ಅನೈತಿಕ ಸಂಬಂಧ, ಐಸಿಯುನಲ್ಲಿ ಮದುವೆ, ಪ್ರಿಯಕರ ಮಾತ್ರ ಪರಾರಿ!

ಮುಂಬೈ, ಡಿಸೆಂಬರ್.09: ಪ್ರೀತಿ, ಪ್ರೇಮ, ಪ್ರಣಯ. ಈ ಪದಗಳು ಕೇಳುವುದಕ್ಕೆ ಎಷ್ಟು ಚೆಂದವೋ ಅಷ್ಟೇ ಅಪಾಯ. ಏಕೆಂದರೆ ಹೀಗೆ ಪ್ರೀತಿಸು, ಪ್ರೀತಿಸು ಎಂದು ಪೀಡಿಸುತ್ತಿದ್ದ ಪ್ರಿಯಕರ ಮದುವೆ ಅಂದಾಕ್ಷಣ ಬೆಚ್ಚಿ ಬಿದ್ದಿದ್ದಾನೆ. ಪ್ರಿಯಕರ ನಡೆಯಿಂದ ನೊಂದ ಪ್ರೇಯಸಿ ಮಾತ್ರ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

ಅಚ್ಚರಿ ಎನಿಸಿದರೂ ಇದು ಸತ್ಯ. ಮಹಾರಾಷ್ಟ್ರ ಪುಣೆಯಲ್ಲಿ ಇಂಥದೊಂದು ವಿಚಿತ್ರ ಘಟನೆ ನಡೆದಿದೆ. ಪ್ರೀತಿ ಹೆಸರಿನಲ್ಲಿ ಮೋಜು-ಮಸ್ತಿ ಮಾಡಿದ ಸೂರಜ್ ನಾಲ್ವಾಡ್ ಎಂಬಾತ ನಂತರ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ.

ಯುವಕನ ವರ್ತನೆಯಿಂದ ನೊಂದ ಯುವತಿ ಕಳೆದ ನವೆಂಬರ್.27ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಈ ವೇಳೆ ಆಸ್ಪತ್ರೆಗೆ ತೆರಳಿದ್ದ ಪ್ರಿಯಕರ ಸೂರಜ್ ನಾಲ್ವಾಡ್, ಪುಣೆ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಯುವತಿ ಕೊರಳಿಗೆ ಮಾಂಗಲ್ಯಧಾರಣೆ ಮಾಡುವ ಮೂಲಕ ಮದುವೆಯಾಗಿದ್ದನು. ಆದರೆ, ಈಗ ಪತ್ನಿಗೂ ಹೇಳದೇ, ಕೇಳದೇ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Man Marries Girlfriend In ICU After She Attempts Suicide, Escapes

ಜಾತಿ ನೆಪದಲ್ಲಿ ಮದುವೆಗೆ ನಿರಾಕರಣೆ

ನಿನ್ನ ನಾನು ಪ್ರೀತಿಸುತ್ತೇನ, ನೀನೇ ಲೈಲಾ, ನಾನೇ ಮಜನು ಎಂದೆಲ್ಲ ಡೈಲಾಗ್ ಹೊಡೆಯುತ್ತಿದ್ದ ಸೂರಜ್ ನಾಲ್ವಾಡ್ ಈಗ ತನ್ನ ಲೈಲಾಗೆ ಕೈ ಕೊಟ್ಟು ಪರಾರಿ ಆಗಿದ್ದಾನೆ. ಈ ಮೊದಲು ಪ್ರಿಯತಮೆ ಜೊತೆ ಲೈಂಗಿಕ ಸಂಪರ್ಕ ಬೆಳೆಸಲು ಸೂರಜ್ ಪೀಡಿಸಿದ್ದಾನೆ. ಎಲ್ಲವೂ ಮುಗಿದ ಮೇಲೆ ನೀನು ಕೀಳು ಜಾತಿಯವಳಾಗಿದ್ದು, ನಿನ್ನ ಜೊತೆ ವಿವಾಹ ಅಸಾಧ್ಯ ಎಂದು ರಾಗ ಹಾಡಿದ್ದಾನೆ. ಇದರಿಂದ ನೊಂದು ಯುವತಿ ವಿಷ ಸೇವಿಸಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ.

Man Marries Girlfriend In ICU After She Attempts Suicide, Escapes

ಇದರ ಮಧ್ಯೆ ಪೊಲೀಸರಿಗೆ ಸೂರಜ್ ನಾಲ್ವಾಡ್ ವಿರುದ್ಧ ಯುವತಿಯೇ ದೂರು ದಾಖಲಿಸಿದ್ದಾಳೆ. ಐಸಿಯುನಲ್ಲಿ ತಾಳಿ ಕಟ್ಟಿದ ಗಂಡನನ್ನು ಹುಡುಕಿ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+