• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ವೈರಸ್‌ ಬಲಿಯಾದ ಮುಂಬೈ ಕ್ರಿಕೆಟರ್ ಪತ್ನಿ

|

ಮುಂಬೈ, ಮೇ 31: ಕೊರೊನಾ ವೈರಸ್ ಮಹಾಮಾರಿಗೆ ಕ್ರಿಕೆಟರ್ ಪತ್ನಿಯೊಬ್ಬರು ಬಲಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ ಎಂಐಜಿ ಕ್ರಿಕೆಟ್ ಕ್ಲಬ್‌ನ ಮಾಜಿ ನಾಯಕ, ಪ್ರಸ್ತುತ ಪರೇಲ್ ಸ್ಪೋರ್ಟ್ಸಿಂಗ್ ತಂಡದ ನಾಯಕರಾಗಿರುವ ಸಂದೇಶ್ ಪರಲಕರ್ ಪತ್ನಿ ಕೊವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಹೊಸದಾಗಿ 91 ಪೊಲೀಸರಿಗೆ ಕೊರೊನಾ, 26 ಮಂದಿ ಸಾವು

52 ವರ್ಷದ ಶೈಲಜಾ ಪರಲಕರ್ ಉಸಿರಾಟದ ತೊಂದರೆಯಿಂದ ಬೆಳಿಗ್ಗೆ 6 ಗಂಟೆಗೆ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಸಂದೇಶ್ ಪರಲಕರ್ ಅವರಿಗೆ ಕೂಡ ಕೊರೊನಾ ವೈರಸ್ ರೋಗ ಲಕ್ಷಣಗಳು ಕಾಣಿಸಿಕೊಂಡಿತ್ತು. ನಂತರ ಪರೀಕ್ಷಿಸಿದಾಗ ಸೋಂಕು ಇರುವುದು ದೃಢಪಟ್ಟಿತ್ತು. ಬಳಿಕ, ಶಿವಾಜಿನ ಪಾರ್ಕ್‌ನ ಸರ್ಕಾರಿ ಕೇಂದ್ರದಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು.

49 ವರ್ಷದ ಸಂದೇಶ್ ಪಲರಕರ್ 1999ರಲ್ಲಿ ಮುಂಬೈ ರಣಜಿ ತಂಡದ ಪರ ಆಡಿದ್ದರು. ಶಿವಾಜಿ ಪಾರ್ಕ್ ಯಂಗ್‌ಸ್ಟಾರ್ ಕ್ಲಬ್‌ನಲ್ಲಿ ಆಡಿದ್ದರು.

''ನಾನು ಸಂದೇಶ್ ಬಳಿ ಇಂದು ಬೆಳಿಗ್ಗೆ ಮಾತನಾಡಿದೆ. ಸುಮಾರು ಎರಡು ದಶಕಗಳ ಕಾಲ ಎಂಐಜಿ ಕ್ಲಬ್‌ಗೆ ಆಡಿದ್ದರು. ಬಹಳ ಯಶಸ್ಸು ಕಂಡಿರುವ ಆಟಗಾರ. ನಮಗಾಗಿ ಕೊನೆಯ ಟೂರ್ನಿಯೊಂದರಲ್ಲಿ ಭಾಗಿಯಾಗಿದ್ದರು'' ಎಂದು ಎಂಐಜಿ ಕಾರ್ಯದರ್ಶಿ ಹೇಳಿದ್ದಾರೆ.

English summary
Coronavirus Update In Maharashtra: Mumbai club cricketer wife died from covid 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X