ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಐಷಾರಾಮಿ ಹೋಟೆಲ್‌ಗಳಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ

|
Google Oneindia Kannada News

ಮುಂಬೈ, ಏಪ್ರಿಲ್ 15: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಮುಂಬೈ ನಗರದಲ್ಲಿಯೂ ಪ್ರಕರಣಗಳ ಸಂಖ್ಯೆ ಮುಂದಿದೆ. ಈಗಾಗಲೇ ಆಸ್ಪತ್ರೆಗಳ ಶೇ 80ರಷ್ಟು ಹಾಸಿಗೆಗಳು ಭರ್ತಿಯಾಗಿವೆ. ಹೀಗಾಗಿ ಕೊರೊನಾ ಸೋಂಕಿತರಿಗೆ ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆಗಳಿಗೆ ಬೃಹನ್ ಮುಂಬೈ ಮುನಿಸಿಪಾಲ್ ಕಾರ್ಪೊರೇಷನ್ (ಬಿಎಂಸಿ) ಅನುಮತಿ ನೀಡಿದೆ.

ಮೆರೀನ್ ಡ್ರೈವ್‌ನ ಇಂಟರ್ ಕಾಂಟಿನೆಂಟಲ್ ಹೋಟೆಲ್‌ ಹಾಗೂ ಬಾಂದ್ರಾ ಕರ್ಲ್ ಕಾಂಪ್ಲೆಕ್ಸ್‌ನ ಟ್ರೈಡೆಂಟ್ ಹೋಟೆಲ್‌ಗಳ ಬಳಕೆಗೆ ಬಿಎಂಸಿ ಅನುಮತಿ ನೀಡಿದೆ. ಕೊರೊನಾದಿಂದ ಗುಣಮುಖರಾಗುತ್ತಿರುವ ಹಾಗೂ ಗಂಭೀರ ಸಮಸ್ಯೆ ಇರದ ರೋಗಿಗಳನ್ನು ಹೋಟೆಲ್‌ಗಳ ಕೋವಿಡ್ ಕೇಂದ್ರಗಳಿಗೆ ದಾಖಲಿಸಲಿದ್ದು, ಗಂಭೀರ ರೋಗಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತದೆ. ಖಾಸಗಿ ಆಸ್ಪತ್ರೆಯ ವೈದ್ಯರು ಈ ಹೋಟೆಲ್‌ಗಳಲ್ಲಿ ಕೊರೊನಾ ರೋಗಿಗಳ ನಿಗಾ ವಹಿಸಲಿದ್ದಾರೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 58952 ಮಂದಿಗೆ ಕೊರೊನಾವೈರಸ್!ಮಹಾರಾಷ್ಟ್ರದಲ್ಲಿ ಒಂದೇ ದಿನ 58952 ಮಂದಿಗೆ ಕೊರೊನಾವೈರಸ್!

ಹೋಟೆಲ್‌ಗಳಲ್ಲಿ ರೋಗಿಗಳಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಮುಂದೆ ಕೊರೊನಾ ಸೋಂಕಿತರ ದಾಖಲಾತಿಗೆ ಮತ್ತಷ್ಟು ಹೋಟೆಲ್‌ಗಳನ್ನು ಬಳಸಿಕೊಳ್ಳಲು ಬಿಎಂಸಿ ಸೂಚಿಸಿದೆ.

Five Star Hotels In Mumbai To Be Used To Treat Covid Patients

"ಮುಂಬೈನ ಕೆಲವು ಪಂಚ ತಾರಾ ಹೋಟೆಲ್‌ಗಳನ್ನು ಕೊರೊನಾ ಆರೈಕೆ ಕೇಂದ್ರಗಳಾಗಿ ಮಾರ್ಪಾಡು ಮಾಡಲಾಗುತ್ತಿದೆ ಹಾಗೂ ಮೂರು ಬೃಹತ್ ಆಸ್ಪತ್ರೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ" ಎಂದು ಬಿಎಂಸಿ ಮುಖ್ಯಸ್ಥ ಇಕ್ಬಾಲ್ ಸಿಂಗ್ ಚಾಹಲ್ ತಿಳಿಸಿದ್ದಾರೆ.

ಕೊರೊನಾ ರೋಗಿಗಳಿಗೆ ದಿನಕ್ಕೆ 4 ಸಾವಿರ ರೂಪಾಯಿ ಶುಲ್ಕವನ್ನು ವಿಧಿಸಲಾಗಿದೆ.

ಬುಧವಾರ ಮುಂಬೈ ನಗರದಲ್ಲಿ 9931 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ನಗರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 5,45,195ಕ್ಕೆ ಏರಿಕೆಯಾಗಿದ್ದು, ಈ ಬೆನ್ನಲ್ಲೇ ಹೋಟೆಲ್‌ಗಳ ಬಳಕೆಗೆ ಅನುಮತಿ ನೀಡಲಾಗಿದೆ.

English summary
Mumbai hospitals will use luxury hotels to treat COVID-19 patients with milder infection, says BMC,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X