ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು : ಥಾಣೆ ಕಟ್ಟಡ ದುರಂತ, ಐವರು ಕನ್ನಡಿಗರ ಸಾವು

|
Google Oneindia Kannada News

ಮುಂಬೈ, ಆಗಸ್ಟ್ 3 : ಮಹಾರಾಷ್ಟ್ರದ ಥಾಣೆಯಲ್ಲಿ ಮಂಗಳವಾರ ಬೆಳಗ್ಗೆ ಕುಸಿದು ಬಿದ್ದ ಮೂರು ಅಂತಸ್ತಿನ ಕಟ್ಟಡ ಅವಶೇಷಗಳಡಿ ಸಿಲುಕಿ ಐವರು ಕನ್ನಡಿಗರು ಸೇರಿದಂತೆ 11 ಮಂದಿ ಮೃತಪಟ್ಟಿದ್ದಾರೆ. ಅಗ್ನಿ ಶಾಮಕ ದಳದವರು ಸತತ ಕಾರ್ಯಾಚರಣೆ ಬಳಿಕ 10 ಜನರನ್ನು ರಕ್ಷಣೆ ಮಾಡಿದ್ದಾರೆ.

ಮಹಾರಾಷ್ಟ್ರದ ಥಾಣೆಯ ನೌಪಾಡದಲ್ಲಿನ 'ಕೃಷ್ಣ ನಿವಾಸ್' ಹೆಸರಿನ ಕಟ್ಟಡ ಮಂಗಳವಾರ ಮುಂಜಾನೆ 2.30ರ ಸುಮಾರಿಗೆ ಕುಸಿದುಬಿದ್ದಿದೆ. ತಕ್ಷಣ ಕಾರ್ಯಾಚರಣೆ ಆರಂಭಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೊದಲು 8 ಜನರನ್ನು ರಕ್ಷಣೆ ಮಾಡಿದರು. ನಂತರ ಇಬ್ಬರನ್ನು ರಕ್ಷಿಸಿದರು. [ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿತ]

ಸುಮಾರು 50 ವರ್ಷದಷ್ಟು ಹಳೆಯ ಕಟ್ಟಡದಲ್ಲಿ 4 ಕುಟುಂಬಗಳು ವಾಸವಾಗಿದ್ದವು. ಈ ಕಟ್ಟಡ ಶಿಥಿಲಗೊಂಡಿದೆ. ಇಲ್ಲಿಂದ ಬೇರೆ ಸ್ಥಳಕ್ಕೆ ಹೋಗಿ ಎಂದು ಸ್ಥಳೀಯ ಆಡಳಿತದವರು ನೀಡಿದ್ದ ನೋಟಿಸ್‌ ಅನ್ನು ಕುಟುಂಬಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇಂದು ಬೆಳಗ್ಗೆ ಕಟ್ಟಡ ಕುಸಿದು ಬಿದ್ದು ದುರ್ಘಟನೆ ಸಂಭವಿಸಿದೆ. ಕಟ್ಟಡ ದುರಂತದ ಚಿತ್ರಗಳು ಇಲ್ಲಿವೆ..... ಪಿಟಿಐ ಚಿತ್ರಗಳು [ಥಾಣೆ ದುರಂತ: ಮೃತ್ಯುಕೂಪವಾದ ಮಾತೃಛಾಯಾ ಕಟ್ಟಡ]

ಕಟ್ಟಡ ಕುಸಿತ 11 ಸಾವು

ಕಟ್ಟಡ ಕುಸಿತ 11 ಸಾವು

ಮಹಾರಾಷ್ಟ್ರದ ಥಾಣೆಯಲ್ಲಿ ಮಂಗಳವಾರ ಬೆಳಗ್ಗೆ ಕುಸಿದು ಬಿದ್ದ ಮೂರು ಅಂತಸ್ತಿನ ಕಟ್ಟಡ ಅವಶೇಷಗಳಡಿ ಸಿಲುಕಿ ಐವರು ಕನ್ನಡಿಗರು ಸೇರಿದಂತೆ 11 ಮಂದಿ ಮೃತಪಟ್ಟಿದ್ದಾರೆ. ಸತತ ಕಾರ್ಯಾಚರಣೆ ಬಳಿಕ 10 ಜನರನ್ನು ರಕ್ಷಣೆ ಮಾಡಲಾಗಿದೆ.

