ಮುಂಬೈ: ಹಸ್ತಮೈಥುನ ಮಾಡ್ಕೊಂಡ ಯುವಕ ಬಂಧನ
ಮುಂಬೈ, ಆಗಸ್ಟ್ 19: ದಕ್ಷಿಣ ಮುಂಬೈನಲ್ಲಿ ಅಮೆರಿಕನ್ ಲೇಖಕಿ, ಸಾಮಾಜಿಕ ಕಾರ್ಯಕರ್ತೆ ಮರಿಯಾನಾ ಅಬ್ ಡೋ ಅವರ ಎದುರು ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಂಡ ಯುವಕನನ್ನು ಮುಂಬೈ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಂಡ ಯುವಕನ ಚಿತ್ರ ತೆಗೆದು ಮರಿಯಾನಾ ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ನಂತರ ಸುದ್ದಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸಚಿವಾಲಯ ತಲುಪಿತ್ತು. ಈ ನಡುವೆ ಮರಿಯಾನಾ ಅವರ ಟ್ವೀಟ್‌ಗೆ ಅನೇಕ ಪ್ರತಿಕ್ರಿಯೆಗಳು ಹರಿದು ಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಮರಿಯಾನಾ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದರು.[ ಹಸ್ತಮೈಥುನ ಪ್ರಸಂಗದ ಟ್ವೀಟ್ ಪ್ರತಿಕ್ರಿಯೆಗಳು]

ಕೊಲಾಬಾ ಪ್ರದೇಶದಲ್ಲಿ ಈ ರೀತಿ ಹಸ್ತ ಮೈಥುನ ಮಾಡಿಕೊಂಡ ಯುವಕನನ್ನು ಗೋಪಾಲ್ ವಾಲ್ಮಿಕಿ ಎಂದು ಗುರುತಿಸಲಾಗಿದೆ. 20 ವರ್ಷ ಆಸುಪಾಸಿನ ಈ ಯುವಕನನ್ನು ಬುಧವಾರ ಬೆಳಗ್ಗೆ ಬಂಧಿಸಲಾಗಿದೆ ಎಂದು ಕೊಲಾಬಾ ಪೊಲೀಸ್ ಠಾನೆ ಹಿರಿಯ ಇನ್ಸ್ ಪೆಕ್ಟರ್ ವಿನಯ್ ಗಾಡ್ಗೀಳ್ ಹೇಳಿದ್ದಾರೆ.
ಗೋಪಾಲ್ ವಾಲ್ಮೀಕಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 509 ಅನ್ವಯ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಇನ್ಸ್ ಪೆಕ್ಟರ್ ವಿನಯ್ ತಿಳಿಸಿದ್ದಾರೆ.
ಎಲ್ಲೆಡೆಯಿಂದ ಬಂದ ಬೆಂಬಲಕ್ಕೆ ನಾನು ಋಣಿ. ಸೋಮವಾರ ನಾನು ಹಾಕಿದ್ದ ಚಿತ್ರ ಎಚ್ಚರಿಕೆಯಾಗಲಿ. badalja.com ವೆಬ್ ತಾಣಕ್ಕೆ ಭೇಟಿ ಕೊಡಿ ಎಂದ ಮರಿಯಾನಾ ಸಾಮಾಜಿಕ ಕಳಕಳಿವುಳ್ಳ ನಾಗರಿಕರಿಗೆ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)












Click it and Unblock the Notifications