ಕೆನಡಾ ಪ್ರಧಾನಿ ಪತ್ನಿ ಜೊತೆ ಖಾಲಿಸ್ತಾನಿ ಭಯೋತ್ಪಾದಕನ ಚಿತ್ರ! ಏನಿದು ವಿಚಿತ್ರ!

ಮುಂಬೈ, ಫೆಬ್ರವರಿ 22: ಒಂದು ವಾರದ ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಮತ್ತವರ ಕುಟುಂಬದ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಭಾರತೀಯ ಉಡುಗೆ ತೊಟ್ಟು ಗುಜರಾತಿನ ಅಕ್ಷರಧಾಮ, ಸಾಬರಮತಿ, ಆಗ್ರಾದ ತಾಜ್ ಮಹಲ್, ಪಂಜಾಬಿನ ಸ್ವರ್ಣಮಂದಿರಗಳಿಗೆ ಇವರು ಭೇಟಿ ನೀಡಿದ ಸುಂದರ ಚಿತ್ರಗಳು ಸಾಕಷ್ಟು ಸುದ್ದಿ ಮಾಡಿದ್ದವು.

ಆದರೆ ಇವರ ಹೊಸ ಚಿತ್ರವೊಂದು ಇದೀಗ ವಿವಾದ ಸೃಷ್ಟಿಸುತ್ತಿದೆ. ಮುಂಬೈಯಲ್ಲಿ ನಡೆದ ಡಿನ್ನರ್ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದ ಟ್ರುಡೋ ಕುಟುಂಬದ ಹೊಸ ಚಿತ್ರದಲ್ಲಿ ಟ್ರುಡೋ ಪತ್ನಿ ಜೊತೆ ಖಾಲಿಸ್ತಾನಿ ಭಯೋತ್ಪಾದಕ ಜಸ್ಪಾಲ್ ಅತ್ವಾಲ್ ಎಂಬುವವನು ಪೋಸು ನೀಡುತ್ತಿರುವ ಚಿತ್ರ ಇದೀಗ ವೈರಲ್ ಆಗಿ ವಿವಾದ ಸೃಷ್ಟಿಸಿದೆ.

ಅಷ್ಟೇ ಅಲ್ಲ, ಕೆಡಾದ ಮೂಲಸೌಕರ್ಯ ಸಚಿವ ಅಮರ್ಜಿತ್ ಸೋಹಿ ಎಂಬುವವರೊಂದಿಗೂ ಭಯೋತ್ಪಾದಕನ ಚಿತ್ರವಿದೆ. ಖಾಲಿಸ್ತಾನದ ನಿಷೇಧಿತ ಭಯೋತ್ಪಾದಕ ಸಂಘಟನೆಯೊಂದರ ಸದಸ್ಯನಾಗಿದ್ದ ಜಸ್ಪಾಲ್ ಅತ್ವಾನಲ್ , ಭಾರತದ ಮಾಜಿ ಸಚಿವರೊಬ್ಬರ ಕೊಲೆ ಪ್ರಯತ್ನದ ಆರೋಪದಲ್ಲಿ ದೋಷಿಯಾಗಿದ್ದಾನೆ.

ನಿಷೇಧಿತ ಭಯೋತ್ಪಾದಕ ಸಂಘಟನೆಯ ಸದಸ್ಯನ ಜೊತೆ ಟ್ರುಡೋ ಪತ್ನಿ ಮತ್ತು ಇನ್ನೋರ್ವ ಸಚಿವರು ಫೋಟೋ ಕ್ಲಿಕ್ಕಿಸಿಕೊಂದಿದ್ದು ಇದೀಗ ವಿವಾದದ ಕೇಂದ್ರಬಿಂಧು ಅನ್ನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+