ಮುಂಬೈಯಲ್ಲಿ ಸೈನಿಕನ ಆತ್ಮಹತ್ಯೆ: ಕಾರಣ ನಿಗೂಢ
ಮುಂಬೈ, ಜೂನ್ 27: ಮಹಾರಾಷ್ಟ್ರದ ಪುಣೆಯ ಖಾರ್ಕಿ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದ ಸೈನಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈಯ ನಾರಾಯಣ ಸೇವಾಶ್ರಮದಲ್ಲಿ, ಜೂನ್ 26 ರಂದು ನಡೆದಿದೆ.
ಆಶ್ರಮದಲ್ಲೇ ವಾಸವಾಗಿದ್ದ ನೀರಜ್ ಕುಮಾರ್ ಯಾದವ್ ಎಂಬ ಸೈನಿಕನೇ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಎಂದು ಗುರುತಿಸಲಾಗಿದೆ.

ಇಲ್ಲಿನ ಗಾಂದೇವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮೃತರ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಆದರೆ ಆತ್ಮಹತ್ಯೆಗೆ ಕಾರಣ ಮಾತ್ರ ನಿಗೂಢವಾಗಿಯೇ ಇದೆ.
ಇತ್ತೀಚೆಗೆ ಯೋಧರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಮಾನಸಿಕ ಒತ್ತಡದಿಂದಾಗಿ ಜೂನ್ 1 ರಂದು ಜಮ್ಮು ಕಾಶ್ಮೀರ ಮೂಲದ ಮೇಜರ್ ಗುರ್ಜಿತ್ ಸೀಮಗ್ ಬಾಲಿ ಎಂಬ ಯೋಧ ಆತ್ಮಹತ್ಯೆಗೆ ಶರಣಾಗಿದ್ದರು.
ಹಾಗೆಯೇ ಮೇ 4 ರಂದು ಬೆಳಹಗಾವಿಯ ವಿಶಾಲ್ ಲೋಹಾರ್ ಎಂಬ ಯೋಧ ಸಹ ಜಮ್ಮು ಕಾಶ್ಮೀರದ ಗಡಿಯಲ್ಲಿ ತಮಗೆ ತಾವೇ ಗುಂಡುಹೊಡೆದುಕೊಂದು ಆತ್ಮಹತ್ಯೆ ಮಾಡಿಕೊಂದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.












Click it and Unblock the Notifications