ಪತಿಯನ್ನು ಬದಲಿಸಿದಂತೆ ಸ್ಮೃತಿ ಬಿಂದಿ ಬದಲಿಸ್ತಾರೆ ಎಂದ ರಾಜಕಾರಣಿ
ಮುಂಬೈ, ಏಪ್ರಿಲ್ 03: ಮಹಾರಾಷ್ಟ್ರದ ಪೀಪಲ್ಸ್ ರಿಪಬ್ಲಿಕನ್ ಪಕ್ಷದ ಜಯದೀಪ್ ಕವಾಡೆ ಎಂಬುವವರು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆ ಭಾರೀ ಸದ್ದು ಮಾಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸ್ಮೃತಿ ಇರಾನಿ ಅವರು ಪತಿಯನ್ನು ಬದಲಿಸಿದಂತೆ ಅವರ ಹಣೆ ಮೇಲಿನ ಬಿಂದಿಯೂ ಅಗಲವಾಗುತ್ತ ಹೋಗುತ್ತದೆ ಎಂದು ಜಯದೀಪ್ ಕವಾಡೆ ಹೇಳಿದರು.
"ಪ್ರಧಾನಿ ನರೇಂದ್ರ ಮೋದಿ ಮತ್ತು ನಿತಿನ್ ಗಡ್ಕರಿ ಅವರ ಜೊತೆಯೇ ಕುಳಿತು ಸ್ಮೃತಿಜೀ ಸಂವಿಧಾನವನ್ನು ಬದಲಿಸುವ ಬಗ್ಗೆ ಮಾತನಾಡುತ್ತಾರೆ. ಆದರೆ ಸಂವಿಧಾನವನ್ನು ಬದಲಿಸುವುದು ಪತಿಯನ್ನು ಬದಲಿಸಿದಷ್ಟು ಸುಲಭವಲ್ಲ" ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆಗೂ ಮುನ್ನ ಜಯದೀಪ್ ಅವರು ನೀಡಿದ ಈ ವಿವಾದಾತ್ಮಕ ಹೇಳಿಕೆ ಸಾಕಷ್ಟು ಮುಖಂಡರ ಕೆಂಗಣ್ಣಿಗೆ ಕಾರಣರಾಗಿದ್ದಾರೆ.
ಪಿಆರ್ ಪಿ ಪಕ್ಷವು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರು ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಅವರ ವಿರುದ್ಧ ಕಣಕ್ಕಿಳಿದಿದ್ದಾರೆ.












Click it and Unblock the Notifications