ಆಗಸದ ಮಧ್ಯೆ ಕೆಟ್ಟ ಎಂಜಿನ್: ಚೆನ್ನೈಗೆ ವಾಪಸಾದ ಇಂಡಿಗೋ ವಿಮಾನ
ಮುಂಬೈ, ಜನವರಿ 5: ಚೆನ್ನೈನಿಂದ ಕೋಲ್ಕತಾಕ್ಕೆ ತೆರಳುತ್ತಿದ್ದ ವಿಮಾನದ ಎಂಜಿನ್ ವಿಫಲಗೊಂಡು ಭಾರಿ ಸದ್ದು ಕೇಳಿಸಿದ ಕಾರಣ ಚೆನ್ನೈಗೆ ವಾಪಸಾಗಿದೆ.
ಇಂಡಿಗೋ ಏರ್‌ಬಸ್ ಎ320 ನಿಯೋ ವಿಮಾನವು ಆಗಸದ ನಡುವೆ ಎಂಜಿನ್ ವೈಫಲ್ಯಕ್ಕೆ ಒಳಗಾಗಿತ್ತು. ಅಲ್ಲದೆ, ಭಾರಿ ಸದ್ದು ಕೇಳಿಬಂದಿತ್ತು. ಈ ಘಟನೆ ಗುರುವಾರ ನಡೆದಿದ್ದು, ತಡವಾಗಿ ಬಹಿರಂಗವಾಗಿದೆ.
ನಾಗರಿಕ ವಿಮಾನಯಾನ ಸಚಿವಾಲಯವು ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ತನಿಖೆಗೆ ಸೂಚಿಸಿದೆ.

ಎಂಜಿನ್ ದೊಡ್ಡ ಸದ್ದಿನೊಂದಿಗೆ ಸ್ಥಗಿತಗೊಂಡಿತು. ಎಂಜಿನ್ ತಾಂತ್ರಿಕ ದೋಷ ಕಂಡುಬಂದ ಕಾರಣ ಪ್ರಯಾಣ ಮುಂದುವರಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಚೆನ್ನೈಗೆ ಮರಳಲಾಯಿತು. ಎಂಜಿನ್‌ನ ಬ್ಲೇಡ್‌ಗಳಿಗೆ ಹಾನಿಯಾಗಿದ್ದರಿಂದ ಅದನ್ನು ಸುರಕ್ಷಿತವಾಗಿ ವಾಪಸ್ ತರಲಾಗಿದೆ.
ಅಮೆರಿಕ ಮೂಲದ ಎಂಜಿನ್ ತಯಾರಕಾ ಕಂಪೆನಿ ಪ್ಯಾಟ್ & ವೈಟ್ನಿ ತಯಾರಿಸಿರುವ ಎಂಜಿನ್ ಆಗಿದ್ದು, ಇದು ಎಂಜಿನ್ ವೈಫಲ್ಯದ ಎರಡನೆಯ ನಿದರ್ಶನವಾಗಿದೆ.











Click it and Unblock the Notifications