ನಟಿ ಜಿಯಾ ಆತ್ಮಹತ್ಯೆಯಿಂದ ಸತ್ತದ್ದು, ಕೊಲೆಯಲ್ಲ : ಸಿಬಿಐ

Posted By:
Subscribe to Oneindia Kannada

ಮುಂಬೈ, ಆಗಸ್ಟ್ 02: ಬಾಲಿವುಡ್ ನಟಿ ಜಿಯಾ ಖಾನ್ ಅವರ ಸಾವು ಆತ್ಮಹತ್ಯೆಯಿಂದ ಸಂಭವಿಸಿದ್ದು, ಕೊಲೆಯಾಗಿಲ್ಲ ಎಂದು ಬಾಂಬೆ ಹೈಕೋರ್ಟಿಗೆ ಸಿಬಿಐ ತಿಳಿಸಿದೆ.

ಜಸ್ಟೀಸ್ ನರೇಶ್ ಪಾಟೀಲ್ ಹಾಗೂ ಜಸ್ಟೀಸ್ ಪ್ರಕಾಶ್ ನಾಯ್ಕ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಪ್ರಕರಣದ ಕುರಿತು ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣದಲ್ಲಿ (ಸೂರಜ್ ಪಾಂಚೋಲಿ) ಯಾರನ್ನು ರಕ್ಷಿಸಲಾಗುತ್ತಿಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗಿದ್ದು, ಇದೀಗ ಸಿಬಿಐ ಆತ್ಮಹತ್ಯೆ ಎಂದು ವರದಿ ನೀಡಿದೆ ಎಂದು ಹೇಳಿದರು. [ಜಿಯಾಖಾನ್ ಸಾವು ಪ್ರಕರಣ, ಮರು ತನಿಖೆ ಇಲ್ಲ: ಸಿಬಿಐ]

ರಬಿಯಾ ಖಾನ್ ವಿರೋಧ : ಎಫ್ ಬಿಐ ತನಿಖೆ ಬೇಕು ಎಂದು ಆಗ್ರಹಿಸುತ್ತಾ ಬಂದಿರುವ ರಬಿಯಾ ಖಾನ್ (ಜಿಯಾ ಖಾನ್ ತಾಯಿ) ಸಿಬಿಐ ವರದಿಯನ್ನು ತಳ್ಳಿ ಹಾಕಿದ್ದಾರೆ. ಈ ಪ್ರಕರಣದಲ್ಲಿ ಮುಖ್ಯ ಆರೋಪಿಗಳನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಆಗಸ್ಟ್ 23ಕ್ಕೆ ರಬಿಯಾ ಖಾನ್ ಅವರು ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಲಿದೆ. [ನಟಿ ಜಿಯಾ ಖಾನ್ ಸಾವಿನ ಅಸಲಿ ರಹಸ್ಯ ಬಹಿರಂಗ]

ಮುಂಬೈನ ಜುಹು ಅಪಾರ್ಟ್ಮೆಂಟ್ ನಲ್ಲಿ ಜೂನ್ 5, 2013ರಂದು ಬ್ರಿಟಿಷ್-ಅಮೆರಿಕನ್ ನಟಿ ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಜೂನ್ 10ರಂದು ಜಿಯಾಳ ಗೆಳೆಯ ಸೂರಜ್ ಪಾಂಚೋಲಿಯನ್ನು ಪೊಲೀಸರು ಬಂಧಿಸಿದ್ದರು. ಪಾಂಚೋಲಿಗೆ ಜುಲೈ 3ರಂದು ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. [ಜಿಯಾ ಅಮ್ಮನ ಮೇಲೆ 100 ಕೋಟಿ ಕೇಸ್]

ಜಿಯಾ ಸಾವಿನ ನಿಜವಾದ ಕಾರಣವೇನು?

ಜಿಯಾ ಸಾವಿನ ನಿಜವಾದ ಕಾರಣವೇನು?

ನಿರಂತರವಾಗಿ ಗರ್ಭಿಣಿಯಾಗಿ ಗರ್ಭಪಾತ ಮಾಡಿಸಿಕೊಂಡಿದ್ದಾರೆ. ಇದರಿಂದ ಮನನೊಂದಿದ್ದರು. ಪ್ರೇಮ ವೈಫಲ್ಯದಿಂದ ಬಳಲುವುದಕ್ಕೂ ಮುನ್ನ ಆಕೆ ನಾಲ್ಕು ವಾರಗಳ ಗರ್ಭಿಣಿಯಾಗಿದ್ದರು. ಈ ವಿಷಯವನ್ನು ಪಂಚೋಲಿ ಫ್ಯಾಮಿಲಿ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಗರ್ಭವನ್ನು ತೆಗೆಸುವಂತೆ ಒತ್ತಾಯಿಸಿದರು.ಒತ್ತಾಯದಿಂದ ತುರ್ತಾಗಿ ವೈದ್ಯಕೀಯ ನೆರವು ಬಯಸಿದ ಜಿಯಾಗೆ ಸೂರಜ್ ಆಸರೆ ಸಿಗಲಿಲ್ಲ.

ಸೂರಜ್ ವಿಳಂಬ ಮಾಡೀದ್ದು ಮಾರಕವಾಯಿತೆ?

ಸೂರಜ್ ವಿಳಂಬ ಮಾಡೀದ್ದು ಮಾರಕವಾಯಿತೆ?

