ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವೇಕ್ ಒಬೆರಾಯ್ ವಿರುದ್ಧ ಎಫ್ಐಆರ್ ದಾಖಲಿಸಿ : ಮಹಿಳಾ ಕಾಂಗ್ರೆಸ್

|
Google Oneindia Kannada News

ಮುಂಬೈ, ಮೇ 21: ಮಹಿಳೆಯರ ಘನತೆಗೆ ಧಕ್ಕೆ ತರುವಂತೆ ಟ್ವೀಟ್ ಮಾಡಿರುವ ನಟ ವಿವೇಕ್ ಒಬೆರಾಯ್ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಮುಂಬೈ ಮಹಿಳಾ ಕಾಂಗ್ರೆಸ್ ಆಗ್ರಹಿಸಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಮಹಿಳೆಯರ ಬಗ್ಗೆ ಅವಹೇಳನಕಾರಿ ಮೀಮ್ಸ್, ಟ್ವೀಟ್ ಮೂಲಕ ವಿವೇಕ್ ಅವರು ಎಲ್ಲೆ ಮೀರಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 509 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ದೂರು ನೀಡಲಾಗಿದೆ.

ಅಸಭ್ಯ ಟ್ವೀಟ್ : ಕ್ಷಮೆ ಕೇಳಿ 'ವಿವೇಕ' ಮೆರೆದ ಓಬೇರಾಯ್ ಅಸಭ್ಯ ಟ್ವೀಟ್ : ಕ್ಷಮೆ ಕೇಳಿ 'ವಿವೇಕ' ಮೆರೆದ ಓಬೇರಾಯ್

ಈ ನಡುವೆ ಮಹಾರಾಷ್ಟ್ರ ಮಹಿಳಾ ಆಯೋಗ ನೋಟಿಸ್ ನೀಡಿದ ನಂತರ, ಇದೀಗ ರಾಷ್ಟ್ರೀಯ ಮಹಿಳಾ ಆಯೋಗ ಕೂಡಾ ವಿವೇಕ್ ಒಬೆರಾಯ್ ಗೆ ನೋಟಿಸ್ ಜಾರಿ ಮಾಡಿದೆ. ಲೋಕಸಭೆ ಚುನಾವಣೆಯಲ್ಲಿ ನಡೆಯುವ ಸಮೀಕ್ಷೆಗಳಿಗೂ, ತಮ್ಮ ಮಾಜಿ ಪ್ರೇಯಸಿ ಐಶ್ವರ್ಯ ರೈ ಬಚ್ಚನ್ ಅವರ ಜೀವನದಲ್ಲಿ ಬಂದು ಹೋದ ಪ್ರೇಮಿಗಳಿಗೂ ಹೋಲಿಕೆ ಮಾಡಿದ್ದ ಮೀಮ್ಸ್ ಅನ್ನು ವಿವೇಕ್ ಓಬೇರಾಯ್ ಅವರು ರಿಟ್ವೀಟ್ ಮಾಡಿ, ಹಾಸ್ಯಪ್ರಜ್ಞೆ ತೋರಲು ಹೋಗಿ ಅಪಹಾಸ್ಯಕ್ಕೀಡಾಗಿದ್ದರು.

Mumbai Mahila Congress seeks FIR against Vivek Oberoi

ಓಪಿನಿಯನ್ ಪೋಲ್' ಅಡಿಬರಹವಿರುವ ಚಿತ್ರದಲ್ಲಿ ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಇದ್ದಾರೆ, ಅದರ ಕೆಳಗಡೆ, ಎಕ್ಸಿಟ್ ಪೋಲ್ ಚಿತ್ರಕ್ಕೆ 'ಎಕ್ಸಿಟ್ ಪೋಲ್' ಅಂತ ಶೀರ್ಷಿಕೆಯಿದೆ ಮತ್ತು ಕಡೆಯದಾಗಿ, 'ರಿಸಲ್ಟ್' ಶೀರ್ಷಿಕೆಯ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್ ಮತ್ತು ಮಗಳು ಆರಾಧ್ಯ ಬಚ್ಚನ್ ಇರುವ ಚಿತ್ರವನ್ನು ವಿವೇಕ್ ಟ್ವೀಟ್ ಮಾಡಿದ್ದರು.

ಕ್ಷಮೆ ಕೇಳಿದ ನಂತರ ವಿವೇಕ್ ಅವರು ಮತ್ತೊಂದು ಟ್ವೀಟ್ ಮಾಡಿದ್ದು, ಅದರಲ್ಲಿ "ಕೆಲವೊಂದು ಬಾರಿ ನಮಗೆ ಯಾವುದು ತಮಾಷೆ ಅಂತ ಅನ್ನಿಸುತ್ತದೆಯೋ ಅದು ಇತರರಿಗೆ ತಮಾಷೆಯೆಂದು ಅನ್ನಿಸದಿರಬಹುದು. ಕಳೆದ 10 ವರ್ಷಗಳಲ್ಲಿ 2000ಕ್ಕೂ ಹೆಚ್ಚು ನಿರ್ಗತಿಕ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಶ್ರಮಿಸಿದ್ದೇನೆ. ಮಹಿಳೆಯರನ್ನು ಅಗೌರವದಿಂದ ಕಾಣುವುದನ್ನು ನನ್ನಿಂದ ಊಹಿಸಿಕೊಳ್ಳಲೂ ಸಾಧ್ಯವಿಲ್ಲ" ಎಂದು ಅವರು ನೋವಿನಿಂದ ನುಡಿದಿದ್ದಾರೆ.

English summary
Mumbai Mahila Congress writes to Police seeking to lodge an FIR under Section 509 of the IPC Act against actor Vivek Oberoi for his 'obnoxious statement on women in a meme which has insulted modesty of women.'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X