2018ಕ್ಕೆ ಭಾರತ ಭವ್ಯವಾಗಲಿದೆ: ಜ್ಯೋತಿಷಿಗಳು

ಮುಂಬೈ, ಮೇ 21: ಭವ್ಯವಾಗಿ ಸಂಸತ್ ಭವನದ ಪ್ರವೇಶಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಭವಿಷ್ಯ/ಶಕ್ತಿಯ ಬಗ್ಗೆ ಜ್ಯೋತಿಷಿಗಳು ಮಾತನಾಡಿದ್ದಾರೆ. ರಾಜಕೀಯ ವಿದ್ವಾಂಸರು ಪ್ರಧಾನಿ ನರೇಂದ್ರ ಮೋದಿ ಆಳ್ವಿಕೆಯಲ್ಲಿ ದೇಶಕ್ಕೆ ಭವ್ಯ ಭವಿಷ್ಯವಿದೆ ಎಂದು ಸಾರುತ್ತಾ ಬಂದಿದ್ದಾರೆ. ಈ ಮಧ್ಯೆ ಜ್ಯೋತಿಷ್ಯ ಪಂಡಿತರು ವ್ಯಕ್ತಿಗತವಾಗಿಯೂ ಮೋದಿ ಬಗ್ಗೆ ಭವಿಷ್ಯ ಹೇಳತೊಡಗಿದ್ದಾರೆ.

ನರೇಂದ್ರ ಮೋದಿ ಕನಿಷ್ಠ ಇನ್ನು 10 ವರ್ಷ ಕಾಲ ಪ್ರಧಾನಿಯಾಗಿ ದೇಶ ಸೇವೆ ಮಾಡಲಿದ್ದಾರೆ ಎಂದು ಖ್ಯಾತ ಜ್ಯೋತಿಷಿ ಬೇಜಾನ್ ದಾರೂವಾಲಾ ಹೇಳುತ್ತಾರೆ. 2012ರಲ್ಲಿ 2 ಬಾರಿ ಮೋದಿ ಕೈಗುಣ ನೋಡುವ ಸೌಭಾಗ್ಯ ತನಗೆ ದೊರೆತಿತ್ತು. ಮೋದಿ ಪ್ರಧಾನಿ ಆಗುವುದಾಗಿಯೂ ಮತ್ತು ವಿರೋಧಪಕ್ಷವನ್ನು ನುಚ್ಚುನೂರು ಮಾಡುವುದಾಗಿಯೂ ಆಗಲೇ ಮೋದಿ ಅವರಿಗೆ ಹೇಳಿದ್ದೆ ಎಂದು ದಾರೂವಾಲಾ ಹೇಳುತ್ತಾರೆ.

India to reach new heights by 2018 under Prime Minister Narendra Modi predict astrologers

ಮೋದಿಗೆ ವಿಶಿಷ್ಟವಾದ ಸಂಘಟನಾತ್ಮಕ ಶಕ್ತಿ ಸಾಮರ್ಥ್ಯಗಳಿವೆ. ಅವರು ರಾಜಕೀಯಕ್ಕೆ ಬರದಿದ್ದರೆ ಒಳ್ಳೆಯ ವೈದ್ಯರಾಗುತ್ತಿದ್ದರು, ಇಲ್ಲವೇ ಸೇನಾ ಕಮಾಂಡರ್ ಆಗಿರುತ್ತಿದ್ದರು. ವಿಶೇಷ ಸೇವೆ ಸಲ್ಲಿಸುವುದಕ್ಕಾಗಿಯೇ ಅವರು ಭೂಮಿ ಮೇಲೆ ಜನ್ಮ ತಾಳಿದ್ದಾರೆ. ಅಹಂಕಾರ/ಸ್ವಪ್ರತಿಷ್ಠೆಗೆ ನೀರೆರೆಯದೆ ನಿಸ್ವಾರ್ಥದಿಂದ ಸೇವೆ ಸಲ್ಲಿಸುವತ್ತ ಅವರು ಗಮನಹರಿಸಬೇಕು' ಎನ್ನುತ್ತಾರೆ ದಾರೂವಾಲಾ.

ದೇವತೆಗಳ ರಾಜ ಗುರು ಮತ್ತು ಬುಧಗ್ರಹ ಯೋಗದ ಜತೆಗೆ ಲಕ್ಷ್ಮಿ ಯೋಗವೂ ಮೋದಿ ಕುಂಡಲಿಯಲ್ಲಿದೆ. ಹಾಗಾಗಿ, ಷೇರು ಮಾರುಕಟ್ಟೆ, ರೂಪಾಯಿ ಮೌಲ್ಯ, ಉದ್ಯೋಗಾವಕಾಶಗಳು ವೃದ್ಧಿಸಲಿವೆ. ಆರೋಗ್ಯ, ಹಣಕಾಸು ಮತ್ತು ಮೂಲ ಸೌಕರ್ಯ ಕ್ಷೇತ್ರಗಳಲ್ಲಿ ಗಣನೀಯ ಅಭಿವರ್ಧನೆ ಕಂಡುಬರಲಿದೆ ಎಂದು ದಾರೂವಾಲಾ ಹೇಳುತ್ತಾರೆ.

ಚಂಡೀಗಢದ ಖ್ಯಾತ ಸಂಖ್ಯಾಶಾಸ್ತ್ರಜ್ಞ ಪಿ ಖುರಾನಾ ತಿಳಿಸುವಂತೆ ದೇಶದ ಆರ್ಥಿಕತೆ ಮೇಲೆ ಆವರಿಸುತ್ತಿದ್ದ ಕರಿಮೋಡಗಳು ಇನ್ನು ದೂರವಾಗಲಿವೆ. ಗಮನಾರ್ಹವೆಂದರೆ ಜನ ಈಗ ಮಾತನಾಡಿಕೊಳ್ಳುತ್ತಿರುವುದಕ್ಕೆ ವಿರುದ್ಧವಾಗಿ ಪಾಕಿಸ್ತಾನ, ಅಮೆರಿಕ, ಚೀನಾ ಜತೆಗಿನ ಭಾರತದ ಸಂಬಂಧ ಅರಳಲಿದೆ. ಆದರೆ ಮೋದಿ ಅವರಿಗೆ ಜೀವಬೆದರಿಕೆ ಕಾಡಲಿದೆ. ಅವರ ಸಮೀಪದವರೇ ಸವಾಲಾಗಿ ಪರಿಣಮಿಸುತ್ತಾರೆ. ಆದರೆ ಮೋದಿ ಅದನ್ನೆಲ್ಲಾ ಮೆಟ್ಟಿ ನಿಲ್ಲುತ್ತಾರೆ.

ಒಟ್ಟಾರೆಯಾಗಿ ಈ ಇಬ್ಬರೂ ಜ್ಯೋತಿಷಿಗಳು ಹೇಳುವಂತೆ 2018ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಸುಸ್ಥಿತಿಗೆ ಕೊಂಡೊಯ್ಯಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+