ಮಹಾರಾಷ್ಟ್ರ: ಮಾಜಿ ಡಿಸಿಎಂ ಛಗನ್ ಭುಜ್ ಬುಲ್ ಬಂಧನ

Posted By:
Subscribe to Oneindia Kannada

ಮುಂಬೈ, ಮಾರ್ಚ್ 14: ಮಹಾರಾಷ್ಟ್ರ ಸದನ್, ಮನಿ ಲಾಂಡ್ರಿಂಗ್ ಪ್ರಕರಣದ ಆರೋಪಿಯಾಗಿರುವ ಮಹಾರಾಷ್ಟ್ರದ ಎನ್ ಸಿಪಿ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಛಗನ್ ಭುಜ್ ಬುಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಸೋಮವಾರ ವಿಚಾರಣೆಗೆ ಹಾಜರಾದ ಛಗನ್ ಭುಜ್ ಬುಲ್ ಅವರನ್ನು ತಡರಾತ್ರಿ ವಶಕ್ಕೆ ಪಡೆದಿರುವ ಜಾರಿನಿರ್ದೇಶನಾಲಯ, ಹೆಚ್ಚಿನ ವಿಚಾರಣೆ ನಡೆಸುತ್ತ್ದಿಎ.

ಶರದ್ ಪವಾರ್ ಅವರ ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯ ಹಿರಿಯ ನಾಯಕರಾದ ಜಿತೇಂದ್ರ ಅವ್ಹಾದ್ ಹಾಗೂ ಇತರೆ ನಾಯಕರೊಡನೆ ಜಾರಿ ನಿರ್ದೇಶನಾಲಯದ ಕಚೇರಿ ಛಗನ್ ಭುಜ್ ಬುಲ್ ಬಂದಿದ್ದರು.

ED arrests NCP leader Chhagan Bhujbal

ಮಹಾರಾಷ್ಟ್ರದ ಭ್ರಷ್ಟಾಚಾರ ನಿಗ್ರಹ ಬ್ಯೂರೋ ಹಾಗೂ ಜಾರಿ ನಿರ್ದೇಶನಾಲಯದ ವರದಿ ಆಧಾರಿಸಿ ಜನವರಿ ತಿಂಗಳಿನಲ್ಲಿ ಬಾಂಬೆ ಹೈಕೋರ್ಟ್ ನೀಡಿದ ನಿರ್ದೇಶನದಂತೆ ನಾಲ್ಕು ವಾರಗಳಲ್ಲಿ ಭುಜ್ ಬುಲ್ ಹಾಗೂ ಅವರ ಕುಟುಂಬದ ಭ್ರಷ್ಟಾಚಾರದ ತನಿಖೆ ನಡೆಸಬೇಕಿದೆ.

ಫೆಬ್ರವರಿ 1 ರಂದು ಭುಜ್ ಬುಲ್ ಅವರ ಸಂಬಂಧಿ ಸಮೀರ್ ಭುಜ್ ಬುಲ್ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿತ್ತು. ಕಳೆದ ತಿಂಗಳು ಭುಜ್ ಬುಲ್ ಅವರ ಮಗ ಪಂಕಜ್ ಭುಜ್ ಬುಲ್, ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು.

ಜಾರಿ ನಿರ್ದೇಶನಾಲಯದ ಕ್ರಮವನ್ನು ಸ್ವಾಗತಿಸಿರುವ ಬಿಜೆಪಿ ನಾಯಕ ಕಿರೀತ್ ಸೋಮಯ್ಯ ಅವರು, ಭ್ರಷ್ಟಾಚಾರದ ಆರೋಪಗಳ ಜೊತೆಗೆ ಬಹುಕೋಟಿ ನೀರಾವರಿ ಹಗರಣದ ಮೇಲೆ ಕೂಡಾ ತೀವ್ರ ತನಿಖೆ ಆಗಬೇಕಿದೆ. ಅಜಿತ್ ಪವಾರ್, ಸುನಿಲ್ ತತ್ಕರೆ ಹಾಗೂ ಭುಜ್ ಬಲ್ ಅವರ ಬಣ್ಣ ಬಯಲಾಗಬೇಕಿದೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
ED arrests NCP leader Chhagan Bhujbal in a money laundering case in connection with the Maharashtra Sadan scam on Monday night here.
Please Wait while comments are loading...