ಬಾಂಬೆ ಐಐಟಿ ಆಸ್ಥಾಗೆ 2 ಕೋಟಿ ರು ಸಂಬಳ ಆಫರ್

ಜೈಪುರ, ಡಿ.10: ಐಐಟಿ ಬಾಂಬೆ ವಿದ್ಯಾರ್ಥಿನಿಯೊಬ್ಬಳಿಗೆ ಸಾಮಾಜಿಕ ಜಾಲ ತಾಣ ಫೇಸ್‌ಬುಕ್ ಸುಮಾರು 2 ಕೋಟಿ ರು ಸಂಬಳ ಆಫರ್ ನೀಡಿದೆ.
ಮುಂಬೈನಲ್ಲಿರುವ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಓದುತ್ತಿರುವ 20 ವರ್ಷದ ವಿದ್ಯಾರ್ಥಿನಿ ಆಸ್ಥಾ ಅಗರ್ವಾಲ್ ಗೆ ಈ ಭಾರಿ ಮೊತ್ತದ ಉದ್ಯೋಗ ಅವಕಾಶ ಸಿಕ್ಕಿದೆ.

ಕಂಪ್ಯೂಟರ್ ಸೈನ್ಸ್ ವಿಭಾಗದ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿರುವ ಆಸ್ಥಾ ಅಗರ್ವಾಲ್ ಗೆ ಫೇಸ್‌ಬುಕ್ ನಿಂದ 2 ಕೋಟಿ ಭತ್ಯೆ ಮತ್ತು ಉದ್ಯೋಗದ ಆಫರ್ ಬಂದಿರುವುದನ್ನು ಐಐಟಿ ಬಾಂಬೆ ದೃಢಪಡಿಸಿದೆ.

ವಿದ್ಯಾರ್ಥಿನಿ ಆಸ್ಥಾ ಅಗರ್ವಾಲ್ ಅವರು ಮೂರನೇ ವರ್ಷದ ಪದವಿ ವ್ಯಾಸಂಗದ ವೇಳೆ ಅವರು ಕ್ಯಾಲಿಫೋರ್ನಿಯಾದಲ್ಲಿರುವ ಫೇಸ್‌ಬುಕ್ ಪ್ರಧಾನ ಕಚೇರಿಯಲ್ಲಿ 2 ತಿಂಗಳ ತರಬೇತಿ ಪಡೆದುಕೊಂಡಿದ್ದರು. ಕಳೆದ ಮೇ ಮತ್ತು ಜೂನ್ ತಿಂಗಳಿನಲ್ಲಿ ಆಸ್ಥಾ ಅಗರ್ವಾಲ್ ಅವರು ತರಬೇತಿ ಪಡೆದಿದ್ದು, ಈ ಸಂದರ್ಭದಲ್ಲಿನ ಅವರ ಕಠಿಣ ಪರಿಶ್ರಮವನ್ನು ಗುರುತಿಸಿರುವ ಫೇಸ್‌ಬುಕ್ ಅವರಿಗೆ ಉದ್ಯೋಗದ ಆಫರ್ ನೀಡಿದೆ ಎಂದು ಐಐಟಿ ಹೇಳಿದೆ.

IIT-Bombay girl bags Rs 2 crore package from Facebook

8ನೇ ಸೆಮಿಸ್ಟರ್ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ಉದ್ಯೋಗಕ್ಕೆ ಸೇರಿಕೊಳ್ಳುತ್ತೇನೆ. ಫೇಸ್ ಬುಕ್ ಆಫರ್ ನಿಂದ ತುಂಬಾ ಖುಷಿಯಾಗಿದೆ ಎಂದು ಜೈಪುರ ಮೂಲದ ಐಐಟಿ ಬಿ ವಿದ್ಯಾರ್ಥಿನಿ ಆಸ್ಥಾ ಪ್ರತಿಕ್ರಿಯಿಸಿದ್ದಾಳೆ.

ಸದ್ಯ ಜೈಪುರದ ನಿವಾಸದಲ್ಲಿ ನೆಲೆಸಿರುವ ಆಸ್ಥಾ ಅಗರ್ವಾಲ್ ಅವರ ಪರೀಕ್ಷೆಗಳು ಮುಂದಿನ ವರ್ಷದ ಅಕ್ಟೋಬರ್‌ನಲ್ಲಿ ಪೂರ್ಣಗೊಳ್ಳಲಿದ್ದು, ಅದೇ ತಿಂಗಳಿನಲ್ಲಿ ಉದ್ಯೋಗಕ್ಕೆ ಸೇರುವುದಾಗಿ ಅವರು ಹೇಳಿದ್ದಾರೆ.

ಆಸ್ಥಾ ಅಗರ್ವಾಲ್ ಅವರ ತಂದೆ ಅಶೋಕ್ ಅಗರ್ವಾಲ್ ಅವರು ರಾಜಸ್ಥಾನ ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಹಿರಿಯ ಕಾರ್ಯಕಾರಿ ಇಂಜಿನಿಯರ್ ಆಗಿದ್ದಾರೆ. ಆಸ್ಥಾ ಅವರ ಹಿರಿಯ ಸಹೋದರಿ ಕೂಡ ರಾಸಾಯನಿಕ ಇಂಜಿನಿಯರ್ ಆಗಿದ್ದಾರೆ. ಚಿಕ್ಕವಯಸ್ಸಿನಿಂದಲೂ ಓದಿನಲ್ಲಿ ತುಂಬಾ ಆಸಕ್ತಿ ಹೊಂದಿರುವ ಆಸ್ಥಾ ರಾಷ್ಟ್ರೀಯ ಮಟ್ಟ ಶಾಲಾ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ 7 ಶ್ರೇಯಾಂಕ ಗಳಿಸಿದ್ದರು ಜೊತೆಗೆ ಅಂತಾರಾಷ್ಟ್ರೀಯ ಕಿರಿಯರ ವಿಜ್ಞಾನ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದರು.

ಐಐಟಿ ಆಫರ್ ರಿಜೆಕ್ಟ್: ಈ ನಡುವೆ ಐಐಟಿ ಖಾನ್ ಪುರದ ವಿದ್ಯಾರ್ಥಿಯೊಬ್ಬ 1 ಕೋಟಿ ಸಂಬಳದ ಆಫರ್ ರಿಜೆಕ್ಟ್ ಮಾಡಿದ ಬೆನ್ನಲ್ಲೇ ಐಐಟಿ ದೆಹಲಿ ವಿದ್ಯಾರ್ಥಿಗಳು 76.25 ಲಕ್ಷ ರು ಸಂಬಳದ ಪ್ಯಾಕೇಜ್ ಒಪ್ಪಿಕೊಳ್ಳಲು ನಿರಾಕರಿಸಿದ ವರದಿಗಳು ಬಂದಿವೆ. (ಪಿಟಿಐ).

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+