ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Maharashtra Floor Test LIVE: ವಿಶ್ವಾಸಮತಯಾಚನೆಯಲ್ಲಿ ಗೆದ್ದ ಏಕನಾಥ್ ಶಿಂಧೆ ಸರ್ಕಾರ

|
Google Oneindia Kannada News

ಮುಂಬೈ, ಜುಲೈ 04: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರದ ವಿರುದ್ಧ ಸೃಷ್ಟಿಯಾದ ರಾಜಕೀಯ ಬಿಕ್ಕಟ್ಟು ಅಂತಿಮ ಘಟ್ಟಕ್ಕೆ ತಲುಪಿದೆ. ರಾಜ್ಯದ 19ನೇ ಮುಖ್ಯಮಂತ್ರಿ ಆಗಿ ಏಕನಾಥ್ ಶಿಂಧೆ ಪ್ರಮಾಣವಚನ ಸ್ವೀಕರಿಸುವುದು ಪಕ್ಕಾ ಆಗಿದೆ.
ಶಿವಸೇವೆಯ ಏಕನಾಥ್ ಶಿಂಧೆ ಬಣಕ್ಕೆ ಭಾರತೀಯ ಜನತಾ ಪಕ್ಷವು ಬೆಂಬಲವನ್ನು ನೀಡಿದ್ದು, ಸರ್ಕಾರದ ಭಾಗವಾಗಿ ಇರುವುದಿಲ್ಲ ಎಂದು ಬಿಜೆಪಿಯ ನಾಯಕ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಈ ಮಧ್ಯೆ ಗುರುವಾರ ಸಂಜೆ 7.30ಕ್ಕೆ ಏಕನಾಥ್ ಶಿಂಧೆ ಪ್ರಮಾಣವಚನಕ್ಕೆ ಸಮಯವನ್ನು ನಿಗದಿಪಡಿಸಲಾಗಿದೆ.

https://kannada.oneindia.com/news/mumbai/maharashtra-political-crisis-live-updates-latest-news-in-kannada-260183.html

ಗುರುವಾರ ಗೋವಾದಿಂದ ಮುಂಬೈಗೆ ಆಗಮಿಸಿದ ಏಕನಾಥ್ ಶಿಂಧೆ ನೇರವಾಗಿ ಬಿಜೆಪಿ ನಾಯ ದೇವೇಂದ್ರ ಫಡ್ನವೀಸ್ ಅನ್ನು ಭೇಟಿ ಮಾಡಿದರು. ಅಲ್ಲಿಂದ ಉಭಯ ನಾಯಕರು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿಯನ್ನು ಭೇಟಿ ಮಾಡಿ ಸಿಎಂ ಪ್ರಮಾಣವಚನದ ಬಗ್ಗೆ ಪ್ರಸ್ತಾಪಿಸಿದರು. ರಾಜ್ಯಪಾಲರಿಗೆ ಸಿಹಿ ನೀಡುವ ಮೂಲಕ ಸಂತಸ ವ್ಯಕ್ತಪಡಿಸಿದರು.

ರಾಜ್ಯಪಾಲರ ಭೇಟಿ ನಂತರದಲ್ಲಿ ದೇವೇಂದ್ರ ಫಡ್ನವೀಸ್ ಮತ್ತು ಏಕನಾಥ್ ಶಿಂಧೆ ಜಂಟಿ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಏಕನಾಥ್ ಶಿಂಧೆಯವರೇ ಮುಂದಿನ ಮುಖ್ಯಮಂತ್ರಿ ಎಂಬುದನ್ನು ಘೋಷಿಸಿದರು. ಅಲ್ಲಿಂದ ಮುಂದೆ ಮಹಾರಾಷ್ಟ್ರದಲ್ಲಿ ನಡೆಯುವ ಮತ್ತು ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಮುಂದೆ ಓದಿ ತಿಳಿಯಿರಿ.

Newest FirstOldest First
1:18 PM, 4 Jul

"ಮುಖ್ಯಮಂತ್ರಿ ಏಕನಾಥ್ ಶಿಂಧೆ ಸರ್ಕಾರದ ಮೇಲೆ ನಂಬಿಕೆ ಇಟ್ಟ ಎಲ್ಲ ಸದಸ್ಯರಿಗೂ ನಾನು ಧನ್ಯವಾದ ಹೇಳುತ್ತೇನೆ. ಸದನದಿಂದ ಹೊರಗುಳಿಯುವ ಮೂಲಕ ಬಿಜೆಪಿ-ಶಿಂಧೆ ಮೈತ್ರಿಗೆ ಪರೋಕ್ಷವಾಗಿ ಸಹಾಯ ಮಾಡಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ," ಎಂದು ಕಾಂಗ್ರೆಸ್‌ನ ಅಶೋಕ್ ಚವಾಣ್, ವಿಜಯ್ ವಾಡೆತ್ತಿವಾರ್ ಮತ್ತು ಜೀಶನ್ ಸಿದ್ದಿಕ್ ಅಂತಹ ನಾಯಕರನ್ನು ಗುರಿಯಾಗಿಸಿಕೊಂಡು ಫಡ್ನವಿಸ್ ಹೇಳಿದರು.
12:16 PM, 4 Jul

ಮಹಾರಾಷ್ಟ್ರದಲ್ಲಿ ಭಾರಿ ಜನಾದೇಶದೊಂದಿಗೆ ವಿಶ್ವಾಸ ಮತ ಗೆದ್ದಿದ್ದಕ್ಕಾಗಿ ಸಿಎಂ ಏಕನಾಥ್ ಶಿಂಧೆ ಅನ್ನು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಭಿನಂದಿಸಿದ್ದಾರೆ. ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ದೇವೇಂದ್ರ ಫಡ್ನವೀಸ್, ಮುಖ್ಯಮಂತ್ರಿ ಏಕನಾಥ್ ಶಿಂಧೆಯೊಬ್ಬ ನಿಷ್ಠಾವಂತ ಶಿವಸೈನಿಕ ಎಂದು ಹೇಳಿದರು. ಏಕನಾಥ್ ಶಿಂಧೆಯವರು ಬಾಳಾಸಾಹೇಬ್ ಠಾಕ್ರೆ ಸಿದ್ಧಾಂತಕ್ಕೆ ನಿಷ್ಠರಾಗಿದ್ದಾರೆ ಎಂದು ಹೇಳಿದರು.
11:56 AM, 4 Jul

ಭಾನುವಾರ ಸ್ಪೀಕರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಶಿವಸೇನೆ ಮತ್ತು ಬಿಜೆಪಿ ಮೈತ್ರಿಕೂಟವು ಸೋಮವಾರ ನಿರೀಕ್ಷೆಯಂತೆ ವಿಶ್ವಾಸಮತಯಾಚನೆಯಲ್ಲೂ ಗೆಲುವು ಸಾಧಿಸಿದೆ. 287 ಸದಸ್ಯರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪರವಾಗಿ 164 ಮತಗಳು ಬಿದ್ದಿದೆ. ಇನ್ನೊಂದು ಕಡೆ ಕಾಂಗ್ರೆಸ್, ರಾಷ್ಟ್ರೀಯವಾದಿ ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಬಣದ ಶಾಸಕರು ಸೇರಿ ಒಟ್ಟು 99 ಮತಗಳು ಠಾಕ್ರೆ ಬಣಕ್ಕೆ ಸಿಕ್ಕಿದೆ. ಇದರ ಹೊರತಾಗಿ 21 ಶಾಸಕರು ಸೋಮವಾರದ ಕಲಾಪಕ್ಕೆ ಗೈರು ಹಾಜರಾಗಿದ್ದರು.
11:40 AM, 4 Jul

ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿರುವ ಏಕನಾಥ್ ಶಿಂಧೆ ಸರ್ಕಾರವು ಸೋಮವಾರ ನಡೆದ ವಿಶ್ವಾಸಮತಯಾಚನೆಯಲ್ಲೂ ಪಾಸ್ ಆಗಿದೆ. ಸೋಮವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ವಿಶ್ವಾಸಮತಯಾಚನೆ ಪ್ರಕ್ರಿಯೆ ಆರಂಭಿಸಲಾಯಿತು. ತಲೆ ಎಣಿಕೆ ಮೂಲಕ ವಿಶ್ವಾಸಮತಯಾಚನೆ ಪ್ರಕ್ರಿಯೆ ನಡೆಸಲಾಯಿತು.
11:06 AM, 1 Jul

ಮಹಾರಾಷ್ಟ್ರ ಶಿವಸೇನೆ ಶಾಸಕರ ಅನರ್ಹತೆ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಮುಕ್ತಾಯ: ಅನರ್ಹತೆಯ ವಿರುದ್ಧದ ಅರ್ಜಿಗಳನ್ನು ನ್ಯಾಯಾಲಯ ಪಟ್ಟಿ ಮಾಡಿದೆ. ಜುಲೈ 11ರಂದು ನ್ಯಾಯಾಲಯವು ಎಲ್ಲಾ ಸಮಸ್ಯೆಗಳನ್ನು ಒಟ್ಟಿಗೆ ಪರಿಶೀಲಿಸುತ್ತದೆ ಎಂದು ಹೇಳಿಕೆ.
10:59 AM, 1 Jul