ಒತ್ತಾಯಕ್ಕೆ ಮಣಿದು ಪ್ರಸೂತಿ ತಜ್ಞರನ್ನು ಸಂಪರ್ಕಿಸಿದ ಜಿಯಾಗೆ ಕೊಟ್ಟ ಮಾತ್ರೆಗಳು ಕೆಲಸಕ್ಕೆ ಬರಲಿಲ್ಲ. ಮತ್ತೊಂದೆಡೆ ವೈದ್ಯರನ್ನು ಕಂಡು ಮಾತ್ರೆಗಳನ್ನು ತೆಗೆದುಕೊಂಡ ಜಿಯಾ ತನ್ನ ಸಾವಿಗೆ ಮುನ್ನಡಿ ಬರೆದಿದ್ದಳು. ಈ ಸಮಯದಲ್ಲಿ ಸೂರಜ್ ನೆರವು ಕೋರಿದ್ದಾಳೆ. ಅದರೆ, ಸೂರಜ್ ವಿಳಂಬ ಮಾಡಿ, ತಜ್ಞ ವೈದ್ಯರನ್ನು ಕರೆ ತರುವುದಾಗಿ ಹೇಳಿದ್ದಾನೆ. ಅದರೆ, ಅಷ್ಟರಲ್ಲಿ ಗರ್ಭಪಾತವಾಗಿದೆ. ನೋವಿನಿಂದ ಬಳಲುತ್ತಿದ್ದ ಜಿಯಾಳನ್ನು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಿಲ್ಲ

ನಿಗೂಢವಾಗಿ ಉಳಿದ ಜಿಯಾ ಬರೆದ ಪತ್ರ

ನಿಗೂಢವಾಗಿ ಉಳಿದ ಜಿಯಾ ಬರೆದ ಪತ್ರ

ಜಿಯಾ ಬರೆದಿದ್ದಾಳೆ ಎನ್ನಲಾದ ಎರಡು ಪತ್ರಗಳ ಕೈಬರಹದ ಸ್ಯಾಂಪಲ್ ಕೋರ್ಟಿಗೆ ನೀಡಿ ಇದರ ವರದಿ ಆಧಾರದ ಮೇಲೆ ನನ್ನ ಕಕ್ಷಿದಾರ ಮೃತಳಿಗೆ ಹಿಂಸೆ ನೀಡಿದ ದಿನಾಂಕ ಹಾಗೂ ಪತ್ರ ಬರೆದಿರುವ ದಿನಾಂಕ ಪರಿಶೀಲಿಸಿ ಎಂದು ಸೂರಜ್ ವಕೀಲರು ವಾದಿಸಿದ್ದು ಪ್ರಕರಣಕ್ಕೆ ಬೇರೆ ತಿರುವು ನೀಡಿತ್ತು. ರಬಿಯಾ ಅವರ ಸತತ ಪ್ರಯತ್ನದಿಂದ ಕುಂಠಿತಗೊಂಡಿದ್ದ ತನಿಖೆ ಮತ್ತೆ ಆರಂಭವಾದರೂ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಜೊತೆಗೆ ಸಾಗರ್ ಸಂಗೀತ್ ಅಪಾರ್ಟ್ಮೆಂಟ್ ಗೆ ಆದಿತ್ಯಾ ಪಂಚೋಲಿ ಬಂದು ಹೋಗಿರುವ ಸಿಸಿಟಿವಿ ತುಣುಕು ಬಗ್ಗೆ ವರದಿಯಲ್ಲಿ ಏನು ಇಲ್ಲ.

ರಬಿಯಾ ಖಾನ್ ಮುಂದಿರುವ ಆಯ್ಕೆಗಳೇನು?

ರಬಿಯಾ ಖಾನ್ ಮುಂದಿರುವ ಆಯ್ಕೆಗಳೇನು?

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಬಿಯಾ ಅವರು ಸಿಬಿಐ ನೀಡಿರುವ ವರದಿಗೆ ಪ್ರತಿಕ್ರಿಯಿಸಲು ಕಾಲಾವಕಾಶವನ್ನು ಜಸ್ಟೀಸ್ ನರೇಶ್ ಪಾಟೀಲ್ ನೀಡಿದ್ದಾರೆ. ಎಸ್ ಐಟಿ ತನಿಖೆ ಹಾಗೂ ಎಫ್ ಬಿಐ ನೆರವು ಏಕೆ ಬೇಕೆ ಎಂಬುದಕ್ಕೆ ಬಲವಾದ ಸಾಕ್ಷಿಯನ್ನು ರಬಿಯಾ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಫೊರೆನ್ಸಿಕ್ ವರದಿ ಮಹತ್ವದ ಪಾತ್ರವಹಿಸಲಿದ್ದು, ಆತ್ಮಹತ್ಯೆಯಲ್ಲ ಎಂಬುದನ್ನು ಸಾಬೀತುಪಡಿಸಬಹುದಾಗಿದೆ. ಆಗಸ್ಟ್ 23ರಂದು ಅರ್ಜಿ ವಿಚಾರಣೆ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Central Bureau of Investigation (CBI) on informed the Bombay High Court that its team has ruled out murder in the Actor Jiah Khan Death case. The next hearing of the case is on August 23, 2016.
Please Wait while comments are loading...