• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರದಲ್ಲಿ 2940 ಕೇಸ್, ತಮಿಳುನಾಡಿನಲ್ಲಿ 856 ಪ್ರಕರಣ

|

ಮುಂಬೈ, ಮೇ 30: ದೇಶದ ಎರಡು ಪ್ರಮುಖ ಕೊರೊನಾ ವೈರಸ್ ಹಾಟ್‌ಸ್ಪಾಟ್ ರಾಜ್ಯಗಳು ಅಂದ್ರೆ ಮಹಾರಾಷ್ಟ್ರ ಮತ್ತು ತಮಿಳುನಾಡು. ಈ ಎರಡು ರಾಜ್ಯದಲ್ಲಿ ಪ್ರತಿದಿನವೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದಾರೆ.

   30% ಕೊರೋನಾಗೆ ಖರ್ಚಾಗಿದೆ ಇನ್ನೂ 800 ಕೋಟಿ ಇದ್ಯಂತೆ | BC Patil | Oneindia Kannada

   ಮಹಾರಾಷ್ಟ್ರದಲ್ಲಿ ಹೊಸದಾಗಿ ಇಂದು 2940 ಜನರಿಗೆ ಕೊರೊನಾ ವೈರಸ್ ತಗುಲಿದೆ. ರಾಜ್ಯದಲ್ಲಿ ಇಂದು ಒಂದೇ ದಿನ 99 ಜನರು ಸಾವನ್ನಪ್ಪಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಒಟ್ಟು 65,168 ಜನರಿಗೆ ಸೋಂಕು ಖಚಿತವಾಗಿದೆ.

   ಲಾಕ್‌ಡೌನ್‌ 5.0: ಅಂತರರಾಜ್ಯ, ಅಂತರ ಜಿಲ್ಲೆ ಪ್ರಯಾಣಕ್ಕೆ ನಿರ್ಬಂಧ ಇಲ್ಲ

   ತಮಿಳುನಾಡಿನಲ್ಲಿ 856 ಜನರಿಗೆ ಕೊರೊನಾ ವೈರಸ್ ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 21184ಕ್ಕೆ ಏರಿದೆ. 9021 ಪ್ರಕರಣಗಳು ರಾಜ್ಯದಲ್ಲಿ ಸಕ್ರಿಯವಾಗಿದೆ. 12000 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸಾವಿನ ಸಂಖ್ಯೆ 163ಕ್ಕೆ ಜಿಗಿದಿದೆ.

   ಇನ್ನು ದೆಹಲಿಯಲ್ಲಿ 1163 ಜನರಿಗೆ ಇಂದು ಹೊಸದಾಗಿ ಕೊವಿಡ್ ಸೋಂಕು ಅಂಟಿಕೊಂಡಿದೆ. ಈ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18549ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಒಟ್ಟು 416 ಜನರು ಮೃತಪಟ್ಟಿದ್ದಾರೆ.

   ಅತಿ ಹೆಚ್ಚು ಸೋಂಕು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಈ ಮೂರು ರಾಜ್ಯಗಳು ಟಾಪ್ ಮೂರರಲ್ಲಿದೆ. ಮಹಾರಾಷ್ಟ್ರ ಮೊದಲು, ತಮಿಳುನಾಡು ಎರಡನೇ ಸ್ಥಾನ ಹಾಗೂ ದೆಹಲಿ ಮೂರನೇ ಸ್ಥಾನದಲ್ಲಿದೆ.

   ಬ್ರೇಕಿಂಗ್ ನ್ಯೂಸ್ ; ಒಂದು ತಿಂಗಳ ಕಾಲ ಲಾಕ್ ಡೌನ್ ವಿಸ್ತರಣೆ

   ಮತ್ತೊಂದೆಡೆ ದೇಶಾದ್ಯಂತ ಲಾಕ್‌ಡೌನ್‌ 5.0 ಜಾರಿಯಾಗಿದೆ. ಜೂನ್ 31ರವರೆಗೂ ಲಾಕ್‌ಡೌನ್ ವಿಸ್ತರಣೆಯಾಗಿದ್ದು, ಕಂಟೈನ್‌ಮೆಂಟ್‌ ಜೋನ್‌ಗಳನ್ನು ಹೊರತುಪಡಿಸಿ ಉಳಿದ ಕಡೆ ಬಹುತೇಕ ಎಲ್ಲ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ.

   English summary
   1163 new COVID19 positive cases reported in Delhi, 2940 new COVID19 positive cases have been reported in the state today.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X