ಮುಂಬೈ 'ಡಬ್ಬಾವಾಲಾ'ಗಳಿಗೆ ಮನೆ ನಿರ್ಮಿಸಲು ಮುಂದಾದ ಮಹಾರಾಷ್ಟ್ರ ಸರ್ಕಾರ
ಡಬ್ಬಾವಾಲಾಮುಂಬೈ, ಫೆಬ್ರವರಿ 14: ಮಹಾರಾಷ್ಟ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ಮುಂಬೈನ್ ಪ್ರಸಿದ್ಧ 'ಡಬ್ಬಾವಾಲಾಗಳಿಗೆ' ಮನೆ ನಿರ್ಮಿಸಲು ಮುಂದಾಗಿದೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಗುರುವಾರ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಅವರು ರಾಜ್ಯ ಸರ್ಕಾರದ ಇಲಾಖೆಗಳಿಗೆ ನಿರ್ದೇಶನ ನೀಡಿದ್ದು, ಮುಂಬೈನಲ್ಲಿ ಡಬ್ಬಾವಾಲ ಭವನ ನಿರ್ಮಿಸಲು ಸೂಚನೆಎ ನೀಡಿದ್ದಾರೆ.
ಕಾರ್ಮಿಕ ಸಚಿವ ದಿಲಿಪ್ ಹಾಗೂ ಇತರೆ ಇಲಾಖೆಯ ಕಾರ್ಯದರ್ಶಿಗಳು , ಮಹಾರಾಷ್ಟ್ರ ಹೌಸಿಂಗ್ ಆಂಡ್ ಏರಿಯಾ ಡೆವಲಾಪ್‌ಮೆಂಟ್ ಅಥಾರಿಟಿ ಉಪಾಧ್ಯಕ್ಷ ಮಿಲಿಂದ್ ಸಭೆಯಲ್ಲಿ ಪಾಲ್ಗೊಂಡಿದ್ದರು.

'ಇದು ಸಂತಸದ ಸುದ್ದಿ, ಈ ನಿರ್ಧಾರ ತೆಗೆದುಕೊಂಡ ಅಜಿತ್ ಅವರಿಗೆ ತುಂಬು ಹೃದಯದ ಧನ್ಯವಾದ ತಿಳಿಸುತ್ತೇವೆ. ಇದರಿಂದ ಡಬ್ಬಾವಾಲಾಗಳಿಗೆ ತುಂಬಾ ಅನುಕೂಲವಾಗಲಿದೆ.' ಎಂದು ಮುಂಬೈ ಡಬ್ಬಾವಾಲ ಅಸೋಸಿಯೇಷನ್ ಅಧ್ಯಕ್ಷ ಸುಭಾಷ್ ತಾಳೇಕರ್ ತಿಳಿಸಿದ್ದಾರೆ.












Click it and Unblock the Notifications