ಕಾಳಧನ ಈಗ 'ಜನಧನ'ವಾಗಿದೆ: ಶಿವ್ ಪ್ರತಾಪ್ ಶುಕ್ಲಾ
ಮುಂಬೈ, ಜೂನ್ 16: "ಅಪನಗದೀಕರಣದ ನಂತರ ಸಂಗ್ರಹವಾದ ಕಾಳಧನವೇ 'ಜನಧನ'ವಾಗಿದೆ" ಎಂದು ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಶಿವ್ ಪ್ರತಾಪ್ ಶುಕ್ಲಾ ಹೇಳಿದ್ದಾರೆ.
"ಜನರು ಲಾಕರ್ ನಲ್ಲಿಟ್ಟು, ಲೆಕ್ಕಕ್ಕೆ ಸಿಗದಿದ್ದ ಹಣವನ್ನು ಅಪನಗದೀಕರಣದ ನಂತರ ಬ್ಯಾಂಕಿನಲ್ಲಿಟ್ಟಿದ್ದಾರೆ. ಈ ಹಣವೇ ಈಗ 'ಜನಧನ' ವಾಗಿದೆ. ಅಂದರೆ ಕಪ್ಪು ಹಣವನ್ನು, ಬಿಳಿಹಣವನ್ನಾಗಿ ಬದಲಾಯಿಸಿ ದೇಶದ ಅಭಿವೃದ್ಧಿಗಾಗಿ ಬಳಸಲಾಗುತ್ತಿದೆ" ಎಂದು ಅವರು ಹೇಳಿದ್ದಾರೆ.

ಇದರಿಂದ ಆರಂಭದ ದಿನಗಳಲ್ಲಿ ಜನ ಕಷ್ಟ ಅನುಭವಿಸುವಂತಾಯಿತಾದರೂ, ಅದರ ಉಪಯೋಗವೇನು ಎಂಬುದು ಈಗ ತಿಳಿಯುತ್ತಿದೆ. ಯಾರದೋ ಒಬ್ಬರ ಬಳಿ ಸೇರಿಕೊಂಡಿದ್ದ ಕಪ್ಪು ಹಣ ಈಗ ಸಾರ್ವಜನಿಕರ ಹಣವಾಗಿದೆ ಎಂದು ಅವರು ಹೇಳಿದರು.











Click it and Unblock the Notifications