ಜುಲೈ 2ರಿಂದ ಎರಡು ದಿನಗಳ ಕಾಲ ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನ ನಡೆಯಲಿದ್ದು, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ದಿನ ವಿಧಾನಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯಲಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
10:25 AM, 1 Jul

ಮಹಾರಾಷ್ಟ್ರದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಶುಕ್ರವಾರ, ಶಿವಸೇನೆ ನಾಯಕ ಏಕನಾಥ್ ಶಿಂಧೆ ಮಾತನಾಡಿದ್ದು, "ಬಾಳಾಸಾಹೇಬ್ ಠಾಕ್ರೆ ಅವರ ಶಿವಸೈನಿಕರು ಮುಖ್ಯಮಂತ್ರಿಯಾಗಿರುವುದು" ವಿಧಾನಸಭೆಯಲ್ಲಿ ಅವರ ಸಹೋದ್ಯೋಗಿಗಳು ಮಾತ್ರವಲ್ಲದೆ ಮಹಾರಾಷ್ಟ್ರವೂ ಸಂತೋಷವಾಗಿದೆ ಎಂದು ಹೇಳಿದರು.
Advertisement
10:16 PM, 30 Jun

ಡಿಸಿಎಂ ಪಟ್ಟವನ್ನು ದೇವೇಂದ್ರ ಫಡ್ನವೀಸ್ ಸಂತೋಷದಿಂದ ಒಪ್ಪಿಕೊಂಡಿಲ್ಲ ಎಂಬುದು ಅವರ ಮುಖಭಾವದಲ್ಲಿ ಕಂಡುಬರುತ್ತಿದೆ. ಆದರೆ ಅವರು ನಾಗ್ಪುರದಲ್ಲಿ ಇದ್ದವರು. ಆರ್‌ಆರ್‌ಎಸ್ ಸೂಚನೆಯಂತೆ ಒಪ್ಪಿಕೊಂಡಿದ್ದಾರೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
10:13 PM, 30 Jun

ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆಗೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಭ ಹಾರೈಸಿದ್ದಾರೆ. ನೀವು ಮಹಾರಾಷ್ಟ್ರಕ್ಕೆ ಉತ್ತಮ ಕೆಲಸ ಮಾಡಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
8:58 PM, 30 Jun

ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಚಿವ ಸಂಪುಟ ಸಭೆ ನಡೆಸಿದರು.
8:30 PM, 30 Jun

ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಕರ್ನಾಟಕದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅಭಿನಂದನೆ ಸಲ್ಲಿಸಿದ್ದಾರೆ.
8:20 PM, 30 Jun

ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದೇವೇಂದ್ರ ಫಡ್ನವೀಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
Advertisement
8:06 PM, 30 Jun

10 ದಿನದ ರಾಜಕೀಯ ಹೈಡ್ರಾಮ ಮುಗಿದಿದ್ದು ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಏಕನಾಥ್ ಶಿಂಧೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
7:40 PM, 30 Jun

ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಜೊತೆಗೆ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಕೂಡ ಪ್ರಮಾಣವಚನ ಸ್ವೀಕರಿಸಿದರು.
7:37 PM, 30 Jun

ಮಹಾರಾಷ್ಟ್ರದ 19ನೇ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಏಕನಾಥ್ ಶಿಂಧೆ. ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿಯಿಂದ ಪ್ರಮಾಣವಚನ ಬೋಧನೆ.
7:36 PM, 30 Jun

ಮರಾಠ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ.
7:25 PM, 30 Jun

ಸಂಜೆ 7.30ಕ್ಕೆ ನಿಗದಿಯಾಗಿದ್ದ ಪ್ರಮಾಣ ವಚನ ಸಮಾರಂಭದಲ್ಲಿ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಪ್ರಮಾಣ ವಚನ ಸ್ವೀಕಾರಕ್ಕೆ ಮೂರನೇ ಕುರ್ಚಿಯನ್ನು ಹಾಕಲಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಪ್ರಮಾಣ ವಚನ ಸ್ವೀಕರಿಸಲಿದ್ದು, ದೇವೇಂದ್ರ ಫಡ್ನವಿಸ್ ಕೂಡ ಸರ್ಕಾರದ ಭಾಗವಾಗಲು ಒಪ್ಪಿಕೊಂಡಿದ್ದಾರೆ.
7:21 PM, 30 Jun

ಮಹಾರಾಷ್ಟ್ರದ ನಿಯೋಜಿತ ಸಿಎಂ ಏಕನಾಥ್ ಶಿಂಧೆ ಪ್ರಮಾಣ ವಚನ ಸಮಾರಂಭಕ್ಕೆ ರಾಜಭವನಕ್ಕೆ ಆಗಮಿಸಿದರು.
7:14 PM, 30 Jun

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ನಿಯೋಜಿತ ಏಕನಾಥ್ ಶಿಂಧೆ ಹೆಸರನ್ನು ಘೋಷಿಸಿದ ನಂತರ ನಾಸಿಕ್‌ನಲ್ಲಿ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು.
7:07 PM, 30 Jun

ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರ ಕೋರಿಕೆಯ ಮೇರೆಗೆ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸರ್ಕಾರಕ್ಕೆ ಸೇರಲು ನಿರ್ಧರಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
7:02 PM, 30 Jun

ದೇವೇಂದ್ರ ಫಡ್ನವೀಸ್ ಸರ್ಕಾರದ ಭಾಗವಾಗಬೇಕು ಎಂದು ಬಿಜೆಪಿಯ ಕೇಂದ್ರ ನಾಯಕರು ನಿರ್ಧರಿಸಿದ್ದಾರೆ. ಹೀಗಾಗಿ ಅವರಿಗೆ ವೈಯಕ್ತಿಕ ಮನವಿ ಮಾಡಿದ್ದು, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅಧಿಕಾರ ವಹಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹೇಳಿದ್ದಾರೆ.
5:30 PM, 30 Jun

ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗಿನ ಮೈತ್ರಿಯನ್ನು ಕೊನೆಗೊಳಿಸಬೇಕೆಂದು ಶಿವಸೇನಾ ಶಾಸಕರು ಒತ್ತಾಯಿಸುತ್ತಿದ್ದರು. ಆದರೆ ಉದ್ಧವ್ ಠಾಕ್ರೆ ಈ ಶಾಸಕರನ್ನು ನಿರ್ಲಕ್ಷಿಸಿದರು ಮತ್ತು ಮಹಾ ವಿಕಾಸ ಅಘಾಡಿ ಮೈತ್ರಿ ಪಾಲುದಾರರಿಗೆ ಆದ್ಯತೆ ನೀಡಿದರು, ಅದಕ್ಕಾಗಿಯೇ ಈ ಶಾಸಕರು ತಮ್ಮ ಧ್ವನಿಯನ್ನು ತೀವ್ರಗೊಳಿಸಿದ್ದಾರೆ ಎಂದು ದೇವೇಂದ್ರ ಫಡ್ನವಿಸ್ ಹೇಳಿದರು.
5:28 PM, 30 Jun

ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರ್ಕಾರ ಪತನದ ಬೆನ್ನಲ್ಲೇ ಗುರುವಾರವೇ ರಾಜ್ಯದ ಮುಖ್ಯಮಂತ್ರಿ ಆಗಿ ಏಕನಾಥ್ ಶಿಂಧೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಘೋಷಿಸಿದ್ದಾರೆ.
5:00 PM, 30 Jun

ಗುರುವಾರ ಸಂಜೆ 7.30 ಗಂಟೆಗೆ ನಡೆಯಲಿರುವ ಸರಳ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿ ಬಿಜೆಪಿಯ ಏಕನಾಥ್ ಶಿಂಧೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ದೇವೇಂದ್ರ ಫಡ್ನವೀಸ್ ಸುದ್ದಿಗೋಷ್ಠಿ ನಡೆಸಿ ಅಚ್ಚರಿಯ ಘೋಷಣೆ ಮಾಡಿದರು.
4:02 PM, 30 Jun

ಏಕನಾಥ್ ಶಿಂಧೆ ಪದಗ್ರಹಣ

ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಆಗಿ ಏಕನಾಥ್ ಶಿಂಧೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
2:54 PM, 30 Jun

ಬಿಜೆಪಿ ಕೋರ್ ಕಮಿಟಿ ಸಭೆ ನಡೆಯುತ್ತಿದ್ದು, ಮಹಾ ಸರ್ಕಾರ ರಚನೆಯ ಕಾರ್ಯತಂತ್ರದ ಕುರಿತು ಸಮಾಲೋಚನೆ ನಡೆಸುತ್ತಿದೆ. ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ನಿವಾಸ ಸಾಗರ್ ಬಂಗಲೆಯಲ್ಲಿ ಸಭೆ ನಡೆಯುತ್ತಿದೆ. ಮಹಾರಾಷ್ಟ್ರ ಬಿಜೆಪಿ ಉಸ್ತುವಾರಿ ಸಿ.ಟಿ.ರವಿ, ಬಿಜೆಪಿ ಮಹಾರಾಷ್ಟ್ರ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್, ಗಿರೀಶ್ ಮಹಾಜನ್, ಪ್ರವೀಣ್ ದಾರೇಕರ್ ಸೇರಿದಂತೆ ಪಕ್ಷದ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು. ಪಕ್ಷೇತರ ಶಾಸಕ ರವಿ ರಾಣಾ ಅವರೂ ಸಹ ಸಭೆಗೆ ಬಂದಿದ್ದಾರೆ. ಮತ್ತೊಂದೆಡೆ, ಏಕನಾಥ್ ಶಿಂಧೆ ಬಣ ಕೂಡ ಇಂದು ಗೋವಾದಲ್ಲಿ ಸಭೆ ನಡೆಸಿದ್ದು, ತಮ್ಮ ಮುಂದಿನ ಕ್ರಮವನ್ನು ನಿರ್ಧರಿಸಿದ್ದಾರೆ.
2:44 PM, 30 Jun

ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ಶಿವಸೇನೆಯ ಬಂಡಾಯ ಶಾಸಕ ಏಕನಾಥ್ ಶಿಂಧೆ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಏಕನಾಥ್ ಸಿಂಧೆ ಮುಂಬೈ ತಲುಪಿಸ್ದಾರೆ.
1:04 PM, 30 Jun

ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ನಿನ್ನೆ ರಾಜೀನಾಮೆ ನೀಡಿದ್ದಾರೆ. ಅವರನ್ನು ತೆಗೆದುಹಾಕುವುದು ನಮ್ಮ ಉದ್ದೇಶವಲ್ಲವಾದ್ದರಿಂದ ನಾವು ಯಾವುದೇ ರೀತಿಯ ಆಚರಣೆ ಮಾಡಿಲ್ಲ. ನಾವು ಇನ್ನೂ ಶಿವಸೇನೆಯಲ್ಲಿದ್ದೇವೆ ಮತ್ತು ಉದ್ಧವ್ ಠಾಕ್ರೆ ಅವರನ್ನು ನೋಯಿಸುವುದು ಮತ್ತು ಅಗೌರವಿಸುವುದು ನಮ್ಮ ಉದ್ದೇಶವಲ್ಲ: ಗೋವಾದ ಪಣಜಿಯಲ್ಲಿ ಶಿವಸೇನೆಯ ಬಂಡಾಯ ಶಾಸಕ ದೀಪಕ್ ಕೇಸರ್ಕರ್ ಹೇಳಿಕೆ ನೀಡಿದ್ದಾರೆ.
12:50 PM, 30 Jun

ಸರ್ಕಾರ ರಚನೆಗೂ ಮುನ್ನವೇ ಶಿಂಧೆ-ಬಿಜೆಪಿ ನಡುವೆ ಖಾತೆ ಹಂಚಿಕೆ ಜಟಾಪಟಿ ಆರಂಭ

ತಮ್ಮದೇ ಸರ್ಕಾರದ ವಿರುದ್ಧ ಬಂಡೆದ್ದ ಶಿವಸೇನೆ ಶಾಸಕರು ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರವನ್ನು ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ. ಬಹುಮತ ಸಾಬೀತಿಗೂ ಮೊದಲೇ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದಾರೆ. ಬಂಡಾಯ ಶಾಸಕರ ಬೆಂಬಲ ಪಡೆದು ಬಿಜೆಪಿ ಸರ್ಕಾರ ರಚಿಸಲು ಮುಂದಾಗಿದೆ. ಆದರೆ ಸರ್ಕಾರ ರಚನೆಗೂ ಮುನ್ನವೇ ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆ ಬಿಜೆಪಿ ನಡುವೆ ಹಗ್ಗಜಗ್ಗಾಟ ಶುರುವಾಗಿದೆ.
12:04 PM, 30 Jun

ಶಾಸಕ ಏಕನಾಥ್ ಶಿಂಧೆ ನೇತೃತ್ವದಲ್ಲಿ ನಡೆದ ಬಂಡಾಯ ಶಿವಸೇನೆ ಶಾಸಕರ ಮಹತ್ವದ ಸಭೆ ಮುಕ್ತಾಯವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಶಿಂಧೆ ಮುಂಬೈಗೆ ತೆರಳುವ ಸಾಧ್ಯತೆ ಇದೆ.
READ MORE

English summary
Maharashtra, Uddhav Thackeray Floor Test Live Updates in Kannada: Maharashtra Governor Bhagat Singh Koshyari has called Uddhav Thackeray for a floor test in the state assembly on June 30. Catch live updates, Eknath shinde vs Shiv Sena latest news and highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X