ಸೈಫೀನಾ ಪುತ್ರ 'ತೈಮೂರ್' ಅಲಿ ಖಾನ್ ವಿರುದ್ಧ ಟ್ವಿಟ್ಟರ್ ನಲ್ಲಿ ಕಿಡಿ

Posted By:
Subscribe to Oneindia Kannada

ಮುಂಬೈ, ಡಿಸೆಂಬರ್ 21: ಹಿಂದಿ ಚಿತ್ರರಂಗದ ಜನಪ್ರಿಯ ಜೋಡಿ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ಗೆ ಮಗುವಾಗಿದ್ದು, ಮದುವಿಗೆ ತೈಮೂರ್ ಅಲಿ ಖಾನ್ ಪಟೌಡಿ ಎಂದು ಹೆಸರಿಟ್ಟಿದ್ದು ತಿಳಿದಿರಬಹುದು. ಈಗ ತೈಮೂರ್ ಎಂಬ ಹೆಸರು ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಹಿಡಿಶಾಪ ಹಾಕಲಾಗುತ್ತಿದೆ.

ದಕ್ಷಿಣ ಮುಂಬೈನ ಬ್ರೀಚ್‌ಕ್ಯಾಂಡಿ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದ ಕರೀನಾ ಅವರು, ಅಭಿಮಾನಿಗಳು, ಮಾಧ್ಯಮ ಮಿತ್ರರಿಗೆ ಥ್ಯಾಂಕ್ಸ್ ಎಂದಿದ್ದಾರೆ. [ಘರ್ ವಾಪಸಿ, ಲವ್ ಜಿಹಾದ್, ಕರೀನಾ ಕಪೂರ್ ಚಿತ್ರ :ಸೈಫ್ ಗರಂ]

ಜತೆಗೆ ತೈಮೂರ್ ಟ್ರೆಂಡಿಂಗ್ ನಲ್ಲಿದ್ದು, ಸ್ಟಾರ್ ದಂಪತಿಯ ಪುತ್ರನಾಗಿ ಅಷ್ಟೇ ಅಲ್ಲ, ಹತ್ಯಾಕಾಂಡ ಮಾಡಿದ ಮಂಗೋಲಿಯಾದ ದೊರೆ ತೈಮೂರ್ ಹೆಸರಿಟ್ಟುಕೊಂಡ ತಪ್ಪಿಗೆ ಸಾರ್ವಜನಿಕರಿಂದ ಹಿಡಿಶಾಪ ಹಾಕಿಸಿಕೊಂಡಿದ್ದಾನೆ.

ಸೈಫ್‌ ಅಲಿ ಖಾನ್ ಅವರಿಗೆ ಮಾಜಿ ಪತ್ನಿ ಅಮೃತಾ ಸಿಂಗ್‌ನಿಂದ ಸಾರಾ ಹಾಗೂ ಇಬ್ರಾಹಿಂ ಎಂಬ ಇಬ್ಬರು ಮಕ್ಕಳಿದ್ದಾರೆ. ಈಗ ಕರೀನಾರಿಂದ ಗಂಡು ಮಗು ಪಡೆದುಕೊಂಡಿದ್ದಾರೆ. ಪಟೌಡಿ, ಠಾಗೋರ್ ಹಾಗೂ ಕಪೂರ್ ಕುಟುಂಬಗಳ ಸಮ್ಮಿಲನದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ.

ಹಿಂದುತ್ವ ಸಂಘಟನೆಗಳು ಆಕ್ಷೇಪ

ಹಿಂದುತ್ವ ಸಂಘಟನೆಗಳು ಆಕ್ಷೇಪ

ಈ ಅಂತರ್ ಧರ್ಮೀಯ ಜೋಡಿಯ ಮಗುವಿಗೆ ತೈಮೂರ್ ಎಂದು ಹೆಸರಿಸಿರುವುದಕ್ಕೆ ಹಿಂದುತ್ವ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.ಕೆಲ ಮುಸ್ಲಿಮರು ಕೂಡಾ ತೈಮೂರ್ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನರಹಂತಕ ತೈಮೂರ್ ಹೆಸರಿಟ್ಟಿದ್ದೇಕೆ?

