಟ್ 20:ಮುಂಬೈನ ಹಸ್ತಮೈಥುನ ಪ್ರಕರಣದಲ್ಲಿ ಆರೋಪಿ ಯುವಕನಿಗೆ ಜಾಮೀನು ಸಿಕ್ಕಿ ಹೊರ ಬಂದಿದ್ದಾನೆ. ಅದರೆ, ಈ ಬಗ್ಗೆ ಚರ್ಚೆ ಮಾತ್ರ ಇನ್ನೂ ನಿಂತಿಲ್ಲ. ರಾಜೇಶ್ ಖನ್ನಾ ಮಗಳು ನಟಿ ಟ್ವಿಂಕಲ್ ಖನ್ನ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಮುಂಬೈನಲ್ಲಿ ಈ ರೀತಿ ಪ್ರಸಂಗಗಳನ್ನು ಸಾರ್ವಜನಿಕರು ಎದುರಿಸುತ್ತಿರುತ್ತಾರೆ. ಅದರೆ, ಯಾರೂ ವರದಿ ಮಾಡುವೆ ಗೋಜಿಗೆ ಹೋಗುವುದಿಲ್ಲ. ನಾನು ನನ್ನ ಬಾಲ್ಯದ ದಿನಗಳಲ್ಲಿ ಇಂಥ ಘಟನೆಯನ್ನು ಎದುರಿಸಿದ್ದೆ ಎಂದು ಜೀ ನ್ಯೂಸ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ. [ಹಸ್ತಮೈಥುನ ಪ್ರಸಂಗದ ಟ್ವೀಟ್ ಪ್ರತಿಕ್ರಿಯೆಗಳು]

ನಟ ಅಕ್ಷಯ್ ಕುಮಾರ್ ಅವರ ಪತ್ನಿ ಟ್ವಿಂಕಲ್ ಖನ್ನ ಅವರು ಮುಂಬೈ ಪ್ರಸಂಗದ ಬಗ್ಗೆ ಪ್ರತಿಕ್ರಿಯಿಸಿ, ನಾನು 12 ವರ್ಷ ವಯಸ್ಸಿನವಳಿದ್ದಾಗ ಹ್ಯಾಂಗಿಂಗ್ ಗಾರ್ಡನ್ಸ್ ಗೆ ಶಾಲಾ ಪ್ರವಾಸಕ್ಕೆಂದು ಹೋಗಿದ್ದೆ. ಒಬ್ಬಳೆ ಸುತ್ತಾಡುವಾಗ ನನ್ನ ಎದುರಿಗೆ ಒಬ್ಬ ವ್ಯಕ್ತಿ ಹಸ್ತಮೈಥುನ ಮಾಡಿಕೊಂಡಿದ್ದನ್ನು ನೋಡಿ, ಭಯಗೊಂಡು ಓಡಿ ಬಂದೆ. ಇಂಥ ವ್ಯಕ್ತಿಗಳು ಮಾನಸಿಕವಾಗಿ ಅಸ್ವಸ್ಥರಾಗಿರುತ್ತಾರೆ. ಇಂಥವರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದು ಅಗತ್ಯ ಎಂದಿದ್ದಾರೆ.
ದಕ್ಷಿಣ ಮುಂಬೈನಲ್ಲಿ ಅಮೆರಿಕನ್ ಲೇಖಕಿ, ಸಾಮಾಜಿಕ ಕಾರ್ಯಕರ್ತೆ ಮರಿಯಾನಾ ಅಬ್ ಡೋ ಅವರ ಎದುರು ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಂಡ ಯುವಕನನ್ನು ಮುಂಬೈ ಪೊಲೀಸರು ಬುಧವಾರ ಬಂಧಿಸಿದ್ದರು. ಅದರೆ, 20 ವರ್ಷ ವಯಸ್ಸಿನ ಗೋಪಾಲ್ ವಾಲ್ಮಿಕಿ ಜಾಮೀನು ಪಡೆದು ಪೊಲೀಸ್ ವಶದಿಂದ ಹೊರಬಂದಿದ್ದಾನೆ. ಇದಕ್ಕೂ ಮುನ್ನ ಸಾಮಾಜಿಕ ಜಾಲ ತಾಣಗಳಲ್ಲಿ ಈ ಘಟನೆ ಬಗ್ಗೆ ಭಾರಿ ಪ್ರತಿಕ್ರಿಯೆ ಬಂದಿತ್ತು.
ನಾನು ಹಸ್ತಮೈಥುನ ಮಾಡಿಕೊಳ್ಳುತ್ತಿರುಲಿಲ್ಲ. ಸುಸು ಮಾಡುತ್ತಿದ್ದೆ ಎಂದು ಪೊಲೀಸ್ ವಿಚಾರಣೆ ವೇಳೆ ಯುವಕ ವಾಲ್ಮೀಕಿ ಹೇಳಿಕೆ ನೀಡಿದ್ದಾನೆ. ಈ ಸುದ್ದಿ ವಿಡಿಯೋ ಇಲ್ಲಿದೆ ನೋಡಿ:












Click it and Unblock the Notifications