• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿನ್ನೆ ಕುಸಿದ ಮುಂಬೈ ಸೇತುವೆ ಮೇಲಿತ್ತು ಕಸಬ್ ನ ಕರಾಳ ಕರಿನೆರಳು!

|

ಮುಂಬೈ ಮಾರ್ಚ್ 15: ಗುರುವಾರದಂದು ಸಂಜೆ ಆರು ಜನರನ್ನು ಬಲಿತೆಗೆದುಕೊಂಡ ಮುಂಬೈಯ ಪಾದಾಚಾರಿ ಸೇತುವೆಯ ಮೇಲೆ ಉಗ್ರ ಕಸಬ್ ನ ಕರಿನೆರಳಿದ್ದಿದ್ದು ಆ ಕರಾಳದಿನಗಳನ್ನು ಮತ್ತೊಮ್ಮೆ ನೆನಪಿಸುವಂತೆ ಮಾಡಿದೆ.

2008 ರ ನವೆಂಬರ್ 26 ರಂದು ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ ಟಿ)ರೈಲ್ವೇ ನಿಲ್ದಾಣದ ಪಾದಾಚಾರಿ ಸೇತುವೆ ಮಾರ್ಗವಾಗಿಯೇ ಉಗ್ರ ಅಜ್ಮಲ್ ಕಸಬ್ ಮತ್ತು ಇಸ್ಮಾಯಿಲ್ ಖಾನ್ ಬಂದಿದ್ದರು. ಅಲ್ಲಿಂದಲೇ ಗ್ರೆನೇಡ್ ಎಸೆದು ಸುಮಾರು 58 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದರು. ಜೊತೆಗೆ 104 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

'ಆ ರೆಡ್ ಸಿಗ್ನಲ್ ಬಿದ್ದಿರದಿದ್ದರೆ ಇನ್ನೂ ದೊಡ್ಡ ಅನಾಹುತವೇ ಆಗ್ತಿತ್ತು'

ಈ ಪದಾಚಾರಿ ಸೇತುವೆಯ ಮೂಲಕವೇ ಮುಂಬೈಯ ಕಮಾ ಆಸ್ಪತ್ರೆಗೆ ಕಸಬ್ ತೆರಳಿದ್ದ. ಈ ಸಂದರ್ಭದಲ್ಲಿಯೇ ಕಸಬ್ ನ ಫೋಟೋವನ್ನು ಫೋಟೋ ಜರ್ನಲಿಸ್ ಸೆಬಾಸ್ಟಿನ್ ಡಿಸೋಜಾ ಕ್ಲಿಕ್ಕಿಸಿದ್ದರು. ನಂತರ ಅದೇ ಚಿತ್ರವೇ ಕಸಬ್ ನನ್ನು ಹಿಡಿಯುವಲ್ಲಿ, ಮತ್ತು ಆತನೇ ದೋಷಿ ಎಂದು ಸಾಬೀತಾಗುವಲ್ಲಿ ಸಹಾಯಕವಾಯಿತು.

ಕಸಬ್ ಸೇತುವೆ ಎಂದೇ ನಾಮಕರಣ

ಕಸಬ್ ಸೇತುವೆ ಎಂದೇ ನಾಮಕರಣ

ಆ ಸೇತುವೆಯ ಮೂಲಕವೇ ಈ ಘೋರ ದುರಂತಕ್ಕೆ ಮುನ್ನುಡಿ ಬರೆದಿದ್ದ ಕಸಬ್ ಹೆಸರಿನ ಮೂಲಕವೇ ಕೆಲವು ಈ ಸೇತುವೆಯನ್ನು ಕರೆಯುತ್ತಿದ್ದರು. ಮುಂಬೈಯ ಎಷ್ಟೋ ಜನರ ಬಾಯಲ್ಲಿ ಈ ಸೇತುವೆ ಈಗಲೂ ಕಸಬ್ ಸೇತುವೆ ಎಂದೇ ಕರೆಸಿಕೊಂಡಿತ್ತು! ಯಾವ ದೇಶಸೇವೆಯನ್ನೂ ಮಾಡದೆ, ನೂರಾರು ಜನರ ಪ್ರಾಣ ತೆಗೆದು, ದೇಶ ದ್ರೋಹಿಯಾಗಿ, ನೂರಾರು ಕುಟುಂಬ ಶಾಶ್ವತವಾಗಿ ಕಣ್ಣೀರಲ್ಲೇ ಕೈತೊಳೆಯುವಂತೆ ಮಾಡಿದ ಕಸಬ್ ನ ಹೆಸರಲ್ಲಿ ಜನರ ಬಾಯಿಂದಲೇ ಆ ಸೇತುವೆಗೆ ನಾಮಕರಣವಾಗಿತ್ತು! ಇದು ದುರಂತವಲ್ಲದೆ ಮತ್ತೇನು?

ಯಾರೀತ ಕಸಬ್?

ಯಾರೀತ ಕಸಬ್?

