ದೇವೇಗೌಡ್ರು ಅಚ್ಚರಿಯ ರೀತಿಯಲ್ಲಿ ಪ್ರಧಾನಿ ಪಟ್ಟ ಏರಲಿದ್ದಾರೆ

Recommended Video

      ದೇವೇಗೌಡರು ಪ್ರಧಾನಿ ಆಗೋದು ನಿಶ್ಚಿತ..!?

      ಮುಂಬೈ, ಮೇ 3 (ಪಿಟಿಐ): ನರೇಂದ್ರ ಮೋದಿಯಾಗಲಿ, ರಾಹುಲ್ ಗಾಂಧಿಯಾಗಲಿ ಇಬ್ಬರೂ ಪ್ರಧಾನಿಯಾಗುವುದಿಲ್ಲ, ತೃತೀಯರಂಗದ ವ್ಯಕ್ತಿಯೊಬ್ಬರು ಪ್ರಧಾನಿ ಹುದ್ದೆಗೆ ಏರಲಿದ್ದಾರೆಂದು ವಿಬಿಎ ಸಂಘಟನೆಯ ಸಂಚಾಲಕ ಪ್ರಕಾಶ್ ಅಂಬೇಡ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

      ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಪ್ರಕಾಶ್, ಚುನಾವಣೆ ಮುಗಿದ ನಂತರ ಸ್ಪಷ್ಟ ಚಿತ್ರಣ ಹೊರಬರಲಿದ್ದು, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ 'ಡಾರ್ಕ್ ಹಾರ್ಸ್' ಆಗಿ ಹೊರಹೊಮ್ಮಲಿದ್ದಾರೆ ಎಂದು ಹೇಳಿದ್ದಾರೆ.

      ಪ್ರಕಾಶ್ ಅವರ ವಿಬಿಎ ಮತ್ತು ಓವೈಸಿಯ ಎಐಎಂಐಎಂ ಪಕ್ಷ ಮಹಾರಾಷ್ಟ್ರದ ಎಲ್ಲಾ 48 ಲೋಕಸಭಾ ಸ್ಥಾನಗಳಿಗೆ ಸ್ಪರ್ಧಿಸಿದೆ. ನನ್ನ ಲೆಕ್ಕಾಚಾರದ ಪ್ರಕಾರ, ಯಾವ ಪಕ್ಷಕ್ಕೂ ಸ್ಪಷ್ಟವಾದ ಬಹುಮತ ಸಿಗುವುದಿಲ್ಲ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.

      JDS supremo Deve Gowda could be dark horse for PM post: Prakash Ambedkar

      ತೃತೀಯ ರಂಗದ ಅಚ್ಚರಿಯ ಹೆಸರೊಂದು ಪ್ರಧಾನಿ ಹುದ್ದೆಗೆ ಅಂತಿಮವಾಗಲಿದೆ. ಯಾರಾಗಬಹುದು ಎಂದು ಈಗಲೇ ಊಹಿಸುವುದು ಕಷ್ಟ, ನನ್ನ ಪ್ರಕಾರ ದೇವೇಗೌಡರು ಪ್ರಧಾನಿ ಹುದ್ದೆಗೆ ಏರಲಿದ್ದಾರೆ ಎನ್ನುವ ಇಂಗಿತವನ್ನು ಪ್ರಕಾಶ್ ವ್ಯಕ್ತಪಡಿಸಿದ್ದಾರೆ.

      ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಪಕ್ಷಗಳು ಒಟ್ಟಾಗಿ ಕೇಂದ್ರದಲ್ಲಿ ಅಧಿಕಾರಕ್ಕೇರಿದರೆ, ಜೆಡಿಎಸ್ ಮುಖಂಡರಾಗಿರುವ ದೇವೇಗೌಡ್ರು, ಆ ಹುದ್ದೆಗೆ ಉತ್ತಮ ಆಯ್ಕೆ ಎನ್ನುವುದು ನನ್ನ ಅಭಿಪ್ರಾಯ ಮತ್ತು ಎಲ್ಲರೂ ಒಪ್ಪುವ ಪಿಎಂ ಅಭ್ಯರ್ಥಿ ಕೂಡಾ ಅವರು ಎಂದು ಪ್ರಕಾಶ್ ಹೇಳಿದ್ದಾರೆ.

      ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ, ಇನ್ನು ಕಾಂಗ್ರೆಸ್ಸಿಗೆ ಸ್ಥಳೀಯ ಪಕ್ಷಗಳಿಂದ ತೀವ್ರ ಪೈಪೋಟಿಯಿದೆ, ಜೊತೆಗೆ, ರಾಹುಲ್ ಗಾಂಧಿಯವರನ್ನು ಪಿಎಂ ಹುದ್ದೆಗೆ ಒಪ್ಪಿಕೊಳ್ಳಲು ಪ್ರಾದೇಶಿಕ ಪಕ್ಷಗಳು ಸಿದ್ದರಿಲ್ಲ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+