• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬೈನಲ್ಲಿ ಸಂಚಾರ ಆರಂಭಿಸಿದ ಲೋಕಲ್ ರೈಲುಗಳು

|

ಮುಂಬೈ, ಜೂನ್ 15 : ಮುಂಬೈ ನಗರದಲ್ಲಿ ಜನರ ಜೀವನಾಡಿ ಲೋಕಲ್ ರೈಲುಗಳ ಸಂಚಾರ ಆರಂಭವಾಗಿದೆ. ಲಾಕ್ ಡೌನ್ ಘೋಷಣೆ ಬಳಿಕ ನಗರದಲ್ಲಿ ರೈಲುಗಳ ಸಂಚಾರ ಸ್ಥಗಿತವಾಗಿತ್ತು. ನಗರದಲ್ಲಿನ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 58,226.

ಮುಂಬೈ ಉಪನಗರ ರೈಲುಗಳು ಸೋಮವಾರದಿಂದ ಸಂಚಾರ ಆರಂಭಿಸಿವೆ. ಆಯ್ದ ಮಾರ್ಗದಲ್ಲಿ ರೈಲುಗಳ ಸಂಚಾರವನ್ನು ಆರಂಭಿಸಲಾಗಿದೆ. ಆದರೆ, ಸಾರ್ವಜನಿಕರು ರೈಲುಗಳಲ್ಲಿ ಸಂಚಾರ ನಡೆಸಲು ಇನ್ನೂ ಒಪ್ಪಿಗೆ ಸಿಕ್ಕಿಲ್ಲ.

ಏರ್ ಇಂಡಿಯಾ ವಿಮಾನದಲ್ಲೇ ಸತ್ತು ಬಿದ್ದವನ ಬಾಯಲ್ಲಿ ರಕ್ತ!

ಮಹಾರಾಷ್ಟ್ರ ಸರ್ಕಾರದ ಅಗತ್ಯ ಸಿಬ್ಬಂದಿಗಳು ಸಂಚಾರ ನಡೆಸಲು ಮಾತ್ರ ರೈಲುಗಳನ್ನು ಓಡಿಲಾಗುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ. ಒಟ್ಟು 60 ರೈಲುಗಳು ಸೋಮವಾರದಿಂದ ಸಂಚಾರ ಆರಂಭಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊರೊನಾ ವೈರಸ್ ಹಾವಳಿ: ಚೀನಾ ಹಿಂದಿಕ್ಕಿದ ಮಹಾರಾಷ್ಟ್ರ

ಚರ್ಚ್ ಗೇಟ್ ಹಾಗೂ ದಾಹಾನು ರೋಡ್ ನಡುವೆ ರೈಲುಗಳು ಸಂಚಾರ ನಡೆಸುತ್ತಿವೆ. ರೈಲುಗಳ ಸಂಚಾರದ ವೇಳೆ ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಇತರ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಅನ್ ಲಾಕ್: ಬಟ್ಟೆ ಅಂಗಡಿಗಳ ಟ್ರಯಲ್ ರೂಮ್ ನಿಷೇಧ

ಬೆಳಗ್ಗೆ 5.30ರಿಂದ ರಾತ್ರಿ 11.30ರ ತನಕ ಪ್ರತಿ 15 ನಿಮಿಷಕ್ಕೆ ಒಂದು ರೈಲು ಸಂಚಾರ ನಡೆಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಾರ್ವಜನಿಕರು ರೈಲುಗಳಲ್ಲಿ ಸಂಚಾರ ನಡೆಸುವಂತಿಲ್ಲ, ರೈಲು ನಿಲ್ದಾಣಕ್ಕೆ ಬರುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ಅದರಲ್ಲೂ ಮುಂಬೈನಗರವೊಂದರಲ್ಲಿಯೇ 58,226 ಸೋಂಕಿತರು ಇದ್ದಾರೆ. ನಗರದಲ್ಲಿ ಕೊರೊನಾ ವೈರಸ್ ಸೋಂಕು ಹತೋಟಿಗೆ ತರಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

ಮಾರ್ಚ್‌ನಲ್ಲಿ ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಲೋಕಲ್ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿತ್ತು. ಬಳಿಕ ಇದೇ ಮೊದಲ ಬಾರಿಗೆ ರೈಲುಗಳ ಸಂಚಾರವನ್ನು ಆರಂಭಿಸಲಾಗಿದೆ.

English summary
After the lock down announcement local train service resume in Mumbai. But train running only for people associated with essential services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X