ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಷ್ಟೋ ಮನೆಯ ಬೆಳಕು ಉಳಿಸಿದ ಚಾಲಕ ಚಂದ್ರಶೇಖರ್ ಗೆ 5 ಲಕ್ಷ ಬಹುಮಾನ

|
Google Oneindia Kannada News

ಮುಂಬೈ, ಜುಲೈ 3: ಈ ಚಾಲಕ ಸಮಯಕ್ಕೆ ಸರಿಯಾಗಿ ಸ್ಪಂದಿಸದೆ ಇದ್ದಿದ್ದರೆ ಮಂಗಳವಾರದ ದಿನ ಬಹಳ ಮನೆಗಳಲ್ಲಿ ಸೂತಕದ ಮೌನ ಇರುತ್ತಿತ್ತು. ಸರಿಯಾದ ಸಮಯಕ್ಕೆ ಇವರು ತುರ್ತು ಬ್ರೇಕ್ ನ ಹಾಕಿದರು. ಆದ್ದರಿಂದಲೇ ಮುಂಬೈನ ಅಂಧೇರಿಯಲ್ಲಿ ಸೇತುವೆ ಕುಸಿದಿದ್ದ ಕೆಲವೇ ಮೀಟರ್ ದೂರದಲ್ಲಿ ರೈಲು ನಿಂತಿತ್ತು.

ಅವರ ಹೆಸರು ಚಂದ್ರಶೇಖರ್ ಬಿ.ಸಾವಂತ್. ಅಂಧೇರಿ ನಿಲ್ದಾಣದ ಬಳಿ ಸೇತುವೆ ಕುಸಿದು ಬೀಳುತ್ತಿರುವುದನ್ನು ಅವರು ಗಮನಿಸಿದ್ದಾರೆ. ಆ ಕೂಡಲೇ ರೈಲು ನಿಲ್ಲಿಸಿದ್ದಾರೆ. ಈ ಸೇತುವೆಯನ್ನು ನಲವತ್ತೇಳು ವರ್ಷದ ಹಿಂದೆ ನಿರ್ಮಿಸಲಾಗಿತ್ತು. ಅಂಧೇರಿ ರೈಲು ನಿಲ್ದಾಣದ ಪೂರ್ವಕ್ಕೆ ಕುಸಿಯಿತು ಮತ್ತು ಒಂದಷ್ಟು ಭಾಗ ರೈಲ್ವೆ ಹಳಿಗಳ ಮೇಲೆ ಕುಸಿಯಿತು.

ವರುಣನ ಆರ್ಭಟಕ್ಕೆ ಮುಂಬೈ ತತ್ತರ, ಸೇತುವೆ ಕುಸಿದು 6 ಜನರಿಗೆ ಗಾಯವರುಣನ ಆರ್ಭಟಕ್ಕೆ ಮುಂಬೈ ತತ್ತರ, ಸೇತುವೆ ಕುಸಿದು 6 ಜನರಿಗೆ ಗಾಯ

"ನಾನು ತಕ್ಷಣವೇ ತುರ್ತು ಬ್ರೇಕ್ ನ ಹಾಕಿದೆ. ಸೇತುವೆ ಕುಸಿದಿದ್ದ ಕೆಲವೇ ಮೀಟರ್ ದೂರದಲ್ಲಿ ರೈಲು ನಿಂತಿತು" ಎಂದು ಸಾವಂತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸೇತುವೆ ಕುಸಿತದ ಜತೆಗೆ ಅವಶೇಷಗಳು ಕುಸಿಯುವ ದೊಡ್ಡ ಶಬ್ದದ ಕೇಳಿಸಿತು ಎಂದು ಅವರು ಹೇಳಿದ್ದಾರೆ.

Mumbai bridge collapse: Alert motorman saved many lives

ಅಂಧೇರಿಯಲ್ಲಾದ ಅನಾಹುತದ ವೇಳೆ ಸರಿಯಾದ ಸಮಯಕ್ಕೆ, ಅಷ್ಟು ಶೀಘ್ರವಾಗಿ ಸ್ಪಂದಿಸಿದ ಸಾವಂತ್ ರನ್ನು ರೈಲ್ವೆ ಸಚಿವ ಪಿಯೂಷ್ ಗೋಯಲ್ ಮೆಚ್ಚಿದ್ದಾರೆ. ಅವರಿಗೆ ಐದು ಲಕ್ಷ ಬಹುಮಾನ ಘೋಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Chandrashekhar Sawant, alert motorman averted a major tragedy on Tuesday. He applied emergency brakes right in time, stopped train just a few metres away from the spot where part of a road overbridge had collapsed in suburban Andheri, Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X