ಮುಂಬೈ ಡ್ರಗ್ ಕೇಸ್: ದೊಡ್ಡ ಮಾಫಿಯಾಗಳ ಮೇಲೆ ಎನ್‌ಸಿಬಿ ಕಣ್ಣು

ಮುಂಬೈ ಫೆಬ್ರವರಿ 14: ಡ್ರಗ್ಸ್ ವಿರೋಧಿ ಏಜೆನ್ಸಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ಆರ್ಯನ್ ಖಾನ್ ವಿವಾದದಿಂದ ಕಡಿಮೆ ಪ್ರಮಾಣದ ಡ್ರಗ್ಸ್ ಮಾತ್ರ ವಶಪಡಿಸಿಕೊಂಡಿದೆ, ಆದರೀಗ ದೊಡ್ಡ ಪ್ರಕರಣಗಳ ಮೇಲೆ ಮಾತ್ರ ಕೇಂದ್ರೀಕರಿಸಲು ನಿರ್ಧರಿಸಿದೆ ಎಂದು ಮೂಲಗಳು NDTV ಗೆ ತಿಳಿಸಿವೆ. ಸಂಸ್ಥೆಯು ಹೊಸ ನೀತಿಯನ್ನು ತರುವ ಸಾಧ್ಯತೆಯಿದೆ. ಇದರಲ್ಲಿ ಸಣ್ಣ ಪ್ರಮಾಣದ ಡ್ರಗ್ಸ್ ಸಂಬಂಧಿಸಿದ ಪ್ರಕರಣಗಳನ್ನು ಸ್ಥಳೀಯ ಪೊಲೀಸರಿಗೆ ರವಾನಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಸಂಸ್ಥೆಯು ದೊಡ್ಡ ಸಿಂಡಿಕೇಟ್‌ಗಳು, ಭೂಗತ ನಾರ್ಕೋ ಭಯೋತ್ಪಾದನೆ ಮತ್ತು ಹೆಚ್ಚು ಸೂಕ್ಷ್ಮ ಮಾದಕ ದ್ರವ್ಯಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಮಾತ್ರ ನಿರ್ವಹಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಇದಕ್ಕಾಗಿ ಏಜೆನ್ಸಿಯು ತನ್ನ ಸಿಬ್ಬಂದಿ ಬಲವನ್ನು ಪ್ರಸ್ತುತ 1,100 ರಿಂದ 3,000 ಕ್ಕೆ ಹೆಚ್ಚಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Breaking; ಶಾರುಖ್‌ ಪುತ್ರ ಆರ್ಯನ್‌ ಖಾನ್‌ಗೆ ಜಾಮೀನು ಮಂಜೂರು
ಮೆಗಾಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಮತ್ತು ಇತರ ಕೆಲವು ಬಾಲಿವುಡ್ ವ್ಯಕ್ತಿಗಳ ಬಂಧನದಿಂದಾಗಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹೈ ಪ್ರೊಫೈಲ್ ಡ್ರಗ್ಸ್-ಆನ್-ಕ್ರೂಸ್-ಶಿಪ್ ಪ್ರಕರಣವು ಸುದ್ದಿಯಲ್ಲಿತ್ತು. ಆದರೆ ಡ್ರಗ್ ಪ್ರಕರಣದ ಬಳಿಕ ಎನ್‌ಸಿಬಿ ವಿರುದ್ಧ ಅನೇಕ ಆರೋಪಗಳನ್ನು ಮಾಡಲಾಯಿತು. ದೊಡ್ಡ ವ್ಯಕ್ತಿಗಳು ಭಾಗಿಯಾಗಿರುವ ಅನುಮಾನಗಳು ದಟ್ಟವಾಗಿ ಹುಟ್ಟುಹಾಕಿಕೊಂಡಿವೆ. ಹೀಗಾಗಿ ಡ್ರಗ್ಸ್ ನಿಜವಾದ ಮೊತ್ತದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Mumbai Drug Case: NCB Eyes on Big Mafia
ಆರ್ಯನ್ ಖಾನ್ ಅವರ ಬಂಧನ ಮತ್ತು ಜೈಲಿನಲ್ಲಿ ಬಂಧಿಯಾಗಿರುವುದು ಸಮರ್ಥನೀಯವೇ ಎಂಬ ಚರ್ಚೆಯು ಪ್ರಾರಂಭವಾದಾಗ, ಅವರ ಮೇಲೆ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ ಮತ್ತು ಬಳಕೆಯ ಯಾವುದೇ ಲಕ್ಷಣಗಳಿಲ್ಲ ಎಂದು ಸಂಸ್ಥೆಯು ಹೇಳಿಕೊಂಡಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಇದಕ್ಕೆ ಪರ ಮತ್ತು ವಿರೋಧಗಳು ವ್ಯಕ್ತವಾಗಿದ್ದವು. ಅನೇಕರು ಬಂಧನವನ್ನು ಟೀಕಿಸಿದ್ದರು. ಮಾತ್ರವಲ್ಲದೆ ತನಿಖೆಗಳು ಮುಂದುವರೆದಂತೆ ಅದರ ಮುಖ್ಯ ತನಿಖಾಧಿಕಾರಿ ಮಾಜಿ ಜಂಟಿ ನಿರ್ದೇಶಕ ಸಮೀರ್ ವಾಂಖೆಡೆ ಸೇರಿದಂತೆ ಎನ್‌ಸಿಬಿ ಅಧಿಕಾರಿಗಳು ಲಂಚದ ವಿವಾದದಲ್ಲಿ ಸಿಲುಕಿಕೊಂಡರು.

