ಕರ್ನಲ್ ಪುರೋಹಿತ್, ಸಾಧ್ವಿ ಪ್ರಜ್ಞಾಗೆ ನೆಮ್ಮದಿ ಸುದ್ದಿ

Posted By:
Subscribe to Oneindia Kannada

ಮುಂಬೈ, ಡಿಸೆಂಬರ್ 28: ಮಹಾರಾಷ್ಟ್ರದ ಮಾಲೇಗಾಂವ್ ನಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಲ್ ಪುರೋಹಿತ್ ಸಾಧ್ವಿ ಪ್ರಜ್ಞಾ ಅವರಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ.

ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್ ಆಕ್ಟ್ (MCOCA) ಅನ್ವಯ ಪ್ರಜ್ಞಾ ಮತ್ತು ಪುರೋಹಿತ್ ಅವರ ಮೇಲೆ ಹಾಕಲಾಗಿದ್ದ ಆರೋಪ ಪಟ್ಟಿಯನ್ನು ಮುಂಬೈನ ಎನ್.ಐ.ಎ. ವಿಶೇಷ ನ್ಯಾಯಾಲಯ ಕೈ ಬಿಟ್ಟಿದೆ.

2008 ರ ಸೆಪ್ಟಂಬರ್ 29 ರಂದು ಮಾಲೇಗಾಂವ್ ನಲ್ಲಿ ಸಂಭವಿಸಿ ಸ್ಫೋಟದಲ್ಲಿ 6 ಮಂದಿ ಸಾವು, ಸುಮಾರು 100 ಮಂದಿ ಗಾಯಗೊಂಡಿದ್ದರು.

 Malegaon blast case: MCOCA charges against Lt Col Purohit, Sadhvi Pragya dropped

ಪ್ರಕರಣದ ತನಿಖೆ ನಡೆಸಿದ ಎನ್.ಐ.ಎ., ಸಾಧ್ವಿ ಪ್ರಜ್ಞಾ ಹಾಗೂ ಕರ್ನಲ್ ಪುರೋಹಿತ್ ಅವರು ಈಗಾಗಲೇ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

ಸಾಧ್ವಿ ಪ್ರಗ್ನಾ, ರಮೇಶ್ ಉಪಾಧ್ಯಾಯ್ ಅಜಯ್ ರಹಿಕರ್, ಲೆ. ಕ. ಪುರೋಹಿತ್ ಮೇಲೆ ಐಪಿಎಸ್ ಸೆಕ್ಷನ್ 120ಬಿ, 302, 307,207,326,427,153ಎ ಅಲ್ಲದೆ ಯುಪಿಎಯ ಸೆಕ್ಷನ್ 18ರ ಅನ್ವಯ ಪ್ರಕರಣ ದಾಖಲಾಗಿದೆ.ಈ ಪ್ರಕರಣದ ಮುಂದಿನ ವಿಚಾರಣೆ ಜನವರಿ 15 ಕ್ಕೆ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a major relief to Sadhvi Pragya and Lt Col Prasad Purohit, the NIA court dropped all Maharashtra Control of Organised Crime Act (MCOCA) charges and 17, 20 and 13 of UAPA and arms act in Malegaon blast case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