ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರಾಠರ ಆಕ್ರೋಶಕ್ಕೆ ಬಗ್ಗಿದ ಸರ್ಕಾರ: ಶೇ.16 ಮೀಸಲಾತಿ

|
Google Oneindia Kannada News

ಮುಂಬೈ, ನವೆಂಬರ್ 29: ಮರಾಠಾ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಶೇ.16 ರಷ್ಟು ಮೀಸಲಾತಿ ಕಲ್ಪಿಸುವ ಮರಾಠಾ ಕೋಟಾ ಮಸೂದೆಯನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಗುರುವಾರ ಮಂಡಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಮೀಸಲಾತಿ ವಾರ್, ಆತಂಕಗೊಂಡ ಒಬಿಸಿ ಸಮುದಾಯಮಹಾರಾಷ್ಟ್ರದಲ್ಲಿ ಮೀಸಲಾತಿ ವಾರ್, ಆತಂಕಗೊಂಡ ಒಬಿಸಿ ಸಮುದಾಯ

ವಿಧಾನಸಭೆಯಲ್ಲಿ ಮಸೂದೆ ಮಂಡನೆಯಾಗುತ್ತಿದ್ದಂತೆಯೇ ಅವಿರೋಧ ಒಪ್ಪಿಗೆ ದೊರೆತಿದೆ. ಸದ್ಯಕ್ಕೆ ಮರಾಠಾ ಮೀಸಲಾತಿ ಮಸೂದೆಯನ್ನು ಮೇಲ್ಮನೆಯ ಅನುಮತಿಗೆ ಕಾಯ್ದಿರಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ!ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ!

ಈ ಮಸೂದೆ ಮಂಡನೆಗೆ ಸಹಕರಿಸಿದ ಎಲ್ಲಾ ಪಕ್ಷದ ನಾಯಕರಿಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೃತಜ್ಞತೆ ಅರ್ಪಿಸಿದ್ದಾರೆ.

Maharashtra assembly passes bill promising 16% reservation to Marathas

ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಮಹಾರಾಷ್ಟ್ರದಾದ್ಯಂತ ಇತ್ತೀಚೆಗೆ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಮಹಾರಾಷ್ಟ್ರದಲ್ಲಿ ಈಗಾಗಲೇ ಶೇ 52 ಮೀಸಲಾತಿ ಇದ್ದು, ಮರಾಠಾ ಸಮುದಾಯಕ್ಕೆ ಶೇ 16 ಮೀಸಲು ಸಿಗುವ ಸಾಧ್ಯತೆಯಿದೆ. ಒಟ್ಟಾರೆ, ಮೀಸಲಾತಿ ಪ್ರಮಾಣ ಶೇ68ಕ್ಕೆ ತಲುಪಲಿದೆ.

ಈ ಮಸೂದೆಗೆ ಬೆಂಬಲ ನೀಡಲು ಬಿಜೆಪಿ ಮತ್ತು ಶಿವಸೇನೆ ತಮ್ಮ ಪಕ್ಷದ ಸದಸ್ಯರಿಗೆ ವ್ಹಿಪ್ ಜಾರಿಮಾಡಿದ್ದವು.

English summary
The Maharashtra Assembly on Thursday passed the much-awaited Maratha quota bill which promises 16% reservation to the members of the Maratha community in government jobs and the education sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X