ಕೊವಿಡ್ ಸೋಂಕಿನಿಂದ ಸಚಿವ ಅಶೋಕ್ ಚವಾಣ್ ಗುಣಮುಖ

ಮುಂಬೈ, ಜೂನ್ 4: ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಹಾಲಿ ಕಾಂಗ್ರೆಸ್ ಸಚಿವ ಅಶೋಕ್ ಚವಾಣ್ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮನೆಗೆ ತೆರಳಿದ ಅಶೋಕ್ ಚವಾಣ್‌ಗೆ ಮನೆಯವರು ಆತ್ಮೀಯ ಸ್ವಾಗತ ಕೋರಿದ್ದಾರೆ.

ಅಶೋಕ್ ಚವಾಣ್ ಅವರಿಗೆ ಕೊರೊನಾ ವೈರಸ್ ರೋಗದ ಲಕ್ಷಣಗಳು ಕಂಡು ಬಂದಿರಲಿಲ್ಲ. ಆದರೂ ಮೇ 25 ರಂದು ಕೊವಿಡ್ ಪರೀಕ್ಷೆಗೆ ಒಳಪಟ್ಟಿದ್ದರು. ವರದಿ ಬಂದ ಬಳಿಕ ಸಚಿವರಿಗೆ ಸೋಂಕು ತಗುಲಿರುವುದು ದೃಢವಾಗಿದೆ.

Former Cm Ashok Chavan Who Was Tested Coronavirus Positive Discharged From Hospital

ಸೋಂಕು ಖಚಿತವಾದ ನಂತರ ಅಶೋಕ್ ಚವಾಣ್ ನಾಂದೇಡ್‌ನ ಆಸ್ಪತ್ರೆಗೆ ದಾಖಲಾಗಿದ್ದರು. ನಾಂದೇಡ್‌ ಜಿಲ್ಲೆಯ ಬೋಕರ್ ವಿಧಾನಸಭೆ ಕ್ಷೇತ್ರದಿಂದ ಶಾಸಕರಾದ ಅಶೋಕ್ ಚವಾಣ್ ಗುರವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇದಕ್ಕೂ ಮುಂಚೆ ರಾಜ್ಯ ವಸತಿ ಸಚಿವ ಮತ್ತು ಎನ್‌ಸಿಪಿ ಮುಖಂಡ ಜಿತೇಂದ್ರ ಅವಾದ್ ಸಹ ಕೊರೊನಾ ವೈರಸ್ ಗೆ ತುತ್ತಾಗಿದ್ದರು. ಬುಧವಾರದ ಅಂತ್ಯಕ್ಕೆ ಮಹಾರಾಷ್ಟ್ರದಲ್ಲಿ 74,860 ಜನರಿಗೆ ಕೊರೊನಾ ಸೋಂಕು ತಗುಲಿದೆ. ಈವರೆಗೂ ರಾಜ್ಯದಲ್ಲಿ 2587 ಜನರು ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+