ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣರಾಜ್ಯೋತ್ಸವಕ್ಕೆ ಮುಂಬೈಗೆ ಬಾಂಬ್, ಉಗ್ರರ ಬೆದರಿಕೆ ಸಂದೇಶ

By ವಿಕ್ಕಿ ನಂಜಪ್ಪ
|
Google Oneindia Kannada News

ಮುಂಬೈ, ಜ. 16 : "Is 26/01/2015 BOM OK?" ಹೀಗೊಂದು ಸಂದೇಶವಿರುವ ಚೀಟಿಯನ್ನು ಮುಂಬೈನ ಏರ್ಪೋರ್ಟಿನ ಶೌಚಾಯಲದಲ್ಲಿ ಅಂಟಿಸಲಾಗಿದೆ. ಇದೇ ಸಂದೇಶವಿರುವ ಮತ್ತೆರಡು ಚೀಟಿಗಳು ಟರ್ಮಿನಲ್ ಎ1ನಲ್ಲಿ ಪತ್ತೆಯಾಗಿರುವುದು ಭದ್ರತಾ ಸಿಬ್ಬಂದಿಯನ್ನು ಕಟ್ಟೆಚ್ಚರದಿಂದಿರುವಂತೆ ಮಾಡಿದೆ.

ಜನವರಿ 10ರಂದು ಮುಂಬೈನಲ್ಲಿ ಐಎಸ್ಐಎಸ್ ಹಿಂಸಾತ್ಮಕ ಕೃತ್ಯ ಎಸಗಲಿದೆ ಎಂಬ ಸಂದೇಶ ಮುಂಬೈ ವಿಮಾನ ನಿಲ್ದಾಣದಲ್ಲಿ ಸಿಕ್ಕ ಎರಡು ವಾರಗಳಲ್ಲಿ, ಐಎಸ್ಐಎಸ್ ರವಾನಿಸಿರುವ ಮೇಲಿನ ಸಂದೇಶಗಳು ಮುಂಬೈ ಪೊಲೀಸರಿಗೆ ದೊರಕಿವೆ. [ಮಾದಕ ವಸ್ತು ಸಾಗಣೆ ನೆಪದಲ್ಲಿ ಒಳನುಸುಳುವ ಉಗ್ರರು]

Is 26-01-2015 BOM ok : Terror message found at Mumbai airport

ಉಗ್ರರದಾ, ಕಿಡಿಗೇಡಿಗಳ ಕೃತ್ಯವಾ? : ಗಣರಾಜ್ಯೋತ್ಸವ ದಿನದಂದು ಮುಂಬೈನಲ್ಲಿ ಭಯೋತ್ಪಾದಕ ಕೃತ್ಯ ಎಸಗುವ ಸೂಚನೆಯನ್ನು ಉಗ್ರ ಸಂಘಟನೆ ನೀಡಿದೆಯಾ? ಅಥವಾ ಕಿಡಿಗೇಡಿಗಳ ಕೃತ್ಯವಾ? ಏನೇ ಇರಲಿ ಇಂತಹ ಸಂದೇಶಗಳು ನಾಗರಿಕರಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತವೆ. ಆದರೆ, ನಾವು ಯಾವುದೇ ಚಾನ್ಸ್ ತೆಗೆದುಕೊಳ್ಳುವುದಿಲ್ಲ ಎಂದು ಮಹಾರಾಷ್ಟ್ರ ಎಟಿಎಸ್ (ಆಂಟಿ ಟೆರರಿಸ್ಟ್ ಸ್ಕ್ವಾಡ್) ಅಧಿಕಾರಿಯೊಬ್ಬರು ಒನ್ಇಂಡಿಯಾಗೆ ತಿಳಿಸಿದ್ದಾರೆ.

ಐಎಸ್ಐಎಸ್ ನಿಂದಾಗಿ ಮಹಾರಾಷ್ಟ್ರ ಸಾಕಷ್ಟು ತೊಂದರೆಗಳನ್ನು ಇತ್ತೀಚಿನ ದಿನಗಳಲ್ಲಿ ಅನುಭವಿಸಿದೆ. ಕೆಲ ತಿಂಗಳ ಹಿಂದೆ ಕಲ್ಯಾಣ್‌ನ ನಾಲ್ವರು ಯುವಕರು ಐಎಸ್ಐಎಸ್ ಸೇರಲು ಹೋಗಿದ್ದರು. ಆದರೆ, ಅವರಿಗೆ ಶೌಚಾಲಯ ತೊಳೆಯುವ ಚಾಕರಿ ನೀಡಿದ್ದರಿಂದ ಬೇಸತ್ತು ಮುಂಬೈಗೆ ವಾಪಸ್ ಬಂದಿದ್ದರು.


ತನಿಖೆ ಜಾರಿಯಲ್ಲಿದೆ : ಈ ಬೆದರಿಕೆಯ ಸಂದೇಶಗಳನ್ನು ಯಾರು ಬಿತ್ತರಿಸಿರಬಹುದು ಎಂಬುದನ್ನು ಪೊಲೀಸರು ಇನ್ನೂ ಪತ್ತೆ ಮಾಡಿಲ್ಲ. ತನಿಖೆ ಜಾರಿಯಲ್ಲಿದ್ದು, ಇದರ ಮೂಲ ಹುಡುಕುವ ಪ್ರಯತ್ನ ನಡೆದಿದೆ ಎಂದು ತನಿಖಾಧಿಕಾರಿಯೊಬ್ಬರು ಒನ್ಇಂಡಿಯಾಗೆ ತಿಳಿಸಿದ್ದಾರೆ.

ಎಲ್ಲ ಕೋನಗಳಿಂದ ತನಿಖೆ ಜಾರಿಯಲ್ಲಿದೆ ಮತ್ತು ದುಷ್ಕರ್ಮಿಯನ್ನು ಸದ್ಯದಲ್ಲಿಯೇ ಪತ್ತೆಹಚ್ಚಲಾಗುವುದು. ಇದು ಕಿಡಿಗೇಡಿಗಳ ಕೃತ್ಯವಾಗಿರಬಹುದಾದರೂ ನಾವು ಯಾವುದೇ ಅವಕಾಶಗಳನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಗರದ ಎಲ್ಲೆಡೆ ಭದ್ರತೆಯನ್ನು ಬಿಗಿಗೊಳಿಸಲಾಗುತ್ತಿದೆ. ಗಣರಾಜ್ಯೋತ್ಸವ ದಿನದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲೆಡೆ ಎಚ್ಚರಿಕೆಯ ಕಣ್ಣು ಇಡಲಾಗುತ್ತಿದೆ. ಎಚ್ಚರ ತಪ್ಪಿದ್ದರಿಂದಲೇ 2008ರ ನವೆಂಬರ್ 26ರಂದು ಪಾಕಿಸ್ತಾನದ ಉಗ್ರರು ಮುಂಬೈ ಮೂಲಕ ನುಸುಳಿ ವಿಧ್ವಂಸಕ ಕೃತ್ಯ ಎಸಗಿದ್ದನ್ನು ಮರೆಯುವಂತಿಲ್ಲ.

English summary
'Is 26/01/2015 BOM ok?' This was a message that has been found the toilet of the Mumbai airport. Two notes with the same message were found in the toilets located in Terminal A1 of the airport which has sent the agencies in the city into a tizzy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X