ಅಗತ್ಯವಿದ್ದಲ್ಲಿ ಮಹಾರಾಷ್ಟ್ರ ರೈತರಿಗಾಗಿ ಹೊಸ ಕಾನೂನು: ಅಶೋಕ್ ಚವಾಣ್
ಮುಂಬೈ,ಜನವರಿ 29: ಅಗತ್ಯವಿದ್ದರೆ ಮಹಾರಾಷ್ಟ್ರ ರೈತರಿಗಾಗಿ ಹೊಸ ಕಾನೂನು ಜಾರಿಗೊಳಿಸುವುದಾಗಿ ಸಚಿವ ಅಶೋಕ್ ಚವಾಣ್ ಹೇಳಿದ್ದಾರೆ.
ಪಂಜಾಬ್, ರಾಜಸ್ಥಾನ ಮತ್ತಿತರ ರಾಜ್ಯಗಳು ಕೃಷಿ ಕಾನೂನುಗಳ ವಿರುದ್ಧ ಅಂಗೀಕರಿಸಿರುವ ನಿರ್ಣಯಗಳನ್ನು ಪರಿಶೀಲಿಸುವಂತೆ ವಿವಿಧ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.
ಕೃಷಿ ಕಾನೂನುಗಳ ಮೇಲಿನ ಸಂಪುಟ ಉಪ ಸಮಿತಿ ಮುಖ್ಯಸ್ಥ ಉಪ ಮುಖ್ಯಮಂತ್ರಿ ಅಜಿತ್ ಪವರ್ ಜೊತೆಗೆ ಮಾತುಕತೆ ನಡೆಸಲಾಗುವುದು ಎಂದು ಅವರು ಹೇಳಿದರು.

ಮಹಾರಾಷ್ಟ್ರದ ಮಹಾ ವಿಕಾಸ್ ಆಘಾದಿ ಸರ್ಕಾರ ರಾಜ್ಯದಲ್ಲಿನ ರೈತರಿಗೆ ಹೊಸ ಕಾನೂನು ಮಾಡುವುದಾಗಿ ಮಹಾರಾಷ್ಟ್ರ ಪಿಡಬ್ಲ್ಯೂಡಿ ಸಚಿವ ಅಶೋಕ್ ಚವಾಣ್ ಹೇಳುವುದರೊಂದಿಗೆ ವಿವಾದವೊಂದನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
ಕೃಷಿ ಕಾನೂನುಗಳ ಕುರಿತ ಸುಪ್ರೀಂಕೋರ್ಟ್ ಆದೇಶವನ್ನು ಕಾಯುತ್ತಿದ್ದೇವೆ. ಅಗತ್ಯಬಿದ್ದೆ ತನ್ನದೇ ಹದ ಕಾನೂನನ್ನು ಸರ್ಕಾರಿ ಜಾರಿಗೆ ತರಲಿದೆ, ಈ ವಿಚಾರ ಸುಪ್ರೀಂಕೋರ್ಟ್ ನಲ್ಲಿ ಬಾಕಿ ಇರುವುದರಿಂದ ಮೂರು ಕೃಷಿ ಕಾನೂನುಗಳ ಮೇಲಿನ ಸಂಪುಟ ಉಪ ಸಮಿತಿ ಯಾವುದೇ ಸಭೆ ಮಾಡಿಲ್ಲ ಎಂದು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಈಗಾಗಲೇ ರೈತರು ಎರಡು ತಿಂಗಳಿಂದ ಕೇಂದ್ರ ಸರ್ಕಾರದ ಹೊಸ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಗಣರಾಜ್ಯೋತ್ಸವದಂದು ನಡೆದ ಪ್ರತಿಭಟನೆಯು ಹಿಂಸಾಚಾರದ ರೂಪ ತಳೆದಿತ್ತು. ಇದೀಗ ಅಶೋಕ್ ಚವಾಣ್ ಅವರ ಈ ಹೇಳಿಕೆ ಬಹಳ ವಿವಾದಕ್ಕೆ ಎಡೆಮಾಡಿಕೊಡಲಿದೆ.












Click it and Unblock the Notifications