25 ವರ್ಷ ವಯಸ್ಸಿನ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಸದಸ್ಯ ಮೊಹಮ್ಮದ್ ಅಜ್ಮಲ್ ಆಮೀರ್ ಕಸಬ್ ನನ್ನು ಘಟನೆಯಾದ ನಂತರ ಬಂಧಿಸಲಾಯಿತಾದರೂ ಹಲವು ವರ್ಷಗಳ ವಿಚಾರಣೆಯ ನಂತರ ಸುಪ್ರೀಂ ಕೋರ್ತ್ ಸಹ ಆತನಿಗೆ ಗಲ್ಲುಶಿಕ್ಷೆಯನ್ನು ಖಾಯಂಗೊಳಿಸಿದ ನಂತರ 2012 ರ ನವೆಂಬರ್ 21 ರಂದು ಯೆರವಾಡಾ ಜೈಲಿನಲ್ಲಿ ಬೆಳಿಗ್ಗೆಯೇ ಆತನನ್ನು ನೇಣಿಗೇರಿಸಲಾಯಿತು. ಆತನನ್ನು ನೇಣಿಗೇರಿಸಿದ ಮೇಲೆಯೇ ಆ ವಿಷಯವನ್ನು ಮಾಧ್ಯಮಗಳಿಗೆ ನೀಡಲಾಯಿತು. ಅದಕ್ಕೂ ಮುನ್ನ ಅದು ರಾಷ್ಟ್ರಪತಿ ಸೇರಿದಂತೆ ಆಯಕಟ್ಟಿನ ಹುದ್ದೆಯಲ್ಲಿದ್ದ ಕೆಲವರಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿರಲಿಲ್ಲ!

ಮುಂಬೈ : ರೈಲ್ವೆ ಪಾದಚಾರಿ ಸೇತುವೆ ಕುಸಿತ, 4 ಸಾವು

ಭಾರತದ ಇತಿಹಾಸದಲ್ಲಿ ರಕ್ತದ ಅಧ್ಯಾಯ

ಭಾರತದ ಇತಿಹಾಸದಲ್ಲಿ ರಕ್ತದ ಅಧ್ಯಾಯ

2008ರ ನವೆಂಬರ್ 26ರಂದು ಆರಂಭವಾದ ಭಯೋತ್ಪಾದಕ ದಾಳಿಯಲ್ಲಿ 9 ಉಗ್ರರು ಸೇರಿದಂತೆ 174 ಜನರು ಹತ್ಯೆಗೀಡಾದರೆ 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಸ್, ದಿ ಓಬೆರಾಯ್ ಟ್ರೈಡೆಂಟ್, ದಿ ತಾಜ್ ಪ್ಯಾಲೇಸ್ ಅಂಡ್ ಟವರ್, ಲಿಯೊಪೋಲ್ಡ್ ಕೆಫೆ, ಕಮಾ ಆಸ್ಪತ್ರೆ, ದಿ ನಾರಿಮನ್ ಹೌಸ್, ದಿ ಮೆಟ್ರೋ ಸಿನೆಮಾ, ಸೇಂಟ್ ಕ್ಸೇವಿಯರ್ ಕಾಲೇಜು ಮುಂತಾದೆಡೆಗಳಲ್ಲಿ ಉಗ್ರರು ದಾಳಿ ನಡೆಸಿದ್ದರು. ಈ ಘಟನೆ ಭಾರತದ ಇತಿಹಾಸದಲ್ಲೇ ರಕ್ತದ ಅಧ್ಯಾಯವಾಗಿ ಉಳಿದುಹೋಯಿತು.

ಅತ್ಯಂತ ರಹಸ್ಯವಾಗಿ ಅಂದು ನಡೆದಿತ್ತು ಅಜ್ಮಲ್ ಕಸಬ್ ಗಲ್ಲು ಶಿಕ್ಷೆ

ಸೇತುವೆ ಕುಸಿತಕ್ಕೆ ಕಾರಣವೇನು?

ಸೇತುವೆ ಕುಸಿತಕ್ಕೆ ಕಾರಣವೇನು?

ಈ ಸೇತುವೆಯ ದುರಸ್ತಿ ಕಾರ್ಯ ನಡೆಯುತ್ತಿದ್ದರೂ ಜನರು ಇದೇ ಮಾರ್ಗವನ್ನು ಉಪಯೋಗಿಸುತ್ತಿದ್ದರೂ. ದುರಸ್ತಿ ಕಾರ್ಯ ನಡೆಯುತ್ತಿದ್ದರಿಂದ ಈ ಮಾರ್ಗವನ್ನು ಉಪಯೋಗಿಸಬೇಡಿ ಎಂದು ಹೇಳುವ ಯಾವುದೇ ಸೈನ್ ಬೋರ್ಡ್ ಗಳೂ ಅಲ್ಲಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದು, ಆ ಕಾರಣದಿಂದಲೇ ಆರು ಜನ ಪ್ರಾಣ ಕಳೆದುಕೊಂಡಿದ್ದಾರೆ.

ಅಮಿತಾಬ್ ಬಚ್ಚನ್ ನೋಡಲು ಬಂದಿದ್ದೆ ಎಂದಿದ್ದ 26/11ರ ದಾಳಿಯ ಉಗ್ರ ಕಸಬ್

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ajmal Kasab who was main convict in 26/11 Mumbai terror attack was used the foot overbridge that collapsed near the Chhatrapati Shivaji Maharaj Terminus (CST) railway station in Mumbai on Thursday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more