ಪಾತಕಿ ದಾವೂದ್ ಮಾಜಿ ಬಂಟ ಏಜಾಜ್ ನಿಂದ ಸ್ಫೋಟಕ ಮಾಹಿತಿ

Recommended Video

      ಪಾಕ್ ಸೇನಾ ಮುಖ್ಯಸ್ಥರ ಬಗ್ಗೆ ಏಜಾಜ್ ಹೇಳಿದ್ದೇನು? | DAWOOD | PAKISTAN | ONEINDIA KANNADA

      ನವದೆಹಲಿ, ಜನವರಿ 16: ಇತ್ತೀಚೆಗೆ ಮುಂಬೈ ಪೊಲೀಸರಿಂದ ಬಂಧಿತನಾದ ಏಜಾಜ್ ಲಕ್ಡಾವಾಲ ವಿಚಾರಣೆ ಜಾರಿಯಲ್ಲಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗಿಗೆ ಸೇರಿದ ಮಾಜಿ ಬಂಟ ಏಜಾಜ್ ಲಕ್ಡಾವಾಲ, ದಾವೂದ್, ಐಎಸ್ಐ ಬಗ್ಗೆ ಸ್ಫೋಟಕ ಮಾಹಿತಿ ಹೊರ ಹಾಕಿರುವ ಸುದ್ದಿ ಬಂದಿದೆ.

      ಛೋಟಾ ರಾಜನ್, ದಾವೂದ್ ಇಬ್ರಾಹಿಂ ಬಂಟನಾಗಿದ್ದ ಏಜಾಜ್ ನಂತರ ಗ್ಯಾಂಗಿನಿಂದ ದೂರ ಉಳಿದಿದ್ದ ಏಜಾಜ್ ಮೇಲೆ ಸುಮಾರು 25 ಬೆದರಿಕೆ, ಕೊಲೆ ಯತ್ನ, ಗಲಭೆಗೆ ಕುಮ್ಮಕ್ಕು ಮುಂತಾದ ಪ್ರಕರಣಗಳು ದಾಖಲಾಗಿವೆ. ದಾವೂದ್ ಹಾಗೂ ಆತನ ಸಹಚರರನ್ನು ಎಎಸ್ಐ ಸಾಕುತ್ತಿದೆ. ದಾವೂದ್ ಈಗಲೂ ಕರಾಚಿಯಲ್ಲಿ ನೆಲೆಸಿದ್ದಾನೆ ಎಂದು ಮನೆ ವಿಳಾಸವನ್ನು ಲಕ್ಡಾವಾಲ ತಿಳಿಸಿದ್ದಾನೆ.

      ದಾವೂದ್ ಅಲ್ಲದೆ, ಅನೀಸ್, ಛೋಟಾ ಶಕೀಲ್ ಮುಂತಾದವರಿಗೂ ಐಎಸ್ಐ ಭದ್ರತೆ ಒದಗಿಸಿದೆ. ಈ ಬಗ್ಗೆ ಪಾಕಿಸ್ತಾನ ಪ್ರಧಾನಿ ,ಸೇನಾ ಮುಖ್ಯಸ್ಥರಿಗೂ ಅರಿವಿದೆ ಎಂದು ಲಕ್ಡಾವಾಲ ಹೇಳಿದ್ದಾನೆ.

      ISI sheltering Dawood who still lives in Pakistan: Former aide

      ಮುಂಬೈನ ಮಾಹಿಂ ನಿವಾಸಿಯಾಗಿದ್ದ ಏಜಾಜ್ 8ನೇ ತರಗತಿಯಲ್ಲಿರುವಾಗ ಸಹಪಾಠಿಗೆ ಕಾಂಪಸ್ ನಿಂದ ಚುಚ್ಚುವ ಮೂಲಕ ಕೈಂ ದಾಖಲಿಸಿದ್ದ. ರಿಮ್ಯಾಂಡ್ ಹೋಂ ಸೇರಿದ ಏಜಾಜ್ ನಂತರ 1980ರಲ್ಲಿ ಭೂಗತ ಲೋಕದ ಸದಸ್ಯನಾಗಿಬಿಟ್ಟ. ಡಿ ಗ್ಯಾಂಗ್ ಸೇರಿದ್ದ. ಡಿ ಗ್ಯಾಂಗ್ ಬಿಟ್ಟ ಬಳಿಕ ಛೋಟಾ ರಾಜನ್ ಜೊತೆ ಕೆಲಸ ಮಾಡುತ್ತಿದ್ದ. 1993ರ ಸ್ಫೋಟಕ ಪ್ರಕರಣದ ಆರೋಪಿ ರಾಜಿ ಎಂಬಾತನನ್ನು ಏಜಾಜ್ ಕೊಲೆ ಮಾಡಿದ. 1994ರಲ್ಲಿ ಬಂಧಿತನಾದ ,ಆದರೆ, ಜಾಮೀನು ಪಡೆದು ದೇಶ ತೊರೆದಿದ್ದ.

      ದಾವೂದ್, ಛೋಟಾ ರಾಜನ್ ಸಂಪರ್ಕ್ ಕಡಿತಗೊಂಡ ಬಳಿಕ 10 ವರ್ಷಗಳ ಹಿಂದೆ ತನ್ನದೇ ಹೊಸ ಗ್ಯಾಂಗ್ ಕಟ್ಟಿ ಭೂಗತ ಚಟುವಟಿಕೆಗಳಲ್ಲಿ ತೊಡಗಿದ್ದ. ಮಲೇಷಿಯಾ, ಯುನೈಟೆಡ್ ಸ್ಟೇಟ್ಸ್, ನೇಪಾಳ ಮುಂತಾದ ದೇಶಗಳಲ್ಲಿ ಕಳೆದ 10 ವರ್ಷಗಳಲ್ಲಿ ವಾಸವಿದ್ದ. ಈತನ ವಿರುದ್ಧ ಇಂಟರ್ ಪೋಲ್ ನಿಂದ ನೋಟಿಸ್ ಕೂಡಾ ಜಾರಿಗೊಳಿಸಲಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+