 2.30ರ ಸುಮಾರಿಗೆ ಕುಸಿದ ಕಟ್ಟಡ

2.30ರ ಸುಮಾರಿಗೆ ಕುಸಿದ ಕಟ್ಟಡ

ಮಹಾರಾಷ್ಟ್ರದ ಥಾಣೆಯ ನೌಪಾಡದಲ್ಲಿನ 'ಕೃಷ್ಣ ನಿವಾಸ್' ಹೆಸರಿನ ಕಟ್ಟಡ ಮಂಗಳವಾರ ಮುಂಜಾನೆ 2.30ರ ಸುಮಾರಿಗೆ ಕುಸಿದುಬಿದ್ದಿದೆ. ತಕ್ಷಣ ಕಾರ್ಯಾಚರಣೆ ಆರಂಭಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೊದಲು 8 ಜನರನ್ನು ರಕ್ಷಣೆ ಮಾಡಿದರು.

ಮನೆ ತೆರವಿಗೆ ನೋಟಿಸ್ ಕೊಟ್ಟಿದ್ದರು

ಮನೆ ತೆರವಿಗೆ ನೋಟಿಸ್ ಕೊಟ್ಟಿದ್ದರು

ಸುಮಾರು 50 ವರ್ಷದಷ್ಟು ಹಳೆಯ ಕಟ್ಟಡದಲ್ಲಿ 4 ಕುಟುಂಬಗಳು ವಾಸವಾಗಿದ್ದವು. ಈ ಕಟ್ಟಡ ಶಿಥಿಲಗೊಂಡಿದೆ. ಇಲ್ಲಿಂದ ಬೇರೆ ಸ್ಥಳಕ್ಕೆ ಹೋಗಿ ಎಂದು ಸ್ಥಳೀಯ ಆಡಳಿತದವರು ನೀಡಿದ್ದ ನೋಟಿಸ್‌ ಅನ್ನು ಕುಟುಂಬಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ.

11 ಜನರ ರಕ್ಷಣೆ, ಮೂವರ ಸ್ಥಿತಿ ಗಂಭೀರ

11 ಜನರ ರಕ್ಷಣೆ, ಮೂವರ ಸ್ಥಿತಿ ಗಂಭೀರ

ಕಟ್ಟಡ ಅವಶೇಷಗಳಡಿ ಸಿಲುಕಿದ್ದ 11 ಜನರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡವರಲ್ಲಿ 5 ಜನರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಐವರು ಕನ್ನಡಿಗರ ಸಾವು

ಐವರು ಕನ್ನಡಿಗರ ಸಾವು

ಕಟ್ಟಡ ದುರಂತದಲ್ಲಿ 5 ಕನ್ನಡಿಗರು ಮೃತಪಟ್ಟಿದ್ದಾರೆ. ಮೃತಪಟ್ಟರೆಲ್ಲಾ ಬಂಟ್ವಾಳದವರು. ಮೃತಪಟ್ಟವರನ್ನು ಪಾಂಡುರಂಗ ಭಟ್ (62), ಮೀರಾ ಪಾಂಡುರಂಗ ಭಟ್ (58), ಸುಬ್ರಾಯ್ ಭಟ್ (56), ರುಚಿತ ಭಟ್ (25), ರಶ್ಮಿ ರಾಮಚಂದ್ರ ಭಟ್ (25) ಎಂದು ಗುರುತಿಸಲಾಗಿದೆ.

English summary
11 people have died after a three-store building collapsed in Naupada, Maharashtra. At least 10 people have been pulled out of the debris so far. The building collapsed around 2.30 am on Tuesday early morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X