ದಿಲ್ಲಿಯಲ್ಲಿ ಒಂದೇ ದಿನ 1,00,000 ಮಂದಿ ಹಿಂದೂಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ತೈಮೂರ್ ಹೆಸರನ್ನು ಕರೀನಾ ಪುತ್ರನಿಗೆ ಇಟ್ಟಿರುವುದು ದುರಂತ.

ಯುರೋಪಿಯನ್ನರು ಹಿಟ್ಲರ್ ಹೆಸರಿಟ್ಟಂತೆ

ಕರೀನಾ ಹಾಗೂ ಸೈಫ್ ಅಲಿ ಖಾನ್ ಅವರು ತಮ್ಮ ಮಗುವಿಗೆ ತೈಮೂರು ಹೆಸರಿಡುವುದು, ಯುರೋಪಿಯನ್ನರು ತಮ್ಮ ಮಕ್ಕಳಿಗೆ ಹಿಟ್ಲರ್ ಹೆಸರಿಟ್ಟಂತೆ ಆಗಿದೆ.

ನವಜಾತ ಶಿಶುವಿಗೆ ಹಿಡಿಶಾಪ ಹಾಕಿದ್ದಾರೆ

ನವಜಾತ ಶಿಶುವಿಗೆ ಹಿಡಿಶಾಪ ಹಾಕಿದ್ದಾರೆ, ಕೆಲವರು ಕ್ಯಾನ್ಸರ್ ಬರಲಿ ಎಂದಿದ್ದಾರೆ. ಕೆಲವರು ಮತ್ತೊಬ್ಬ ಭಯೋತ್ಪಾದಕ ಹುಟ್ಟಿದ ಎಂದಿದ್ದಾರೆ, ಹೆಸರಿನಿಂದ ಏನೆಲ್ಲ ಅನರ್ಥವಾಗುತ್ತಿದೆ. ಇದು ಸಂಘ ಪರಿವಾರದವರ ಕುಮ್ಮಕ್ಕು.

ತೈಮೂರ್ ಗೆ ಸಾವು ಬರಲಿ

ತೈಮೂರ್ ಗೆ ಸಾವು ಬರಲಿ ಎಂದು ಶಾಪ ಹಾಕಿದ ಸುನಿಲ್ ಎಂಬವರ ಟ್ವೀಟ್

ಹಿಂದೂಗಳ ಹಂತಕ ತೈಮೂರ್ ಸಾಯಲಿ

ಹಿಂದೂಗಳ ಹಂತಕ ತೈಮೂರ್ ಸಾಯಲಿ ಎಂದು ಬಯಸಿದ ನಿಶಾ ಸಿಂಗ್.

ತೈಮೂರ್ ಸಾವರ್ತಿಕ ಹೆಸರೇ?

ತೈಮೂರ್ ಸಾವರ್ತಿಕ ಹೆಸರೇ? ಅಲ್ಲವೇ ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಖುಸ್ರೋ, ಬುಲ್ಲಿ, ವಾರೀಸ್ ಎಂಬ ಹೆಸರು ಬಳಕೆಯಾಗಿದ್ದು ಯಾವಾಗ, ತೈಮೂರ್ ಬಳಕೆ ಏಕೆ?

ತೈಮೂರ್ ದಾಳಿ ನಡೆಸಿದ್ದರ ಬಗ್ಗೆ ಸತ್ಯಾಸತ್ಯತೆ

ತೈಮೂರ್ ದಾಳಿ ನಡೆಸಿದ್ದರ ಬಗ್ಗೆ ಸತ್ಯಾಸತ್ಯತೆ, ಎಲ್ಲಿ ದಾಳಿ ನಡೆಸಲಾಯಿತು, ಹಿಂದೂಗಳನ್ನು ಗುರಿಯಾಗಿಸಿದ್ದು ಏಕೆ? ತೈಮೂರ್ ಹೆಸರಿನ ಬಗ್ಗೆ ಚರ್ಚೆ ಜಾರಿಯಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
On Dec. 20 actors Kareena Kapoor and Saif Ali Khan welcomed their first child, a baby boy, in Mumbai, naming him Taimur Ali Khan Pataudi. Twitter reaction was bit harsh on Taimur know the reason why?
Please Wait while comments are loading...