ಕೇವಲ ಐದು ರುಪಾಯಿಗೆ ವೃದ್ಧನ ಹೊಡೆದು ಕೊಂದರು!
ಮುಂಬೈ, ಫೆಬ್ರವರಿ 26; ಕೇವಲ ಐದು ರುಪಾಯಿ ಚಿಲ್ಲರೆ ವಾಪಸ್ ನೀಡಿ ಎಂದಿದ್ದಕ್ಕೆ ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ರಾಮದುಲಾರ ಸಿಂಗ್ ಯಾದವ ಎನ್ನುವ 68 ಷರ್ವದ ವ್ಯಕ್ತಿ ಮಂಗಳವಾರ ಸಂಜೆ ಕೊಲೆಯಾಗಿದ್ದಾನೆ.
ಪಶ್ಚಿಮ ಬೋರಿವಲಿಯ ಮಾಗತಾನೆ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ತುಂಬಿಸಿ ವೃದ್ದ ರಾಮದುಲಾರ ಸಿಂಗ್ ಯಾದವ 5 ರುಪಾಯಿ ಚಿಲ್ಲರೆ ವಾಪಸ್ ಕೇಳಿದ್ದಾರೆ. ಮಾತಿಗೆ ಮಾತು ಬೆಳೆದು ಪೆಟ್ರೋಲ್ ತುಂಬಿಸುವ ಸುಮಾರು 5 ಜನ ಸಿಬ್ಬಂದಿ ರಾಮದುಲಾರ್‌ನನ್ನು ಹೊಡೆದು ಕೊಂದಿದ್ದಾರೆ ಎಂದು ಬೊರಿವಿಲಿ ಪೊಲೀಸ್ ತಿಳಿಸಿದ್ದಾರೆ.

ಈ ಕುರಿತು ಮೃತ ರಾಮದುಲಾರ್ ಪುತ್ರ ಸಂತೋಷ್ ಯಾದವ್ ಬೊರಿವಲಿಯ ಕಸ್ತೂರಿ ಬಾ ರಸ್ತೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications