ಶಾಲೆ ಕಾರ್ಯಕ್ರಮದಲ್ಲಿ ಆಂಖ್ ಮಾರೇ ಹಾಡಿಗೆ ಹೆಜ್ಜೆ ಹಾಕಿದ ಸಂಸದ

ಮುಂಬೈ, ಜನವರಿ 7: ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯಿಂದ ಸ್ಪರ್ಧಿಸಿ, ಸಂಸದರಾಗಿರುವ ಮಧುಕರ್ ಕುಕ್ಡೆ ಶಾಲಾ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳ ಜತೆಗೆ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಮಹಾರಾಷ್ಟ್ರದ ಭಂದಾರ-ಗೊಂಡಿಯಾ ಲೋಕಸಭೆ ಕ್ಷೇತ್ರದ ಸಂಸದರಾಗಿರುವ ಮಧುಕರ್, ತಮ್ಮ ಕ್ಷೇತ್ರ ವ್ಯಾಪ್ತಿಯ ಶಾಲೆಯಲ್ಲಿ 'ಸಿಂಬಾ' ಹಿಂದಿ ಸಿನಿಮಾದ ಆಂಖ್ ಮಾರೇ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಡ್ಯಾನ್ಸ್ ಮಾಡಿದ ವಿಡಿಯೋವನ್ನು ಸುದ್ದಿ ಸಂಸ್ಥೆ ಎಎನ್ ಐ ಟ್ವೀಟ್ ಮಾಡಿದೆ. ಅರವತ್ಮೂರು ವರ್ಷದ ಸಂಸದ ಮಧುಕರ್ ಭರ್ಜರಿಯಾಗಿಯೇ ಹೆಜ್ಜೆ ಹಾಕಿದ್ದಾರೆ. ಸುತ್ತ ಮುತ್ತ ಇದ್ದವರು ಸಹ ಸಂಸದರ ಉತ್ಸಾಹಕ್ಕೆ ಪ್ರೋತ್ಸಾಹ ನೀಡಿದ್ದಾರೆ. ವೇದಿಕೆ ಹತ್ತಿದ ವಿದ್ಯಾರ್ಥಿನಿಯರು ಸಹ ಜತೆಗೆ ಹೆಜ್ಜೆ ಹಾಕಿದ್ದಾರೆ.

Maharashtra lawmaker dance to Hindi song at school function

ಎನ್ ಸಿಪಿ ಮುಖಂಡ ಮಧುಕರ್ ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿಯನ್ನು ಭಾರೀ ಮತದ ಅಂತರದಿಂದ ಮಣಿಸಿದ್ದರು. ಬಿಜೆಪಿ ಮುಖಂಡ ನಾನಾ ಪಟೋಲೆ ರಾಜೀನಾಮೆ ನೀಡಿದ ಕಾರಣಕ್ಕೆ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು. ನಾನಾ ಪಟೋಲೆ ಆ ನಂತರ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಚುನಾವಣೆ ವೇಳೆ ಕೈ ಪಕ್ಷವು ಕುಕ್ಡೆ ಅವರನ್ನು ಬೆಂಬಲಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+