ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ ಮಾರ್ಗಸೂಚಿ ಪ್ರಕಟಿಸಿದ ಕೊರೊನಾ ಹಾಟ್ ಸ್ಪಾಟ್ ಮಹಾರಾಷ್ಟ್ರ

|
Google Oneindia Kannada News

ಮುಂಬೈ, ಮೇ 19 : ಮಹಾರಾಷ್ಟ್ರ ಭಾರತದ ಕೊರೊನಾ ಹಾಟ್ ಸ್ಪಾಟ್. ಕೊರೊನಾ ಹರಡದಂತೆ ತಡೆಯಲು 4ನೇ ಹಂತದ ಲಾಕ್ ಡೌನ್ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಕೆಲವು ವಿನಾಯಿತಿಗಳನ್ನು ನೀಡಲಾಗಿದೆ.

Recommended Video

ಈ ಏರಿಯಾಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ಏರಿಯಾಗಳಲ್ಲೂ BMTC ಬಸ್ ಇರುತ್ತೆ | Oneindia Kannada

ಮಂಗಳವಾರ ಮಹಾರಾಷ್ಟ್ರ ಸರ್ಕಾರ 4ನೇ ಹಂತದ ಲಾಕ್ ಡೌನ್ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಕೆಂಪು ವಲಯದಲ್ಲಿಯೂ ಕಾರ್ಖನೆ, ನಿರ್ಮಾಣ ಹಂತದ ಚಟುವಟಿಕೆಗಳನ್ನು ನಡೆಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಶಾಲಾ/ಕಾಲೇಜು ತೆರೆಯುವುದಿಲ್ಲ. ಆನ್‌ಲೈನ್ ಕ್ಲಾಸ್‌ಗಳನ್ನು ನಡೆಸಲು ಅನುಮತಿ ನೀಡಲಾಗಿದೆ.

ಕೊರೊನಾ ವಿರುದ್ಧ ಹೋರಾಟ; ಕರ್ನಾಟಕಕ್ಕೆ ಸಂಕಟ ತಂದ ಮಹಾರಾಷ್ಟ್ರ ಕೊರೊನಾ ವಿರುದ್ಧ ಹೋರಾಟ; ಕರ್ನಾಟಕಕ್ಕೆ ಸಂಕಟ ತಂದ ಮಹಾರಾಷ್ಟ್ರ

ಮಹಾರಾಷ್ಟ್ರದಲ್ಲಿ ಮೇ 31ರ ತನಕ ಲಾಕ್ ಡೌನ್ ಜಾರಿಯಲ್ಲಿ ಇರಲಿದೆ ಎಂದು ಸರ್ಕಾರ ಹೇಳಿದೆ. ತುರ್ತು ಸೇವೆ, ಏರ್ ಆಂಬ್ಯುಲೆನ್ಸ್‌ಗಳಿಗೆ ವಿನಾಯಿತಿ ನೀಡಲಾಗಿದೆ. ಬೇರೆ ದೇಶಿಯ, ವಿದೇಶಿ ವಿಮಾನಗಳ ಸಂಚಾರಕ್ಕೆ ಅವಕಾಶವಿಲ್ಲ. ಮೆಟ್ರೋ ರೈಲು ಸೇವೆ ಸಹ ಇರುವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕೆಂಪು ವಲಯದಲ್ಲಿ ಮುಂಬೈ; ಜನರಿಗೆ ಪೊಲೀಸರ ಎಚ್ಚರಿಕೆ ಕೆಂಪು ವಲಯದಲ್ಲಿ ಮುಂಬೈ; ಜನರಿಗೆ ಪೊಲೀಸರ ಎಚ್ಚರಿಕೆ

Maharashtra Issues Revised Guidelines For Lock Down Phase 4

ಎಲ್ಲಾ ದೇವಾಲಯ, ಚರ್ಚ್, ಮಸೀದಿ ಬಾಗಿಲು ತೆರೆಯಬಾರದು ಎಂದು ಸೂಚನೆ ನೀಡಲಾಗಿದೆ. ಮಾರ್ಗಸೂಚಿ ಪ್ರಕಾರ ಧಾರ್ಮಿಕ ಕಾರ್ಯಕ್ರಮ, ಜನರನ್ನು ಸೇರಿಸಿ ಸಮಾವೇಶ ನಡೆಸುವುದನ್ನು ನಿರ್ಬಂಧಿಸಲಾಗಿದೆ. ಮಾಲ್, ಥಿಯೇಟರ್, ಬಾರ್, ರೆಸ್ಟೋರೆಂಟ್ ಬಾಗಿಲು ತೆರೆಯಬಾರದು ಎಂದು ತಿಳಿಸಲಾಗಿದೆ.

ಮಹಾರಾಷ್ಟ್ರ ಪೊಲೀಸ್ ಮೇಲೆ ಕೊರೊನಾ ಅಟ್ಟಹಾಸ, 1000 ಸಿಬ್ಬಂದಿಗೆ ಸೋಂಕುಮಹಾರಾಷ್ಟ್ರ ಪೊಲೀಸ್ ಮೇಲೆ ಕೊರೊನಾ ಅಟ್ಟಹಾಸ, 1000 ಸಿಬ್ಬಂದಿಗೆ ಸೋಂಕು

ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರೆ ವಾಹನಗಳು ಸಂಜೆ 7ರಿಂದ ಬೆಳಗ್ಗೆ 7ರ ತನಕ ಸಂಚಾರ ನಡೆಸಬಾರದು. ರಾಜ್ಯಾದ್ಯಂತ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಸಂಜೆ 7 ರಿಂದ ಬೆಳಗ್ಗೆ 7ರ ತನಕ ಜಾರಿಯಲ್ಲಿ ಇರುತ್ತದೆ.

65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, 10 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳು ತೀರಾ ಅನಿವಾರ್ಯ ಸಂದರ್ಭ ಹೊರತುಪಡಿಸಿ ಸಂಚಾರ ನಡೆಸುವಂತಿಲ್ಲ ಎಂದು ಮಾರ್ಗಸೂಚಿ ಹೇಳಿದೆ.

ಪ್ರಸ್ತುತ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 35,058. ಇದುವರೆಗೂ 1249 ಜನರು ಮೃತಪಟ್ಟಿದ್ದಾರೆ. ಮುಂಬೈ ನಗರದಲ್ಲಿಯೇ ಸೋಂಕಿತರ ಸಂಖ್ಯೆ 21,335.

English summary
Coronavirus hot spot state Maharashtra issued revised guidelines for lock down phase 4. All industrial units/construction sites are permitted to operate in the red zones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X