ಮುಂಬೈನ ಕಂಡಿವಲಿ ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ

Posted By:
Subscribe to Oneindia Kannada

ಮುಂಬೈ, ಸೆ. 15: ಇಲ್ಲಿನ ಕಂಡಿವಲಿಯಲ್ಲಿರುವ ಬಹು ಮಹಡಿ ಕಟ್ಟಡದಲ್ಲಿ ಗುರುವಾರ ಮಧ್ಯಾಹ್ನ ಭಾರಿ ಬೆಂಕಿ ಆಕಸ್ಮಿಕ ಸಂಭವಿಸಿದೆ.

ಕಂಡಿವಲಿಯ ಎಸ್ ವಿ ರಸ್ತೆಯಲ್ಲಿರುವ ಹಿರಾನಂದನಿ ಟವರ್ಸ್ ನ 32ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಘಟನಾ ಸ್ಥಳಕ್ಕೆ 8 ಅಗ್ನಿಶಾಮಕದಳ ವಾಹನಗಳು, 2 ಆಂಬ್ಯುಲೆನ್ಸ್ ಹಾಗೂ 3 ವಾಟರ್ ಟ್ಯಾಂಕರ್ ಗಳು ಬಂದಿವೆ. ತಕ್ಷಣಕ್ಕೆ ಯಾವುದೇ ಪ್ರಾಣಹಾನಿ ಬಗ್ಗೆ ಮಾಹಿತಿ ಸಿಕ್ಕಿಲ್ಲ.

Fire breaks out at Hiranandani Tower in Mumbai

ಅಗ್ನಿಶಾಮಕದಳದ ಮುಖ್ಯ ಅಧಿಕಾರಿ ಪಿ ರಹಾಂಗ್ದಲೆ ಅವರು ಮಾತನಾಡಿ, ಕಟ್ಟಡದ ಟಾಪ್ ಮೋಸ್ಟ್ ಮಹಡಿಯಲ್ಲಿ ಬೆಂಕಿ ಹತ್ತಿಕೊಂಡಿದ್ದು, 90 ಮೀಟರ್ ಏಣಿಯನ್ನು ಬಳಸಿ ಬೆಂಕಿಯ ತೀವ್ರತೆ ಕಡಿಮೆಗೊಳಿಸಲು ಯತ್ನಿಸಲಾಗುತ್ತಿದೆ.


ಸದ್ಯಕ್ಕೆ 32ನೇ ಮಹಡಿಯಲ್ಲಿ ಮಾತ್ರ ಬೆಂಕಿ ಕಾಣಿಸಿಕೊಂಡಿದ್ದು, ಉಳಿದ ಮಹಡಿಗಳಿಗೆ ವ್ಯಾಪಿಸಿಲ್ಲ ಎಂದಿದ್ದಾರೆ.

ಬೆಂಕಿ ಆಕಸ್ಮಿಕಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಸದ್ಯಕ್ಕೆ ಕಟ್ಟಡದಲ್ಲಿದ್ದ ಎಲ್ಲರನ್ನು ಹೊರಕ್ಕೆ ಕಳಿಸಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Fire breaks out at 32nd floor of Hiranandani Tower in Mumbai. . 8 fire engines, 2 ambulances and 3 water tankers have been rushed to the site by the city's fire brigade. No casualty is reported so far.
Please Wait while comments are loading...