''ಐವರು ಶಾಸಕರು ವಾಪಸ್'': ಮಹಾರಾಷ್ಟ್ರ ಸರ್ಕಾರ ಅಲ್ಪಾಯುಶಿಯೇ?

ಮುಂಬೈ, ನವೆಂಬರ್ 23: ತರಾತುರಿಯಲ್ಲಿ ರಚನೆಯಾಗಿರುವ ಬಿಜೆಪಿ ಮತ್ತು ಎನ್‌ಸಿಪಿ ಬಂಡಾಯ ಶಾಸಕರ ಮಹಾರಾಷ್ಟ್ರ ಸರ್ಕಾರ ಎದ್ದಷ್ಟೇ ವೇಗವಾಗಿ ಕೆಳಗೆ ಬೀಳಲಿದೆಯೇ? ಈ ರೀತಿಯ ಅನುಮಾನವೊಂದು ಮಧ್ಯಾಹ್ನದ ಮೇಲೆ ಉಂಟಾಗಿದೆ.

ಎನ್‌ಸಿಪಿ ಮುಖಂಡ ಶರದ್ ಪವಾರ್, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಜಂಟಿ ಸುದ್ದಿಗೋಷ್ಠಿ ಮಾಡಿದ ನಂತರ ಈ ರೀತಿಯ ಅನುಮಾನವೊಂದು ರಾಷ್ಟ್ರ ರಾಜಕಾರಣದಲ್ಲಿ ಎದ್ದಿದೆ. ಶಿವಸೇನಾ ಮುಖಂಡ ಸಂಜಯ್ ರಾವತ್ ನೀಡಿರುವ ಹೇಳಿಕೆ ಸಹ ಸರ್ಕಾರ ಉರುಳುವ ಅನುಮಾನವನ್ನು ದಟ್ಟವಾಗಿಸಿದೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂಜಯ್ ರಾವತ್, 'ಅಜಿತ್ ಪವಾರ್ ಜೊತೆ ಹೋಗಿದ್ದ ಐದು ಶಾಸಕರು ಈಗಾಗಲೇ ಎನ್‌ಸಿಪಿ ಗೆ ವಾಪಸ್ ಬಂದಿದ್ದಾರೆ' ಎಂದಿದ್ದಾರೆ. 'ಅಜಿತ್ ಪವಾರ್ ಅವರೇ ಎನ್‌ಸಿಪಿ ಗೆ ವಾಪಸ್ ಆಗುವ ಸಂಭವ ಇದೆ' ಎಂದೂ ಅವರು ಹೇಳಿದ್ದಾರೆ.

ಅಜಿತ್ ಪವಾರ್ ಅನ್ನು ಬ್ಲಾಕ್ ಮೇಲ್ ಮಾಡಲಾಗಿದೆ: ರಾವತ್

ಅಜಿತ್ ಪವಾರ್ ಅನ್ನು ಬ್ಲಾಕ್ ಮೇಲ್ ಮಾಡಲಾಗಿದೆ: ರಾವತ್

'ಧನಂಜಯ್ ಮುಂಡೆ ಜೊತೆಗೆ ನಾವು ಸಂಪರ್ಕದಲ್ಲಿದ್ದೇವೆ, ಅಜಿತ್ ಪವಾರ್ ಸಹ ಎನ್‌ಸಿಪಿ ಗೆ ವಾಪಸ್ ಬರುವ ಸಂಭವ ಇದೆ, ಅಜಿತ್ ಪವಾರ್ ಅವರನ್ನು ಬ್ಲಾಕ್‌ಮೇಲ್ ಮಾಡಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಹೊರಗೆ ಹಾಕುತ್ತೇವೆ' ಎಂದು ರಾವ್ ಹೇಳಿದ್ದಾರೆ.

'ಎನ್‌ಸಿಪಿ ಶಾಸಕರನ್ನು ಅಪಹರಣ ಮಾಡಿ ಕರೆದೊಯ್ಯಲಾಗಿತ್ತು'

'ಎನ್‌ಸಿಪಿ ಶಾಸಕರನ್ನು ಅಪಹರಣ ಮಾಡಿ ಕರೆದೊಯ್ಯಲಾಗಿತ್ತು'

ಎನ್‌ಸಿಪಿ ಶಾಸಕರನ್ನು ಅಪಹರಣ ಮಾಡಿ ರಾಜಭವನಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ಹೇಳಿದ ಸಂಜಯ್ ರಾವತ್, ಈಗಾಗಲೇ ಐವರು ಶಾಸಕರು ವಾಪಸ್ ಬಂದಿದ್ದಾರೆ. ಇನ್ನೂ ಕೆಲವು ಶಾಸಕರು ವಾಪಸ್ ಬರುವವರಿದ್ದಾರೆ ಎಂದರು.

ನಾವು ಸರ್ಕಾರ ರಚಿಸುತ್ತೇವೆ: ಶರದ್ ಪವಾರ್

ನಾವು ಸರ್ಕಾರ ರಚಿಸುತ್ತೇವೆ: ಶರದ್ ಪವಾರ್

ಶರದ್ ಪವಾರ್ ಸಹ ಇದೇ ಮಾತುಗಳನ್ನು ಹೇಳಿದ್ದು, ಬಹುಮತ ಸಾಬೀತಿಗೆ ನವೆಂಬರ್ 30 ರವರೆಗೆ ಅವಕಾಶ ನೀಡಲಾಗಿದೆ. ಬಹುಮತ ಸಾಬೀತು ಪಡಿಸಲು ಬಿಜೆಪಿ ವಿಫಲವಾಗುತ್ತದೆ. ಆಗ ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಅಜಿತ್ ಪವಾರ್ ಸಹ ವಾಪಸ್ ಬರಬಹುದು: ರಾವತ್

ಅಜಿತ್ ಪವಾರ್ ಸಹ ವಾಪಸ್ ಬರಬಹುದು: ರಾವತ್

'ಎಂಟು ಜನ ಶಾಸಕರು ಅಜಿತ್ ಪವಾರ್ ಜೊತೆ ಹೋಗಿದ್ದರು ಅವರಲ್ಲಿ ಐದು ಮಂದಿ ವಾಪಸ್ ಬಂದಿದ್ದಾರೆ. ಆ ಶಾಸಕರನ್ನು ಬಲವಂತದಿಂದ ವಾಹನದಲ್ಲಿ ಕುಳ್ಳರಿಸಿಕೊಂಡು ಕರೆದುಕೊಂಡು ಹೋಗಲಾಗಿತ್ತು. ಅವರಿಗೆ ಧೈರ್ಯವಿದ್ದರೆ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಲಿ ಎಂದು ಸಂಜಯ್ ರಾವತ್ ಸವಾಲು ಹಾಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+