ಯುವತಿಯ ದೇಹವನ್ನು ಕತ್ತರಿಸಿ ಸೂಟ್ ಕೇಸಿನಲ್ಲಿಟ್ಟ ಅತ್ಯಾಚಾರಿಗಳು

Posted By:
Subscribe to Oneindia Kannada

ಮುಂಬೈ, ಸೆಪ್ಟೆಂಬರ್ 7: ಯುವತಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿ, ಆಕೆಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ಸೂಟ್ ಕೇಸಿನಲ್ಲಿಟ್ಟು ಎಸೆದ ಘಟನೆ ಮುಂಬೈಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಪಿಸ್ತೂಲು ತೋರಿಸಿ ತಾಯಿ, ಸೋದರನ ಎದುರೇ ಬಾಲಕಿ ಮೇಲೆ ಅತ್ಯಾಚಾರ

22 ವರ್ಷದ ಮಹಾರಾಷ್ಟ್ರದ ನಾಗ್ಪುರ ಮೂಲದ ಇಂಜಿನಿಯರ್ ಅಂಕಿತಾ ತಂದೆ ಪೊಲೀಸ್. ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದ ಅಂಕಿತ ತನ್ನ ಸ್ನೇಹಿತರನ್ನು ಭೇಟಿಯಾಗುವ ಸಲುವಾಗಿ ಸೆ.4 ರಂದು ಪುಣೆಗೆ ತೆರಳಿದ್ದರು. ಪುಣೆಯಿಂದ ಮುಂಬೈಗೆ ಸ್ನೇಹಿತ ನಿಲೇಶ್ ಖೋಬ್ರಗಡೆ ಎಂಬುವವರ ಕಾರಿನಲ್ಲಿ ಹಿಂದಿರುಗುತ್ತಿದ್ದರು.

Mumbai: A 22 year woman raped, killed and her body packed in suitcase!

ಪೊಲೀಸರ ಕೈಗೆ ಸಿಕ್ಕ ಇಬ್ಬರು ಆರೋಪಿಗಳಾದ ನಿಖಿಲೇಶ್ ಮತ್ತು ಅಕ್ಷಯ್ ರಲ್ಲಿ ಒಬ್ಬ ಅಂಕಿತಾ ಗೆಳೆಯ ನಿಲೇಶ್ ಅವರ ಆತ್ಮೀಯ ಸ್ನೇಹಿತ ಎಂಬುದು ಸಾಬೀತಾಗಿದೆ. ಆದರೆ ಅಂಕಿತಾ ಆ ಇಬ್ಬರಿಗೆ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ಮಾಹಿತಿ ದೊರಕಿಲ್ಲ.

ನಿಲೇಶ್ ಕಾರಿನಲ್ಲಿ ಮುಂಬೈ ತಲುಪಿದ ನಂತರ ತಮ್ಮ ಮನೆಯತ್ತ ಹೊರಟಿದ್ದ ಅಂಕಿತಾ ಅವರನ್ನು ನಿಖಿಲೇಶ್ ನತ್ತು ಅಕ್ಷಯ್ ಅಪಹರಿಸಿ ಅತ್ಯಾಚಾರ ಎಸಗಿರಬಹುದೆಂದು ಶಂಕಿಸಲಾಗಿದೆ.

ಮಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಯುವಕನ ಬಂಧನ

ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದನ್ನು ಇಬ್ಬರು ಆರೋಪಿಗಳೂ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಿದ ನಂತರ ಸೂಟ್ ಕೇಸಿನಲ್ಲಿ ಆಕೆಯ ದೇಹವನ್ನು ತುಂಬಿ, ತುರ್ತಾಗಿ ಬೆಳಗಾವಿಯತ್ತ ಹೋಗಬೇಕೆಂದು ನಿಲೇಶ್ ನನ್ನು ಕರೆದುಕೊಂಡು ಕರ್ನಾಟಕದತ್ತ ಪಯಣ ಬೆಳೆಸಿದ್ದಾರೆ. ಆದರೆ ಈ ಇಬ್ಬರ ಬಳಿ ಇರುವ ಸೂಟ್ ಕೇಸಿನಲ್ಲಿ ಏನಿದೆ ಎಂಬುದು ನಿಲೇಶ್ ಗೆ ತಿಳಿದಿರಲಿಲ್ಲ! ಕರ್ನಾಟಕ ಗಡಿ ಬೆಳಗಾವಿಯಲ್ಲಿ ಆಸೂಟ್ ಕೇಸ್ ಅನ್ನು ತೆಗೆದು ಈ ಇಬ್ಬರೂ ಎಸೆಯುತ್ತಿದ್ದಂತೆಯೇ ಅನುಮಾನಗೊಂಡ ನಿಲೇಶ್ ಸ್ವತಃ ಪೊಲೀಸರಿಗೆ ದೂರು ನೀಡಿದ್ದಾನೆ.

ದೂರಿನನ್ವಯ ಇಬ್ಬರನ್ನೂ ಬಂಧಿಸಿದ ಪೊಲೀಸರ ಬಳಿ ತಾವೇ ಅಂಕಿತಾಳ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಘಟನೆಯ ಕುರಿತು ಮತ್ತಷ್ಟು ವಿವರ ನಿರೀಕ್ಷಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 22 year old woman from Nagpur, Maharashtra who was working in Mumbai was raped, killed and her boday packed in a suitcase and thrown across Karnataka's border Belagavi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