ಗೌರಿ ಹತ್ಯೆ ಪ್ರಕರಣ: ಸನಾತನ ಸಂಸ್ಥೆಗೆ ನಿಷೇಧ?
ಮುಂಬೈ, ಆಗಸ್ಟ್ 28: 'ಅಗತ್ಯ ಬಂದರೆ ಸನಾತನ ಸಂಸ್ಥೆಯ ಮೇಲೆ ನಿಷೇಧ ಹೇರಲಾಗುವುದು' ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮತ್ತು ಡಾ.ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಗಳ ಆರೋಪಿಗಳು ಸನಾತನ ಸಂಸ್ಥೆ ಎಂಬ ಬಲಪಂಥೀಯಗ ಸಂಘಟನೆಗೆ ಸೇರಿದವರು ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಈ ಸಂಸ್ಥೆಯನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.ಅಕಸ್ಮಾತ್ ಆರೋಪ ಸಾಬೀತಾದಲ್ಲಿ ಸನಾತನ ಸಂಸ್ಥೆಯ ಮೇಲೆ ನಿಷೇಧ ಹೇರುವುದು ಗ್ಯಾರಂಟಿ ಎನ್ನಿಸಿದೆ.
ಅಗತ್ಯ ಬಂದಲ್ಲಿ ಈ ಸಂಘಟನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ರಾಮದಾಸ್ ಅಠಾವಳೆ ಹೇಳಿದ್ದಾರೆ.

ಗೌರಿ ಹತ್ಯೆಗೆ ಸಂಬಂಧಿಸಿದಂತೆ ಇದುವರೆಗೆ ಪರುಶುರಾಮ ವಾಘ್ಮೋರೆ, ಅಮೋಲ್ ಕಾಳೆ, ಅಮಿತ್ ದೇಗ್ವೇಕರ್, ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ, ಮನೋಹರ್ ಯಡವೆ, ಕೆ.ಟಿ. ನವೀನ್ ಕುಮಾರ್, ಮೋಹನ್ ನಾಯಕ್ ಸೇರಿದಂತೆ 12 ಜನರನ್ನು ಎಸ್ ಐಟಿ(ವಿಶೇಷ ತನಿಖಾ ದಳ) ತಂಡ ಬಂಧಿಸಿದೆ.












Click it and Unblock the Notifications