ದಾಬೋಲ್ಕರ್ ಹತ್ಯೆ ಭಯೋತ್ಪಾದನೆ ಕೃತ್ಯ: ಸಿಬಿಐ
ಮುಂಬೈ, ನವೆಂಬರ್ 13: ವಿಚಾರವಾದಿ ನರೇಂದ್ರ ದಾಬೋಲ್ಕರ್ ಅವರ ಹತ್ಯೆಯೊಂದು ಭಯೋತ್ಪಾದನೆಯ ಕೃತ್ಯ ಎಂದು ಸಿಬಿಐ ಅಭಿಪ್ರಾಯ ಪಟ್ಟಿದೆ.
ದಾಬೋಲ್ಕರ್ ಅವರನ್ನು ಹತ್ಯೆ ಮಾಡಿದವರ ಮೇಲೆ ಭಯೋತ್ಪಾದಕರ ಮೇಲೆ ಹೊರಿಸುವ ಸೆಕ್ಷನ್ (ಅನ್ ಲಾಫುಲ್ ಆಕ್ಟಿವಿಟೀಸ್ ಪ್ರಿವೆನ್ಷನ್ ಆಕ್ಟ್) ಅನ್ನು ಕೇಂದ್ರೀಯ ತನಿಖಾ ದಳ ಹೊರಿಸಿದೆ. ಆ ಮೂಲಕ ದಾಬೋಲ್ಕರ್ ಹತ್ಯೆ ಭಯೋತ್ಪಾದನೆ ಕೃತ್ಯ ಎಂದು ಅದು ಕರೆದಿದೆ.
ದಾಬೋಲ್ಕರ್ ಹತ್ಯೆ ದೊಡ್ಡ ಸಂಚೊಂದರ ಮೊದಲ ಯತ್ನ ಎಂದು ಸಿಬಿಐ ಕರೆದಿದೆ. ಸಿಬಿಐ ಪ್ರಕಾರ ಹಲವು ಮಂದಿ ಒಬ್ಬರಿಗೊಬ್ಬರು ಸಹಾಯ ಮಾಡಿ ಉದ್ದೇಶ ಸಾಧನೆಗಾಗಿ ದಾಬೋಲ್ಕರ್ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಿದೆ.

ದಾಬೋಲ್ಕರ್ ಅವರ ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಕಲಾಸ್ಕರ್ ನೀಡಿರುವ ಹೇಳಿಕೆ ಪ್ರಕಾರ ಆತ ಅದಕ್ಕೂ ಮುಂಚೆ ದಾಬೋಲ್ಕರ್ ಅವರನ್ನು ನೋಡಿಯೇ ಇರಲಿಲ್ಲವಂತೆ. ಹತ್ಯೆ ಆದ ಆಗಸ್ಟ್ 20 ರ ದಿನವೇ ಆತ ದಾಬೋಲ್ಕರ್ ಅವರನ್ನು ನೋಡಿದ್ದಂತೆ.
ದಾಬೋಲ್ಕರ್ ಅವರ ಸನಾತನ ಸಂಸ್ಥಾದ ಪತ್ರಿಕೆಗಳಲ್ಲಿ ಅವರ ಬಗ್ಗೆ ವರದಿಗಳನ್ನು ಓದಿದ್ದೆನು ಹೊರತು ಅವರ ಬಗ್ಗೆ ನನಗೆ ಗೊತ್ತಿರಲಿಲ್ಲ. ದಾಬೋಲ್ಕರ್ ಅವರು ಆಗಸ್ಟ್ 20 ರಂದು ವಾಕಿಂಗ್ ಮಾಡಿ ಬರುವಾಗ ಅವರನ್ನು ಹಿಂಬಾಲಿಸಿಕೊಂಡು ಬಂದ ವ್ಯಕ್ತಿ ಅವರನ್ನು ತೋರಿಸಿದ ಎಂದು ಕಲಾಸ್ಕರ್ ಸಿಬಿಐಗೆ ನೀಡಿರುವ ಹೇಳಿಕೆಯಲ್ಲಿ ಹೇಳಿದ್ದಾನೆ.
ಸನಾತನ ಸಂಸ್ಥೆ ದಾಬೋಲ್ಕರ್ ಹತ್ಯೆ ಹಿಂದೆ ಎನ್ನಲಾಗುತ್ತಿದ್ದು, ಸಿಬಿಐ ಈಗ ದಾಬೋಲ್ಕರ್ ಹತ್ಯೆ ಆರೋಪಿಗಳ ಬೇಲೆ ಭಯೋತ್ಪಾದನೆ ಕೇಸು ದಾಖಲಿಸಿರುವ ಕಾರಣ ಸನಾತನ ಸಂಸ್ಥೆಯನ್ನು ಸಹ ಭಯೋತ್ಪಾದನಾ ಸಂಘಟನೆ ಎಂದು ಘೋಷಿಸುವ ಕೂಗು ಏಳುವ ಸಾಧ್ಯತೆ ಇದೆ.












Click it and Unblock the Notifications