ಪ್ರಕರಣದ ಸಾಕ್ಷಿಗಳಲ್ಲಿ ಒಬ್ಬರಾದ ಪ್ರಭಾಕರ್ ಸೈಲ್ ಅವರು ಆರ್ಯನ್ ಖಾನ್ ಅವರನ್ನು ಬಿಟ್ಟುಕೊಡಲು ಕೆಲವು ಎನ್‌ಸಿಬಿ ಅಧಿಕಾರಿಗಳು ಮತ್ತು ಇತರರು 25 ಕೋಟಿ ಹಣದ ಬೇಡಿಕೆ ಮಾಡಿದ್ದಾರೆ ಎಂದು ಅಫಿಡವಿಟ್ ಸಲ್ಲಿಸಿದರು. ಈ ಹಣದಲ್ಲಿ 8 ಕೋಟಿ ರೂಪಾಯಿಯನ್ನು ವಾಂಖೆಡೆಗೆ ಪಾವತಿಸಬೇಕೆಂದು ಕೇಳಿದ್ದನ್ನು ನಾನು ಕೇಳಿದ್ದೇನೆ ಎಂದು ಪ್ರಭಾಕರ್ ಸೈಲ್ ಹೇಳಿಕೊಂಡಿದ್ದರು. ಮಾತ್ರವಲ್ಲದೇ ಈ ಪ್ರಕರಣದಲ್ಲಿ ಸಮೀರ್ ವಾಂಖೆಡೆ ಅವರ ಮೇಲೆ ವೈಯಕ್ತಿ ಆರೋಪಗಳನ್ನು ಮಾಡಲಾಗಿತ್ತು. ಅವರ ಜಾತಿ ರಾಜಕಾರಣವನ್ನು ಈ ಪ್ರಕರಣದಲ್ಲಿ ತರಲಾಗಿತ್ತು.

ನಿನ್ನೆ ವಾಂಖೆಡೆ ಸುಲಿಗೆ ಆರೋಪಗಳ ತನಿಖೆಯ ವಿಜಿಲೆನ್ಸ್ ತಂಡದ ಮುಂದೆ ಹಾಜರಾದರು. ತಂಡವು ಇತರ ಇಬ್ಬರು ದೊಡ್ಡ ತನಿಖಾಧಿಕಾರಿಗಳಾದ ಮಾಜಿ ತನಿಖಾ ಅಧಿಕಾರಿ ವಿವಿ ಸಿಂಗ್ ಮತ್ತು ಆಶಿಶ್ ಪ್ರಸಾದ್ ಅವರನ್ನು ವಿಚಾರಣೆ ನಡೆಸುತ್ತಿದೆ.

ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ 20 ಜನರನ್ನು ಬಂಧಿಸಲಾಗಿದ್ದು, ಆರ್ಯನ್ ಖಾನ್ ಸೇರಿದಂತೆ ಎಲ್ಲರೂ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಆರ್ಯನ್ ಖಾನ್ ಪ್ರಕರಣದ ನಂತರ, NCB ಗುಜರಾತ್‌ನಲ್ಲಿ ಎರಡು ಪ್ರಮುಖ ಕಾರ್ಯಾಚರಣೆಗಳನ್ನು ನಡೆಸಿದೆ. ಅಲ್ಲಿ ಭಾರೀ ಪ್ರಮಾಣದ ಡ್ರಗ್ಸ್ ಪತ್ತೆಯಾಗಿದೆ. ಅವರು ಪ್ಯಾನ್-ಇಂಡಿಯಾ ಡ್ರಗ್ಸ್ ಸಿಂಡಿಕೇಟ್ ಅನ್ನು ಭೇದಿಸಿದ್ದಾರೆ, ದೇಶಾದ್ಯಂತ 22 ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಪ್ರಸ್ತುತ, ಸಂಸ್ಥೆಯು ಅಂತಾರಾಷ್ಟ್ರೀಯ ಡ್ರಗ್ಸ್ ಕಾರ್ಟೆಲ್‌ಗಳನ್ನು ಒಳಗೊಂಡಿರುವ ಮೂರು ಪ್ರಮುಖ ಕಾರ್ಯಾಚರಣೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+