• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್‌ ಡೌನ್ ರೂಲ್ಸ್ ಬ್ರೇಕ್: ಪೂನಂ ಪಾಂಡೆ ವಿರುದ್ಧ ಎಫ್‌ ಐ ಆರ್

|

ಮುಂಬೈ, ಮೇ 11: ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿದ್ದ ಹಿನ್ನಲೆ, ಬಾಲಿವುಡ್ ನಟಿ ಪೂನಂ ಪಾಂಡೆ ವಿರುದ್ಧ ಮುಂಬೈ ಮರೀನ್ ಡ್ರೈವ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಬೈನಲ್ಲಿ ಕೊರೊನಾ ಕೇಸ್‌ಗಳ ಸಂಖ್ಯೆ ಹೆಚ್ಚಾಗುತ್ತಲೇ ಇರುವ ಕಾರಣ ಕಠಿಣವಾಗಿ ಲಾಕ್‌ಡೌನ್ ವಿಧಿಸಲಾಗಿದೆ. ಅನಗತ್ಯ ಓಡಾಟಕ್ಕೆ ಪೊಲೀಸರು ನಿರ್ಬಂಧ ಏರಿದ್ದಾರೆ. ಆದರೆ, ಪೂನಾಂ ಪಾಂಡೆ ತನ್ನ ಸ್ನೇಹಿತನ ಜೊತೆಗೆ ಐಶಾರಾಮಿ ಕಾರ್‌ನಲ್ಲಿ ತಿರುಗಾಟ ನಡೆಸಿದ್ದರು.

ತನ್ನ ಎದೆಯೊಳಗಿಂದ ಟೀಕಪ್ ತೆಗೆದು ಪಾಕಿಸ್ತಾನಕ್ಕೆ ಕೊಟ್ಟ ಪೂನಂ ಪಾಂಡೆ

ಸೂಕ್ತ ಕಾರಣ ಇಲ್ಲದೆ ಅನಗತ್ಯವಾಗಿ ಕಾರ್‌ನಲ್ಲಿ ಸುತ್ತಾಟ ನಡೆಸಿದ ಪೂನಾ ಪಾಂಡೆ ಹಾಗೂ ಸ್ಯಾಮ್ ಅಹ್ಮದ್ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮೃತ್ಯುಂಜಯ್ ಹಿರೇಮಠ್ ಮಾಹಿತಿ ನೀಡಿದ್ದಾರೆ.

ಸೆಕ್ಷನ್ 269 (ಜೀವಕ್ಕೆ ಅಪಾಯ ತರುವ ರೋಗದ ಸೋಂಕನ್ನು ಹರಡುವ ನಿರ್ಲಕ್ಷ್ಯದ ಕ್ರಿಯೆ) ಮತ್ತು 188 (ಅಸಹಕಾರ) ಭಾರತೀಯ ದಂಡ ಸಂಹಿತೆಯ ಮತ್ತು ರಾಷ್ಟ್ರೀಯ ವಿಪತ್ತು ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಟಿ ಪೂನಂ ಪಾಂಡೆ ಮತ್ತು ಸ್ಯಾಮ್ ಅಹ್ಮದ್ ವಿರುದ್ಧ ಪ್ರಕರಣ ದಾಖಲು ಮಾಡಿರುವ ಪೊಲೀಸರು ಕಾರ್‌ ಅನ್ನು ವಶಕ್ಕೆ ಪಡೆದಿದ್ದಾರೆ.

ಅಂದಹಾಗೆ, ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 22171 ಏರಿಕೆಯಾಗಿದೆ. 832 ಮಂದಿ ಮರಣ ಹೊಂದಿದ್ದಾರೆ.

English summary
FIR has been registered against Poonam Pandey for violating the lockdown rules in Mumbai’s Marine Drive police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X