ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಟಿಎಸ್ ಅಧಿಕಾರಿ ಹತ್ಯೆಯ ಬೆದರಿಕೆ ಹಾಕಿದ ಐಎಸ್‌ಐಎಸ್

By ವಿಕಾಸ್ ನಂಜಪ್ಪ
|
Google Oneindia Kannada News

ಮುಂಬೈ, ಜನವರಿ 13 : ಮಹಾರಾಷ್ಟ್ರದ ಎಟಿಎಸ್ ಅಧಿಕಾರಿಯನ್ನು ಹತ್ಯೆ ಮಾಡುವುದಾಗಿ ಐಎಸ್‌ಐಎಸ್ ಉಗ್ರರು ಬೆದರಿಕೆ ಹಾಕಿದ್ದಾರೆ. ಮುಂಬೈ ಪೊಲೀಸ್ ಆಯುಕ್ತರ ಕಚೇರಿಗೆ ಈ ಕುರಿತ ಬೆದರಿಕೆ ಪತ್ರ ಬಂದಿದೆ.

ಐಎಸ್‌ಐಎಸ್ ಉಗ್ರರ ಹೆಸರಿನಲ್ಲಿ ಬಂದಿರುವ ಪತ್ರದಲ್ಲಿ ಮಹಾರಾಷ್ಟ್ರ ಎಟಿಎಸ್‌ನ ಅಧಿಕಾರಿ ಭಾನುಪ್ರತಾಪ್ ಬಾರ್ಗೆ ಮತ್ತು ಅವರ ಕುಟುಂಬ ಸದಸ್ಯರನ್ನು ಹತ್ಯೆ ಮಾಡುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ. ಪತ್ರದ ಬಗ್ಗೆ ಎಟಿಎಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. [ಉಗ್ರರ ಪರ ಪ್ರಚಾರ, ಕಲಬುರಗಿ ವ್ಯಕ್ತಿ ಬಂಧನ]

isis

ಭಾನುಪ್ರತಾಪ್ ಬಾರ್ಗೆ ಅವರು ಪುಣೆ ವಿಭಾಗದ ಎಟಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ನಕಲಿ ಬೆದರಿಕೆ ಪತ್ರವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಪತ್ರ ಬಂದಿರುವ ವಿಳಾಸದ ಬಗ್ಗೆ ತನಿಖೆಯನ್ನು ಕೈಗೊಂಡಿದ್ದಾರೆ. [ಬಿಜಾಪುರದ ಅಬ್ದುಲ್ ISIS ಸೇರಿಲ್ಲ]

ಮಹಾರಾಷ್ಟ್ರ ಪೊಲೀಸರು ಐಎಸ್‌ಐಎಸ್ ಉಗ್ರ ಸಂಘಟನೆ ಕುರಿತು ಹಲವು ಪ್ರಕರಣಗಳ ತನಿಖೆಯನ್ನು ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸಂಘಟನೆ ಸೇರಲು ಹೊರಟಿದ್ದ 16 ವರ್ಷದ ಬಾಲಕಿಯನ್ನು ಪೊಲೀಸರು ತಡೆದಿದ್ದರು.

ಬಾಲಕಿ ಐಎಸ್‌ಐಎಸ್ ಪರವಾಗಿ ಮಾಡುತ್ತಿರುವ ಪ್ರಚಾರದಿಂದಾಗಿ ಆಕರ್ಷಿತಳಾಗಿದ್ದಳು. ಉಗ್ರ ಸಂಘಟನೆ ಸೇರಲಿದ್ದಾಳೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಆಕೆಯನ್ನು ತಡೆಯಲಾಗಿದ್ದು, ಕೌನ್ಸಿಲಿಂಗ್ ಮಾಡಲಾಗಿದೆ.

ಪುಣೆಯ ಬಾಲಕಿಯನ್ನು ರಕ್ಷಣೆ ಮಾಡಿದ ಉಗ್ರ ನಿಗ್ರಹ ದಳದ (ಎಟಿಎಸ್‌) ತಂಡದಲ್ಲಿ ಭಾನುಪ್ರತಾಪ್ ಬಾರ್ಗೆ ಅವರಿದ್ದರು. ಆದ್ದರಿಂದ ಅವರನ್ನು ಹತ್ಯೆ ಮಾಡುವ ಬೆದರಿಕೆ ಹಾಕಲಾಗಿದೆ ಎಂದು ಶಂಕಿಸಲಾಗಿದ್ದು, ತನಿಖೆ ಮುಂದುವರೆದಿದೆ.

English summary
The Maharashtra ATS is probing a letter threatening to kill a police officer. The letter states that it was written by members of the ISIS. In the letter, it is stated that Bhanupratap Bharge, an officer with the ATS, Pune wing would be killed along with his family members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X