ವಿಮಾನದ ಟಾಯ್ಲೆಟ್ ಸೀಟಿನಲ್ಲಿ 2 ಕೋಟಿ ಚಿನ್ನ

ದುಬೈನಿಂದ ಬರುತ್ತಿರುವ ವಿಮಾನದಲ್ಲಿ ಚಿನ್ನದ ಕಳ್ಳಸಾಗಣೆ ಆಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ Directorate of revenue intelligence (DRI) ಅಧಿಕಾರಿಗಳು ಕಾರ್ಯಾಚರಣೆಗಿಳಿದು ವಿಮಾನದ ವಾಷ್ ರೂಮಿನಲ್ಲಿ ಟಾಯ್ಲೆಟ್ ಸೀಟಿನಲ್ಲಿ ಅಡಗಿದ್ದ ಭಾರಿ ಮೊತ್ತದ ಚಿನ್ನವನ್ನು ಪತ್ತೆ ಹಚ್ಚಿದ್ದಾರೆ.
Air India ವಿಮಾನವು ದುಬೈನಿಂದ ನೇರವಾಗಿ ಬಂದಿಳಿಯುತ್ತಿದ್ದಂತೆ DRI ಅಧಿಕಾರಿಗಳಿಂದ ಭಾರಿ ಶೋದ ಕಾರ್ಯ ನಡೆಯಿತು. ಆ ವೇಳೆ ಟಾಯ್ಲೆಟ್ ಸೀಟಿನಲ್ಲಿ ಸುತ್ತಿಡಲಾಗಿದ್ದ ತಲಾ ಒಂದು ಕೆಜಿ ತೂಕದ ನಾಲ್ಕು ಚಿನ್ನದ ಬಾರ್ ಮತ್ತು ಅದೇ ಪ್ರಮಾಣದ ಮತ್ತೊಂದು ಪ್ಯಾಕ್ ಸಹ ಅದೇ ಜಾಗದಲ್ಲಿ ಪತ್ತೆಯಾಯಿತು. ( ಕಾಳಿಕಾಂಬ ದೇಗುಲದಲ್ಲಿ ಚಿನ್ನಾಭರಣ ದೋಚಿದ ಕಳ್ಳರು )
ಅನುಮಾನದ ಮೇರೆಗೆ ವಿಮಾನದಲ್ಲಿದ್ದ ಇಬ್ಬರು ಪ್ರಯಾಣಿಕರನ್ನು DRI ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರೇ ಈ ಚಿನ್ನವನ್ನು ಕದ್ದು ಸಾಗಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಹೆಚ್ಚಿನ ತನಿಖೆಯ ನಂತರ ಇಬ್ಬರನ್ನೂ ಬಂಧಿಸುವ ಸಾಧ್ಯತೆಯಿದೆ.
ದುಬೈನಿಂದ ಬಂದ Air India ವಿಮಾನವು ಮುಂಬೈ ಮೂಲಕ ಗೋವಾಕ್ಕೆ ತೆರಳಬೇಕಿತ್ತು. ಅಲ್ಲಿಂದ ಮತ್ತೆ ಮುಂಬೈಗೆ ಬಂದು ದಿಲ್ಲಿಗೆ ತೆರಳಬೇಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುಬೈನಿಂದ ಬಂದ ಮುಂಬೈಗೆ ಬಂದವರು ಚಿನ್ನವನ್ನು ಅಲ್ಲೇ ಬಿಟ್ಟು, ಗೋವಾ -ದಿಲ್ಲಿ ನಡುವಣ ದೇಶೀಯ ಪ್ರಯಾಣದಲ್ಲಿ ಬೇರೊಬ್ಬ ಪ್ರಯಾಣಿಕರು ಅದನ್ನು ಸಾಗಿಸುವ ಯೋಜನೆ ಹಾಕಿಕೊಂಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
Air India ಸಂಸ್ಥೆಯು ತನ್ನ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಯಾನವನ್ನು ಹೀಗೆ ಹೀಗೆ ಒಟ್ಟು ಮಾಡುವುದರಿಂದ ಚಿನ್ನದ ಕಳ್ಳಸಾಗಣೆದಾರರು ಅದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ ಎಂದು ಅಧಿಕಾರಿಗಳು ಸರಕಾರಿ ಸಂಸ್ಥೆಯ ಲೋಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications