ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಭ್ರಷ್ಟಚಾರಕ್ಕೆ ನೊಂದು ಬಿಜೆಪಿ ತೊರೆದ ಮಹಾರಾಷ್ಟ್ರ ಶಾಸಕ

|
Google Oneindia Kannada News

ಮುಂಬೈ, ಅಕ್ಟೋಬರ್ 04: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಒಂದು ದಿನದ ನಂತರ ಮಹಾರಾಷ್ಟ್ರದ ಬಿಜೆಪಿ ಶಾಸಕ ಆಶಿಶ್ ದೇಶಮುಖ್ ಬಿಜೆಪಿಗೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದಾರೆ.

ತಮ್ಮ ರಾಜೀನಾಮೆ ಪತ್ರವನ್ನು ವಿಧಾನಸಭಾಧ್ಯಕ್ಷರಿಗೆ ಬುಧವಾರದಂದು ತಲುಪಿಸಿರುವುದಾಗಿ ಹೇಳಿದ ಅವರು, ತಮ್ಮ ಮುಂದಿನ ನಿರ್ಧಾರವನ್ನು ಇದುವರೆಗೂ ಪ್ರಕಟಿಸಿಲ್ಲ.

ರಫೇಲ್ ವಿಮಾನ ಖರೀದಿ ಪರವಾಗಿ ವಾಯುಸೇನೆ ಮುಖ್ಯಸ್ಥರು ಹೇಳಿದ್ದೇನು?ರಫೇಲ್ ವಿಮಾನ ಖರೀದಿ ಪರವಾಗಿ ವಾಯುಸೇನೆ ಮುಖ್ಯಸ್ಥರು ಹೇಳಿದ್ದೇನು?

ಮಹಾರಾಷ್ಟ್ರದ ವಿದರ್ಭದ ಕಾಟೋಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ದೇಶಮುಖ್, ರಫೇಲ್ ಡೀಲ್ ನಲ್ಲಿ ಬಿಜೆಪಿ ನಡೆಸಿದ ಭ್ರಷ್ಟಾಚಾರಕ್ಕೆ ಮನನೊಂದು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

Fed up over corruption in Rafale deal: Maharashtra BJP MLA resigns

"ಬಿಜೆಪಿಯ ಬಹುಮುಖ್ಯ ಯೋಜನೆಗಳಾದ 'ಮೇಕ್ ಇನ್ ಇಂಡಿಯಾ', 'ಮ್ಯಾಗ್ನೆಟಿಕ್ ಮಹಾರಾಷ್ಟ್ರ', 'ಸ್ಕಿಲ್ ಇಂಡಿಯಾ' ಯೋಜನೆಗಳಿಂದ ದೇಶಕ್ಕೆ ಯಾವುದೇ ರೀತಿಯ ಉಪಯೋಗವಾಗುತ್ತಿಲ್ಲ" ಎಂದು ಅವರು ದೂರಿದರು.

ರಫೇಲ್ ಡಿಲ್ ನಲ್ಲಿ ಮೆಘಾ ಭ್ರಷ್ಟಾವಾರ ನಡೆದಿದೆ. ಇವೆಲ್ಲವನ್ನೂ ಸಹಿಸಿಕೊಂಡಿರಲು ಸಾಧ್ಯವಿಲ್ಲದೆ ತಾವು ಬಿಜೆಪಿಗೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದರು.

'9% ಕಡಿಮೆ ಮೊತ್ತಕ್ಕೆ ಸಿಕ್ಕರೂ 126ರ ಬದಲು 36 ವಿಮಾನ ಮಾತ್ರ ಏಕೆ?''9% ಕಡಿಮೆ ಮೊತ್ತಕ್ಕೆ ಸಿಕ್ಕರೂ 126ರ ಬದಲು 36 ವಿಮಾನ ಮಾತ್ರ ಏಕೆ?'

ಇತ್ತೀಚೆಗಷ್ಟೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, 'ಯುವ ಜನರು ರಾಹುಲ್ ಗಾಂಧಿ ಅವರಿಂದ ಸಾಕಷ್ಟು ನಿರೀಕ್ಷೆ ಮಾಡುತ್ತಿದ್ದಾರೆ. ಅವರ ನಾಯಕತ್ವದ ಬಗ್ಗೆ ನನಗೆ ಹೆಮ್ಮೆ ಇದೆ' ಎಂದರು.

ನಾಲ್ಕು ವರ್ಷಗಳ ಹಿಂದಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದ ದೇಶಮುಖ್ ಮತ್ತೆ ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಮೋದಿಯನ್ನು ‌ಪವಾರ್ ಬೆಂಬಲಿಸಿದ್ದಕ್ಕೆ ಸಿಟ್ಟಿಗೆದ್ದು ಪಕ್ಷ ತೊರೆದ ಸಂಸದಮೋದಿಯನ್ನು ‌ಪವಾರ್ ಬೆಂಬಲಿಸಿದ್ದಕ್ಕೆ ಸಿಟ್ಟಿಗೆದ್ದು ಪಕ್ಷ ತೊರೆದ ಸಂಸದ

ಆದರೆ ದೇಶಮುಖ್ ಅವರ ರಾಜೀನಾಮೆಯನ್ನು ಬಿಜೆಪಿ ಇನ್ನೂ ಅಂಗೀಕರಿಸಿಲ್ಲ. ಮುಮದಿನ ತಿಮಗಳು ನಡೆಯಲಿರುವ ಚಲಿಗಾಲದ ಅಧಿವೇಶನದ ಸಮಯದಲ್ಲಿ ಉಪಚುನಾವಣೆ ನಡೆಯುವುದನ್ನು ತಪ್ಪಿಸುವ ಸಲುವಾಗಿ ಬಿಜೆಪಿ ರಾಜೀನಾಮೆಯನ್ನು ಅಂಗೀಕರಿಸಿಲ್ಲ ಎನ್ನಲಾಗಿದೆ.

English summary
BJP MLA from Katol constituency in Maharashta Ashish Deshmukh submits his resignation to BJP. He said that, he is fed up over BJP's corruption in Rafale deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X