ಮುಂಬೈನಲ್ಲಿ ಟೊಮೆಟೋ ಕದ್ದವನಿಗೆ ಎರಡು ದಿನಗಳ ಜೈಲು ಶಿಕ್ಷೆ!

ಮುಂಬೈ, ಆಗಸ್ಟ್ 16: ಬೆಲೆ ಗಗನಕ್ಕೇರಿರುವ ಟೊಮೆಟೋದ ಮಹಿಮೆಯೇ ಅಂಥದ್ದು. ಚಿನ್ನ, ಬೆಳ್ಳಿಯ ನಂತರ ಇದೀಗ ಟೊಮೆಟೋ ಕದ್ದಿದ್ದಕ್ಕೆ ವ್ಯಕ್ತಿಯೊಬ್ಬರು ಜೈಲುಪಾಲಾಗುವ ಸಂದರ್ಭ ಬಂದಿದೆ.

ಮುಂಬೈ ಸಬ್ ಅರ್ಬನ್ ನ ದಹಿಸಾರ್ ನಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ 57,000 ರೂಪಾಯಿ ಮೌಲ್ಯದ ಟೊಮೆಟೋ ಕದ್ದಿದ್ದಕ್ಕೆ ರಾಧೇಶ್ಯಾಮ್ ಗುಪ್ತಾ ಎನ್ನುವವರನ್ನುಆಗಸ್ಟ್ 18ರವರೆಗೆ 2 ದಿನಗಳ ಪೊಲೀಸ್ ಬಂಧನಕ್ಕೆ ಒಪ್ಪಿಸಲಾಗಿದೆ.

Man arrested for stealing tomatoes worth Rs 57,000

ಕಳೆದ ತಿಂಗಳು ಅದರೆ ಜುಲೈ 18ರಂದು ಗುಪ್ತಾ ತರಕಾರಿ ಮಾರುಕಟ್ಟೆಯಲ್ಲಿ 900 ಕೆಜಿ ಟೊಮೆಟೋಗಳನ್ನು ಟೆಂಪೋವೊಂದರಿಂದ ಕಳವು ಮಾಡಿದ್ದರು. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಹಲವರನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು ಕೊನೆಗೆ ಕುರ್ಲಾದಲ್ಲಿರುವ ಮನೆಯಿಂದ ಗುಪ್ತರನ್ನು ಬಂಧಿಸಿದ್ದಾರೆ. ಕಳೆದ ತಿಂಗಳು ಟೊಮೆಟೋ ಬೆಲೆ 100 ರೂಪಾಯಿ ಗಡಿ ದಾಟಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+