ನ್ಯಾಯವಾದಿ ರಾಮ್ ಜೇಠ್ಮಲಾನಿ ಬಹುಪತ್ನೀವಲ್ಲಭ

lawyer-jethmalani-has-2-wives-many-girlfriends-subramanian-swamy
ಮುಂಬೈ, ಸೆ.24: ಕಾನೂನಿಗಿಂತ ಮುಖ್ಯವಾಗಿ ನೈಸರ್ಗಿಕ ನಿಯಮ ಪಾಲನೆ ಮಾಡಬೇಕಾಗುತ್ತದೆ. ಅದರಂತೆ ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಹೊಂದುವುದು ಅಸಹಜ. ಅಕ್ಷಮ್ಯ ಎಂದು ಬಿಜೆಪಿ ಧುರೀಣ ಡಾ. ಸುಬ್ರಹ್ಮಣ್ಯ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಗಮನಾರ್ಹವೆಂದರೆ, ಸುಬ್ರಹ್ಮಣ್ಯ ಸ್ವಾಮಿ ಅವರು ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರನ್ನುದ್ದೇಶಿಸಿ ಈ ಮಾತನ್ನು ಹೇಳಿದ್ದಾರೆ.

ಹೌದು, ಆ ಜೇಠ್ಮಲಾನಿಗೆ ಬಹುಪತ್ನಿಯರು ಇದ್ದಾರೆ. ಹಾಗಾಗಿ ಅವರು ನೈಸರ್ಗಿಕ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಬಗ್ಗೆ ಮಾತನಾಡುವಾಗ ಸ್ವತಃ ನ್ಯಾಯವಾದಿಯಾಗಿರುವ ಸುಬ್ರಹ್ಮಣ್ಯ ಸ್ವಾಮಿ ಅವರು ಈ ಮಾತನ್ನು ಹೇಳಿದ್ದಾರೆ.

'ಹಾಗಂತ ನಾನು ಜೇಠ್ಮಲಾನಿ ಅವರನ್ನು ಟೀಕಿಸುತ್ತಿಲ್ಲ. ಅದರ ಬಗ್ಗೆ ಅವರಿಗೇ (ಜೇಠ್ಮಲಾನಿ) ಯಾವುದೇ ಮುಚ್ಚುಮರೆ ಇಲ್ಲ. ಆದರೆ ನನ್ನ ದೃಷ್ಟಿಯಲ್ಲಂತೂ ಒಬ್ಬರಿಗಿಂತ ಹೆಚ್ಚು ಹೆಂಡಿರನ್ನು ಹೊಂದುವುದು ತಪ್ಪು' ಎಂದು ಸುಬ್ರಹ್ಮಣ್ಯ ಸ್ವಾಮಿ ಮಾರ್ಮಿಕವಾಗಿ ಹೇಳಿದರು.

ಏಕರೂಪ ನಾಗರಿಕ ಸಂಹಿತೆ ಬಗ್ಗೆ ಮಾತನಾಡಿದ ಸುಬ್ರಹ್ಮಣ್ಯ ಸ್ವಾಮಿ ಅವರು 'ದೇಶದಲ್ಲಿ ಮಸಲ್ಮಾನರು ಮಾತ್ರವೇ ಬಹುಪತ್ನಿಯರನ್ನು ಹೊಂದಿರುತ್ತಾರೆ ಎಂಬುದು ತಪ್ಪು. 2001ರ ಜನಗಣತಿ ಪ್ರಕಾರ ಕೇವಲ ಶೇ. 3.5ರಷ್ಟು ಮಂದಿ ಮುಸ್ಲಿಮರು ಮಾತ್ರವೇ ಇಬ್ಬರು ಪತ್ನಿಯರನ್ನು ಹೊಂದಿದ್ದಾರೆ. ಅದೇ ಹಿಂದೂಗಳ ಪೈಕಿ ಶೇ. 5ರಷ್ಟು ಮಂದಿ ಬಹುಪತ್ನೀವಲ್ಲಭರು' ಎಂದು ಮಾಹಿತಿ ನೀಡಿದರು.

'ಕರುಣಾನಿಧಿಗೆ ಮೂವರು, ಜೇಠ್ಮಲಾನಿಗೆ ಇಬ್ಬರು ಪತ್ನಿಯರು ಇದ್ದಾರೆ. ಅಲ್ಲಲ್ಲ ಜೇಠ್ಮಲಾನಿಗೆ ಅನೇಕ ಗರ್ಲ್ ಫ್ರೆಂಡ್ಸ್ ಇದ್ದಾರೆ' ಎಂದು ಸ್ವಾಮಿ ಉದಾಹರಣೆ ನೀಡಿದರು.

'ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೇಶದಲ್ಲಿನ ಎಲ್ಲ ಸಾಧುಸಂತರ ವರ್ಚಸ್ಸನ್ನು ಹಾಳುಮಾಡುತ್ತಿದ್ದಾರೆ' ಎಂದೂ ಸ್ವಾಮಿ ಇದೇ ವೇಳೆ ಕಿಡಿಕಾರಿದರು.

ಇನ್ನು ಮೋದಿ ನೇತೃತ್ವದ ಬಿಜೆಪಿ ಶಿವಸೇನೆ ಮತ್ತು ಶಿರೋಮಣಿ ಅಕಾಲಿ ದಳದ ಬೆಂಬಲದೊಂದಿಗೆ ಈ ಬಾರಿ 300 ಸ್ಥಾನಗಳನ್ನು ಗಳಿಸುವುದು ಖಚಿತ ಎಂದೂ ಸ್ವಾಮಿ ಭವಿಷ್ಯ ನುಡಿದರು.

ಈಶಾನ್ಯ ಮುಂಬೈ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ: ಈಶಾನ್ಯ ಮುಂಬೈ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿಯುವ ಸಾಧ್ಯತೆಯಿದೆ. ಗಮನಾರ್ಹವೆಂದರೆ ಈ ಹಿಂದೆಯೂ ಒಮ್ಮೆ ಈ ಕ್ಷೇತ್ರದಿಂದ ಸ್ಪರ್ಧಿಸಿ, ಚುನಾಯಿತರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+